17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಗಾಜಾ, ನವೆಂಬರ್ 26; ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕದಯ ವಿರಾಮ ಒಪ್ಪಂದದ ಅನ್ವಯ 2ನೇ ಹಂತದಲ್ಲಿ 17 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಭಾನುವಾರ ಅವರು ತಮ್ಮ ಕುಟುಂಬದವರನ್ನು ಸೇರಿಕೊಂಡಿದ್ದಾರೆ.

13 ಇಸ್ರೇಲಿಗಳು, 4 ಥಾಯ್‌ನ ಜನರು ಈ ಒತ್ತೆಯಾಳುಗಳಲ್ಲಿ ಸೇರಿದ್ದಾರೆ. ಶನಿವಾರ ತಡರಾತ್ರಿ ಇಂಟರ್‌ನ್ಯಾಷನಲ್ ಕಮಿಟಿ ಆಫ್ ರೆಡ್‌ಕ್ರಾಸ್‌ಗೆ ಒತ್ತೆಯಾಳುಗಳನ್ನು ಹಮಾಸ್ ಬಂಡುಕೋರರು ಹಸ್ತಾಂತರ ಮಾಡಿದರು.

Hamas Released 14 Hostages As Part Deal

ಇಸ್ರೇಲಿಗಳಲ್ಲಿ 6 ಮಹಿಳೆಯರು ಮತ್ತು ಆರು ಮಕ್ಕಳು ಸೇರಿದ್ದಾರೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ಮಾಹಿತಿ ನೀಡಿದೆ. ಬಿಡುಗಡೆಗೊಂಡ ಒತ್ತೆಯಾಳುಗಳು ಗಾಜಾ ಗಡಿ ದಾಟಿ ಬರುವ ದೃಶ್ಯಗಳನ್ನು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿವೆ.

ಹಂತ ಹಂತವಾಗಿ ಹಮಾಸ್ ಬಂಡುಕೋರರು 50 ಒತ್ತೆಯಾಳುಗಳ ಬಿಡುಗಡೆ, ಇದಕ್ಕೆ ಪ್ರತಿಯಾಗಿ ಇಸ್ರೇಲ್‌ನಿಂದ 150 ಪ್ಯಾಲೆಸ್ಟೇನ್ ಕೈದಿಗಳ ಬಿಡುಗಡೆಗೆ ಒಪ್ಪಂದವಾಗಿದೆ. 3:1ರ ಅನುಪಾತದಲ್ಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡುತ್ತಿದೆ.

50 ಒತ್ತೆಯಾಳುಗಳ ಬಿಡುಗಡೆ; ಶನಿವಾರ ಬೆಳಗ್ಗೆಯೇ ಒತ್ತೆಯಾಳುಗಳ ಬಿಡುಗಡೆಯಾಗಬೇಕಿತ್ತು. ಆದರೆ ಕದನ ವಿರಾಮ ಒಪ್ಪಂದದ ಸ್ಪಷ್ಟತೆ ಸಿಕ್ಕಿಲ್ಲ ಎಂದು ಹಮಾಸ್‌ ಬಂಡುಕೋರರು ಬಿಡುಗಡೆ ಪ್ರಕ್ರಿಯೆ ವಿಳಂಬ ಮಾಡಿದ್ದರು. ಬಿಡುಗಡೆಯಾಗುವವರ ಪಟ್ಟಿ ಇಸ್ರೇಲ್ ಪ್ರಧಾನಿ ಕಛೇರಿ ತಲುಪಿತ್ತು. ಆದರೆ ಬಿಡುಗಡೆ ಪ್ರಕ್ರಿಯೆ ತಡರಾತ್ರಿ ತನಕ ವಿಳಂಬವಾಯಿತು.

ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕದನ ವಿರಾಮ ಒಪ್ಪಂದದ ಅನ್ವಯ 150 ಪ್ಯಾಲೆಸ್ಟೇನ್ ಕೈದಿಗಳಿಗೆ ಪ್ರತಿಯಾಗಿ ಹಮಾಸ್ ಬಂಡುಕೋರರು 4 ದಿನದಲ್ಲಿ 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕಿದೆ. ಈಗ ಎರಡು ಬ್ಯಾಚ್‌ಗಳಲ್ಲಿ ಒತ್ತೆಯಾಳುಗಳ ಬಿಡುಗಡೆಯಾಗಿದೆ.

ಹಮಾಸ್ ಶನಿವಾರ 42 ಒತ್ತೆಯಾಳುಗಳ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಬಿಡುಗಡೆ ಮಾಡಿರುವುದು 17 ಜನರನ್ನು ಮಾತ್ರ. ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ.

ಶುಕ್ರವಾರ ಮೊದಲ ಹಂತದಲ್ಲಿ ಹಮಾಸ್ 13 ಇಸ್ರೇಲಿ, 12 ಥಾಯ್ ಪ್ರಜೆಗಳು ಸೇರಿ 25 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಶನಿವಾರ ಬೆಳಗ್ಗೆ ಗಾಜಾಪಟ್ಟಿಯ ಗಡಿಯಲ್ಲಿ ಇಸ್ರೇಲ್‌ ಒತ್ತೆಯಾಳುಗಳನ್ನು ಸ್ವಾಗತಿಸಲು ಕಾದಿತ್ತು. ಆದರೆ ಬೆಳಗ್ಗೆ ಬಿಡುಗಡೆ ಮಾಡದ ಹಮಾಸ್ ತಡರಾತ್ರಿ ಅವರನ್ನು ರೆಡ್‌ಕ್ರಾಸ್ ಪ್ರತಿನಿಧಿಗಳಿಗೆ ಹಸ್ತಾಂತರ ಮಾಡಿದೆ.

ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕಾಳಗದಲ್ಲಿ ನಾಪತ್ತೆಯಾದ, ಒತ್ತೆಯಾಳುಗಳಾಗಿ ಸೆರೆ ಸಿಕ್ಕಿರುವ ಎಲ್ಲರನ್ನು ವಾಪಸ್ ಕರೆತರಲು ಸರ್ಕಾರ ಬದ್ಧವಾಗಿದೆ ಎಂದು ಇಸ್ರೇಲ್ ಹೇಳಿದೆ. ಹಮಾಸ್ ಬಂಡುಕೋರರು ಒತ್ತೆಯಾಳುಗಳ ಬಿಡುಗಡೆಗೆ ಮೊದಲು ಅವರ ವಿವರಗಳನ್ನು ಇಸ್ರೇಲ್ ಪ್ರಧಾನಿ ಕಛೇರಿಗೆ ಕಳಿಸುತ್ತಿದ್ದಾರೆ.

ಹಮಾಸ್ ಬಿಡುಗಡೆ ಮಾಡಿದ ಒತ್ತೆಯಾಳುಗಳಿಗೆ ಮೊದಲು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಅವರನ್ನು ಮನೆಗಳಿಗೆ ಕಳಿಸಲಾಗುತ್ತಿದೆ. ಇಸ್ರೇಲ್ ಇದುವರೆಗೂ 39 ಪ್ಯಾಲೆಸ್ಟೇನ್ ಕೈದಿಗಳನ್ನು ಬಿಡುಗಡೆ ಮಾಡಿದೆ.

ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕದನ ವಿರಾಮ ಒಪ್ಪಂದ, ಒತ್ತೆಯಾಳುಗಳ ಬಿಡುಗಡೆಯನ್ನು ಅಮೆರಿಕ ಸ್ವಾಗತಿಸಿದೆ. ಕತಾರ್ ಮತ್ತು ಈಜಿಪ್ಟ್ ನಾಯಕರ ನಡುವಿನ ಮಧ್ಯಸ್ಥಿಕೆಗಾಗಿ ನಾನು ಧನ್ಯವಾದ ಸಲ್ಲಿಸುತ್ತೇವೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಟ್ವೀಟ್ ಮಾಡಿದ್ದಾರೆ.

ಕದನ ವಿರಾಮ ಒಪ್ಪಂದ ಮತ್ತು ಜೈಲಿನಲ್ಲಿರುವ ಪ್ಯಾಲೆಸ್ಟೇನ್ ಕೈದಿಗಳ ಬಿಡುಗಡೆಗೆ ಸಹ ಇಸ್ರೇಲ್ ಸಮ್ಮತಿ ಸೂಚಿಸಿತ್ತು. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಬಂಡುಕೋರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+