Israel & Gaza: ಯುದ್ಧ ನಿಲ್ಲಿಸಲು ಮಹತ್ವದ ಒಪ್ಪಂದಕ್ಕೆ ಸಿದ್ಧ ಎಂದ ಹಮಾಸ್!

ಇಸ್ರೇಲ್ ಸೇನೆ ಗಾಜಾ ಪಟ್ಟಿಯಲ್ಲಿ ಅತಿರೇಕದ ದಾಳಿ ಮುಂದುವರಿಸಿದ ನಂತರ ಸ್ಥಿತಿ ಸೂಕ್ಷ್ಮ ಸ್ವರೂಪ ಪಡೆದಿದೆ. ಹಮಾಸ್ & ಇಸ್ರೇಲ್ ನಡುವೆ ರಣಭೀಕರ ವಾರ್ ನಡೆಯುತ್ತಿರುವುದಕ್ಕೆ ಇಡೀ ಜಗತ್ತು ಕೂಡ ರೊಚ್ಚಿಗೆದ್ದಿದೆ. ಇಂತಹ ಸಮಯದಲ್ಲೇ ಹಮಾಸ್‌ನ ನಾಯಕರು ಕೂಡ ಜೀವ ಕಳೆದುಕೊಂಡಿದ್ದು, ಈ ತಿಕ್ಕಾಟ ಇನ್ನೂ ಹಲವು ವರ್ಷಗಳ ಕಾಲ ಇದೇ ರೀತಿಯಾಗಿ ಎಳೆದುಕೊಂಡು ಹೋಗುವ ಆತಂಕ ಕಾಡುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ, ಹಮಾಸ್ ನಾಯಕರು ಇದೀಗ ಮಹತ್ವದ ಘೋಷಣೆ ಹೊರಡಿಸಿದ್ದಾರೆ.

ರಷ್ಯಾ & ಉಕ್ರೇನ್ ಯುದ್ಧದ ರೀತಿ ಹಮಾಸ್ & ಇಸ್ರೇಲ್ ವಾರ್ ಕೂಡ ನಿಲ್ಲುವಂತೆ ಕಾಣುತ್ತಿಲ್ಲ. ಇಷ್ಟೆಲ್ಲಾ ಸಾಲದು ಅಂತಾ, ಲೆಬನಾನ್‌ನ ಹಿಜ್ಬುಲ್ಲಾ & ಇರಾನ್ ಬೆಂಬಲಿತ ಗುಂಪುಗಳ ಜೊತೆ ಕೂಡ ಹಮಾಸ್‌ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಫೈಟಿಂಗ್ ಮತ್ತಷ್ಟು ಜೋರಾಗಿ, ಇಸ್ರೇಲ್ ಇನ್ನಷ್ಟು ತೀವ್ರವಾಗಿ ದಾಳಿ ಮಾಡುವ ಭಯ ಕಾಡುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಬರೋಬ್ಬರಿ 51,100 ಜನರು ಮೃತಪಟ್ಟಿದ್ದು, 23 ಲಕ್ಷ ಜನ ಬೀದಿಗೆ ಬಿದ್ದಿದ್ದಾರೆ. ಹೀಗೆಲ್ಲಾ ಇದ್ದಾಗ ಹಮಾಸ್ ಕೂಡ ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದು, ಯುದ್ಧ ನಿಲ್ಲಿಸಲು ಹೊಸ ಡೀಲ್‌ಗೆ ಮುಂದಾಗಿದೆ.

Hamas Offers Hostage Release for End to Gaza Conflict

ಯುದ್ಧ ನಿಲ್ಲಿಸಲು ಹೊಸ ಡೀಲ್!

ಹೌದು, ಇಸ್ರೇಲ್ ಜೊತೆಗೆ ಮೈತ್ರಿ ಮಾಡಿಕೊಂಡು ಪರಿಸ್ಥಿತಿ ನಿಭಾಯಿಸಲು ಹಮಾಸ್ ಈಗ ಡೀಲ್ ಒಂದನ್ನ ಮುಂದಿಟ್ಟಿದೆ. ಅದು ಏನೆಂದರೆ ಹೊಸ ಒಪ್ಪಂದದ ಪ್ರಕಾರ ಹಮಾಸ್ ತನ್ನ ಬಳಿ ಇರುವ ಎಲ್ಲಾ ಇಸ್ರೇಲ್ ಒತ್ತೆಯಾಳುಗಳನ್ನು ರಿಲೀಸ್ ಮಾಡಲು ಸಿದ್ಧವಾಗಿದೆ. ಅಲ್ಲದೆ ಇದರ ಬದಲಾಗಿ ಕದನ ವಿರಾಮ ಘೋಷಣೆ ಮಾಡುವಂತೆ ಒತ್ತಾಯ ಮಾಡಿದೆ. ಇಸ್ರೇಲ್‌ನ ಎದುರು ಈ ರೀತಿ ದಿಢೀರ್ ಹೊಸ ಒಪ್ಪಂದಕ್ಕೆ ಹಮಾಸ್ ಮುಂದಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದ್ದು, ಇಸ್ರೇಲ್ ಕಡೆಯಿಂದ ಇನ್ನೂ ರಿಯಾಕ್ಷನ್ ಬಂದಿಲ್ಲ.

ಅಮೆರಿಕಗೆ ಹೊಸ ತಲೆನೋವು ಶುರು?

ಕಳೆದ ಕೆಲವು ದಿನಗಳಿಂದ ಇಸ್ರೇಲ್ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿ, ಭಯದ ವಾತಾವರಣ ಸೃಷ್ಟಿ ಮಾಡಿದೆ. ಹೀಗೆ ಇಸ್ರೇಲ್ ಸೇನೆ ದಾಳಿ ಮಾಡುತ್ತಿರುವ ಪರಿಣಾಮ ಇದೀಗ ಗಾಜಾ ಪಟ್ಟಿಯಲ್ಲಿ ತೀವ್ರ ರಕ್ತಪಾತವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದು ಕಡೆ ಅತಿಹೆಚ್ಚು ಮಕ್ಕಳು, ಮಹಿಳೆಯರು ಮೃತಪಟ್ಟು ಪರಿಸ್ಥಿತಿ ಗಂಭೀರವಾಗಿದೆ. ಮಧ್ಯಪ್ರಾಚ್ಯದ ದೇಶಗಳು ಇದನ್ನ ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಅಮೆರಿಕಗೆ ಹೊಸ ತಲೆನೋವು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಇಸ್ರೇಲ್ & ಹಮಾಸ್ ತಿಕ್ಕಾಟಕ್ಕೆ ಬ್ರೇಕ್ ಹಾಕಲು ಚಿಂತನೆ ಕೂಡ ನಡೆದಿದೆ. ಇದೇ ಸಮಯದಲ್ಲಿ ಹಮಾಸ್ ಕೂಡ ಮುಂದೆ ಬಂದು, ಕದನ ವಿರಾಮ ಒಪ್ಪಂದಕ್ಕೆ ಪ್ರಸ್ತಾಪ ಮುಂದಿಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+