ಕದನ ವಿರಾಮಕ್ಕೆ ಒಪ್ಪಿದ ಹಮಾಸ್, ಗಾಜಾ ಪಟ್ಟಿಯಲ್ಲಿ ನಿಲ್ಲದ ಹಿಂಸಾಚಾರ

ಗಾಜಾ ಪಟ್ಟಿಯಲ್ಲಿ ಹಿಂಸಾಚಾರ ಮುಂದುವರಿದಿದ್ದು, ಯುದ್ಧದ ಬೆಂಕಿ ಕೊತ ಕೊತ ಕುದಿಯುತ್ತಾ ಇದೆ. ಪರಿಣಾಮ ಗಾಜಾ ಪಟ್ಟಿಯಲ್ಲಿ ಪ್ರತಿದಿನ ಹತ್ತಾರು ಜನರ ಸಾವು ಆಗುತ್ತಿದೆ ಅಂತಾ ಆರೋಪ ಮಾಡ್ತಿದ್ದಾರೆ ಸ್ಥಳೀಯರು. ಇಷ್ಟೆಲ್ಲಾ ಸಂಕಷ್ಟಗಳ ನಡುವೆ ಇದೀಗ ಕದನ ವಿರಾಮ ಮಾತುಕತೆಗೆ ನಾವು ಸಿದ್ಧ ಅಂತಾ ಹಮಾಸ್ ಹೇಳಿದೆ. ಹೀಗಿದ್ದರೂ ಇಸ್ರೇಲ್ ಮಾತ್ರ ತನ್ನ ಭೀಕರ ದಾಳಿಯನ್ನು ನಿಲ್ಲಿಸದೆ ಗಾಜಾ ಮೇಲೆ ಈಗ ಅಟ್ಯಾಕ್ ಮಾಡುತ್ತಿದೆ.

ಇಸ್ರೇಲ್ ಮತ್ತು ಇರಾನ್ ಯುದ್ಧ ನಿಂತ ನಂತರ ಗಾಜಾ ಪಟ್ಟಿಯಲ್ಲಿ ಕೂಡ ಶಾಂತಿ ನೆಲೆಸುತ್ತದೆ ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದರೆ ಗಾಜಾ ಪಟ್ಟಿಯಲ್ಲಿ ಯುದ್ಧ ನಿಲ್ಲುವುದು ಬಿಡಿ, ಜನರು ತಮ್ಮ ಜೀವ ಉಳಿಸಿಕೊಂಡು ಉಸಿರಾಡುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣ ಆಗಿದೆ. ಯಾಕಂದ್ರೆ ಪದೇ ಪದೇ ಗಾಜಾ ಮೇಲೆ ಇಸ್ರೇಲ್ ಸೇನೆ ಭೀಕರ ವಾಯುದಾಳಿ ನಡೆಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗ ಕೂಡ, ಇದೇ ರೀತಿಯಾಗಿ ಇಸ್ರೇಲ್ ಸೇನೆ ನಡೆಸಿದ ಭೀಕರ ದಾಳಿಗೆ 19 ಜನರು ಬಲಿಯಾಗಿರುವ ಆರೋಪ ಇದೀಗ ಕೇಳಿ ಬಂದಿದೆ.

Hamas Readiness for Ceasefire Talks Amid Israeli Attacks on Gaza

ಭೀಕರ ದಾಳಿಗೆ 19 ಜನರು ಬಲಿ...

ಹೌದು, ಇಸ್ರೇಲ್ ಸೇನೆ ಇದೀಗ ತನ್ನ ಶತ್ರುಗಳ ನಾಶಕ್ಕೆ ತೊಡೆತಟ್ಟಿ ನಿಂತಿದೆ. ಇದೇ ಕಾರಣಕ್ಕೆ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಾ ಗಾಜಾ ಪಟ್ಟಿಯಲ್ಲಿ ಎಲ್ಲವನ್ನ ಉಡಾಯಿಸುತ್ತಿದೆ. ಆದರೆ ಹಮಾಸ್ ಮಾಡಿದ್ದ ತಪ್ಪಿಗೆ ಸಾಮಾನ್ಯ ಜನರಿಗೆ ಯಾಕೆ ತೊಂದರೆ ಕೊಡಬೇಕು ಅನ್ನೋ ಪ್ರಶ್ನೆಯನ್ನ ಕೂಡ ಜನರು ಕೇಳ್ತಿದ್ದಾರೆ. ಹೀಗಿದ್ದಾಗಲೇ ಅಮೆರಿಕ ಕೂಡ ಒತ್ತಡ ಹೇರಿ, ಇಸ್ರೇಲ್ ಜೊತೆಗೆ ಮಾತನಾಡಿ ಇದೀಗ ಕದನ ವಿರಾಮಕ್ಕೆ ಸಿದ್ಧತೆ ನಡೆಸಿದೆ. ಹೀಗಿದ್ದರೂ ಇಬ್ಬರ ನಡುವೆ ಬಡಿದಾಟ ಮಾತ್ರ ನಿಲ್ಲುತ್ತಿಲ್ಲ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+