Israel: ಇಸ್ರೇಲ್ ವಿರುದ್ಧ ಮತ್ತೆ ಹೋರಾಡುತ್ತೇವೆ ಅಂತಿದೆ ಹಿಜ್ಬುಲ್ಲಾ!
ಹಿಜ್ಬುಲ್ಲಾ ವಿರುದ್ಧ ಘೋರ ದಾಳಿ ನಡೆಸುತ್ತಿರುವ ಇಸ್ರೇಲ್ ಸೇನೆ ಶತ್ರುಗಳ ನಾಶಕ್ಕೆ ಪಣತೊಟ್ಟು ನಿಂತಿದೆ. ಅಲ್ಲದೆ ಹಿಜ್ಬುಲ್ಲಾ ಬಂಡುಕೋರರು ನಮ್ಮೆದುರು ಶರಣಾಗಬೇಕು ಎಂಬ ಡಿಮ್ಯಾಂಡ್ ಕೂಡ ಇಸ್ರೇಲ್ ಇಟ್ಟಿದೆ. ಈ ಕಾರಣಕ್ಕೆ ಈಗಾಗಲೇ ಇಸ್ರೇಲ್ ಸೇನೆ ಹಿಜ್ಬುಲ್ಲಾ ಸಂಘಟನೆ ದೊಡ್ಡ ದೊಡ್ಡ ತಲೆಗಳನ್ನೇ ಉರುಳಿಸಿದೆ. ಪರಿಸ್ಥಿತಿ ಹೀಗಿದ್ರು ಹಿಜ್ಬುಲ್ಲಾ ಮಾತ್ರ ಸೋಲು ಒಪ್ಪಿಕೊಳ್ಳದೆ ಏನು ಹೇಳಿದೆ ಗೊತ್ತಾ? ಹಾಗಾದ್ರೆ ಇಬ್ಬರ ನಡುವೆ ನಡೆಯುವ ಯುದ್ಧ ನಿಲ್ಲೋದಿಲ್ವಾ?
ಮನುಷ್ಯನಿಗೆ ತಕ್ಷಣಕ್ಕೆ ಈಗ ಮತ್ತೊಂದು ಮಹಾಯುದ್ಧವೇ ಬೇಕು ಅಂತಾ ಕಾಣುತ್ತೆ. ಇಸ್ರೇಲ್ ಮಿಲಿಟರಿ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಹತ್ಯೆಯಾದ ನಂತರ ಜಗತ್ತೇ ಇತ್ತ ಗಮನ ಹರಿಸಿದೆ. ಮಧ್ಯಪ್ರಾಚ್ಯ ಈ ಘಟನೆ ಬಳಿಕ ತೀವ್ರ ಒತ್ತಡಕ್ಕೆ ಸಿಲುಕಿದ್ದು ಮತ್ತೊಂದು ಮಹಾಯುದ್ಧ ಆರಂಭವಾಗುತ್ತಾ? ಎಂಬ ಪ್ರಶ್ನೆ ಕೂಡ ಕಾಡ್ತಿದೆ. ಸ್ಥಿತಿ ಹೀಗಿದ್ದಾಗ, ಮತ್ತೊಮ್ಮೆ ಇಸ್ರೇಲ್ ವಿರುದ್ಧ ಗುಡುಗಿರುವ ಹಿಜ್ಬುಲ್ಲಾ ಹೇಳಿರುವುದು ಏನು ಗೊತ್ತಾ? ಬನ್ನಿ ತಿಳಿಯೋಣ.

ಹಿಜ್ಬುಲ್ಲಾ & ಇಸ್ರೇಲ್ ಯುದ್ಧ ನಿಂತಿಲ್ಲ!
ಹೌದು, ಇದೀಗ ಹಿಜ್ಬುಲ್ಲಾ ನೀಡಿರುವ ಹೇಳಿಕೆ ನೋಡಿದರೆ ಹಿಜ್ಬುಲ್ಲಾ & ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಇನ್ನೂ ನಿಂತಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಇಸ್ರೇಲ್ ಯುದ್ಧ ನಿಂತೇ ಹೋಯ್ತು ಎಂಬ ಭರವಸೆಯಲ್ಲಿ ಇತ್ತು. ಆದರೆ ಇದೀಗ ಮತ್ತೆ ಹಿಜ್ಬುಲ್ಲಾ ಗುಡುಗಿ ಇಸ್ರೇಲ್ ವಿರುದ್ಧ ಆಕ್ರೋಶ ಹೊರ ಹಾಕಿದೆ. ಅಲ್ಲದೆ ನಾವು ಈಗಲೂ ಇಸ್ರೇಲ್‌ನ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದಿದೆ. ಹಿಜ್ಬುಲ್ಲಾ ಸಂಘಟನೆ ಉಪ ಮಹಾ ಕಾರ್ಯದರ್ಶಿ ನಯೀಂ ಕಾಸಿಂ ಈ ರೀತಿ ಇಸ್ರೇಲ್ ವಿರುದ್ಧ ಗರಂ ಆಗಿ ಹೇಳಿಕೆ ನೀಡಿದ್ದು, ನಾವು ಈಗಲೂ ಸುದೀರ್ಘ ಅವಧಿಯ ಯುದ್ಧಕ್ಕೆ ಸಿದ್ಧ ಎಂದಿದ್ದಾರೆ.
ಸೇಡಿಗೆ ಸೇಡು ಗ್ಯಾರಂಟಿ ಆಯ್ತಾ?
ಇಸ್ರೇಲ್ ಸೇನೆ ಇದೀಗ ಅದೆಷ್ಟು ಪಕ್ಕಾ ಅಟ್ಯಾಕ್ ಮಾಡುತ್ತಿದೆ ಅಂದ್ರೆ, ಇಸ್ರೇಲ್ ಸೇನೆ 10 ದಿನಗಳಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸೇರಿ 6 ಪ್ರಮುಖರ ಹತ್ಯೆಯನ್ನ ಮಾಡಿದೆ. ದಕ್ಷಿಣ ಲೆಬನಾನ್ ಮೇಲೆ ಮನಸ್ಸಿಗೆ ಬಂದಂತೆ ದಾಳಿ ನಡೆಸುತ್ತಿರುವ ಇಸ್ರೇಲ್ ಸೇನೆ ಹಿಜ್ಬುಲ್ಲಾ ಮುಖಂಡರು ಅಡಗಿ ಕೂತಿರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆದಿದೆ. ಹೀಗಾಗಿಯೇ ಪಕ್ಕಾ ಪ್ಲಾನ್ ಮಾಡಿ ಹಿಜ್ಬುಲ್ಲಾ ಮುಖಂಡರು ಇರುವ ಜಾಗಗಳ ಮೇಲೆ ಈಗ ಡೆಡ್ಲಿ ಅಟ್ಯಾಕ್ ಮಾಡುತ್ತಿದೆ.
ಹೀಗಿದ್ರೂ ಸೋಲು ಒಪ್ಪಿಕೊಳ್ಳದ ಹಿಜ್ಬುಲ್ಲಾ ಇದೀಗ ಮತ್ತೊಮ್ಮೆ ಇಸ್ರೇಲ್ ವಿರುದ್ಧ ಗುಡುಗಿದೆ. ಅಕಸ್ಮಾತ್ ಇಸ್ರೇಲ್ ಭೂದಾಳಿ ನಡೆಸಿದರೂ, ಲೆಬನಾನ್ ರಕ್ಷಣೆಗೆ ಹಿಜ್ಬುಲ್ಲಾ ಹೋರಾಟಗಾರರು ಸಜ್ಜಾಗಿ ನಿಂತಿದ್ದಾರೆ ಎಂಬ ಹೇಳಿಕೆ ನೀಡಿದೆ ಹಿಜ್ಬುಲ್ಲಾ. ಹಾಗೇ ಮತ್ತೊಂದು ಕಡೆ ಇರಾನ್ ಕೂಡ ಈ ಸಮಯದಲ್ಲಿ ನೇರವಾಗಿ ಇಸ್ರೇಲ್ ವಿರುದ್ಧ ಯುದ್ಧ ಶುರು ಮಾಡುತ್ತಾ? ಎಂಬ ಭಯ ಕೂಡ ಆವರಿಸಿದೆ.












Click it and Unblock the Notifications