ಶಾಲೆಯಲ್ಲಿ ಗುಂಡಿಟ್ಟು ಇಬ್ಬರ ಸಾಯಿಸಿದ ವಿದ್ಯಾರ್ಥಿ

 High-school student kills two in Moscow school hostage crisis arrested
ಮಾಸ್ಕೊ, ಫೆ.3: ಅವನಿನ್ನೂ ಹೈಸ್ಕೂಲು ವಿದ್ಯಾರ್ಥಿ. ಆದರೆ ಅವನಿಗೆ ಅದೇನು ತಿಕ್ಕಲು ರೇಗಿತೋ ತನ್ನ ಶಾಲೆಗೆ ನುಗ್ಗಿದವನೆ ಮನಬಂದಂತೆ ಗುಂಡುಹಾರಿಸಿ, ಇಬ್ಬರನ್ನು ಸಾಯಿಸಿ, ಶಾಲೆಯಲ್ಲಿ ಉಳಿದ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿಟ್ಟುಕೊಂಡು ಅಟ್ಟಹಾಸ ಮೆರೆದಿದ್ದಾನೆ.

ಶಿಕ್ಷಕಿ ಮತ್ತು ಪೊಲೀಸ್ ಅಧಿಕಾರಿ ದಾಳಿಕೋರ ವಿದ್ಯಾರ್ಥಿಯ ಗುಂಡಿಗೆ ಬಲಿಯಾದವರು. ಒಳಗಡೆಯಿದ್ದ ಸುಮಾರು 20 ವಿದ್ಯಾರ್ಥಿಗಳತ್ತ ತನ್ನ ರೈಫಲ್ ಝಳಪಿಸುತ್ತಾ ಅವರನ್ನು ಒತ್ತೆಯಾಳುಗಳನ್ನಾಗಿಟ್ಟುಕೊಂಡಿದ್ದಾನೆ. ಕೊನೆಗೆ, ಪೊಲೀಸರು ಅವನನ್ನು ಶಸ್ತ್ರರಹಿತನನ್ನಾಗಿಸಿ ಬಂಧಿಸಿದ್ದಾರೆ. ರಷ್ಯಾದಲ್ಲಿ ಸದ್ಯದಲ್ಲೇ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದ್ದು, ಪೊಲೀಸರು ಈ ಘಟನೆಯ ಬಳಿಕೆ ಹೆಚ್ಚು ಜಾಗ್ರತೆ ವಹಿಸತೊಡಗಿದ್ದಾರೆ.

ರಷ್ಯಾದ ಶಾಲೆಗಳಲ್ಲಿ ಇಂತಹ ಪ್ರಕರಣಗಳು ನಡೆಯುವುದು ವಿರಳ. ಆದರೆ ಇಂದು ಸೋಮವಾರ ಮಾಸ್ಕೋದ ಉತ್ತರ ಭಾಗದಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದೆ. ಆ ವೇಳೆ ಶಾಲೆಯಲ್ಲಿ ಜೀವಶಾಸ್ತ್ರ ತರಗತಿ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ದಾಳಿಕೋರ ಇದೇ ಶಾಲೆಯ ಹಿರಿಯ ವಿದ್ಯಾರ್ಥಿ. ರಷ್ಯಾದ ಶಾಲೆಯ ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲ ಜನ ಘಟನೆ ನಡೆದಾಗ ಭಯಬೀತರಾಗಿ ಓಡಿದ್ದಾರೆ. ಹಿಮಚ್ಛಾದಿತ ಶಾಲೆಯ ಮೇಲೆ ಹೆಲಿಕಾಪ್ಟರ್ ಇಳಿಸಿಕೊಂಡು ರಕ್ಷಣಾ ಕಾರ್ಯಕ್ಕೆ ಇಳಿದ ಭದ್ರತಾ ಸಿಬ್ಬಂದಿ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+