ಅಮೆರಿಕದಲ್ಲಿ ಅತೀ ಹೆಚ್ಚು ಮಾತನಾಡುವ ಭಾರತೀಯ ಭಾಷೆ 'ಹಿಂದಿ'

ನ್ಯೂಯಾರ್ಕ್, ಸೆಪ್ಟೆಂಬರ್ 21: ಅಮೆರಿಕದಲ್ಲಿ ಅತೀ ಹೆಚ್ಚು ಜನರು ಮಾತನಾಡುವ ಭಾರತೀಯ ಭಾಷೆಯಗಳಲ್ಲಿ ಹಿಂದಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ನಂತರದ ಸ್ಥಾನಗಳನ್ನು ಗುಜರಾತಿ ಮತ್ತು ತೆಲುಗು ಭಾಷೆಗಳು ಪಡೆದುಕೊಂಡಿವೆ.

ಅಮೆರಿಕನ್ ಕಮ್ಯುನಿಟಿ ಸರ್ವೆ ಡಾಟಾ(ಎಸಿಎಸ್) ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ 2017 ರ ಯುಎಸ್ ಸೆನ್ಸಸ್ ಬ್ಯೂರೊ ಪ್ರಕಾರ ಶೇ.21.8 ರಷ್ಟು ಅಮೆರಿಕ ನಿವಾಸಿಗಳು ಇಂಗ್ಲಿಷ್ ಗೆ ಹೊರತಾದ ಬೇರೆ ಭಾಷೆಯನ್ನು ಮಾತನಾಡುತ್ತಾರೆ.

ಒಟ್ಟು 30.5 ಕೋಟಿ ಜನಸಂಖ್ಯೆಯ ಅಮೆರಿಕದಲ್ಲಿ 6.7 ಕೋಟಿಯಷ್ಟು ಜನರು ವಿದೇಶಿ ಭಾಷೆಯನ್ನು ಮಾತನಾಡುತ್ತಾರೆ. ಇದರಲ್ಲಿ 8.63 ಲಕ್ಷ ಜನ ಹಿಂದಿ ಭಾಷೆಯನ್ನು ಮಾತನಾಡಿದರೆ, ಗುಜರಾತಿ ಭಾಷೆಯನ್ನು 4.34 ಲಕ್ಷ ಮತ್ತು ತೆಲುಗು ಭಾಷೆಯನ್ನು 4.15 ಲಕ್ಷ ಜನ ಮಾತನಾಡುತ್ತಾರೆ. ಬೆಂಗಾಲಿ, ತಮಿಳು ಭಾಷೆಗಳು ಅಗ್ರ ಮೂರು ಸ್ಥಾನದಲ್ಲಿಲ್ಲ. ಜೊತೆಗೆ ಕನ್ನಡ ಭಾಷೆಯನ್ನು ಮಾತನಾಡುವವರ ಸಂಖ್ಯೆ ಎಷ್ಟು ಎಂಬ ಬಗ್ಗೆಯೂ ಇರಲ್ಲಿ ಮಾಹಿತಿ ಇಲ್ಲ.

Hindi is the most spoken Indian language in US

ಆಂಧ್ರಪ್ರದೇಶದಿಂದ ಅಮೆರಿಕಕ್ಕೆ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಲಸೆ ಬಂದಿರುವುದರಿಂದ ಮತ್ತು ಇವರು H-1B ವೀಸಾ ಪಡೆದಿರುವುದರಿಂದ ತೆಲುಗು ಜನಸಂಖ್ಯೆಯೂ ಹೆಚ್ಚಿದೆ. ಜೊತೆಗೆ ತೆಲುಗು ಭಾಷಿಕರ ಸಂಖ್ಯೆಯೂ ಹೆಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+