Israel: ಇಸ್ರೇಲ್ ಒತ್ತೆಯಾಳು ಬಿಡುಗಡೆ ಬಗ್ಗೆ ಮತ್ತೊಂದು ಮಹತ್ವದ ಘೋಷಣೆ!
ಇಸ್ರೇಲ್ & ಹಮಾಸ್ ನಡುವೆ ಆರಂಭವಾಗಿದ್ದು ಕದನ ಮುಗಿದು, ಇದೀಗ ಕದನ ವಿರಾಮ ಘೋಷಣೆ ಮಾಡಲಾಗಿದೆ. ಹೀಗೆ ಕದನ ವಿರಾಮ ಘೋಷಣೆ ಮಾಡಿದ ನಂತರ ಹಮಾಸ್‌ನ ಹಿಡಿತದಲ್ಲಿ ಇದ್ದ ಇಸ್ರೇಲಿ ಒತ್ತೆಯಾಳುಗಳು ಒಬ್ಬೊಬ್ಬರಾಗಿ ರಿಲೀಸ್ ಆಗುತ್ತಿದ್ದಾರೆ. ಇದರ ಭಾಗವಾಗಿ ಮತ್ತಷ್ಟು ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡುವುದಾಗಿ ಹಮಾಸ್‌ನ ನಾಯಕರು ತಿಳಿಸಿದ್ದಾರೆ.
ಅಮೆರಿಕ ಮೂಲದ ಇಸ್ರೇಲ್ ಪ್ರಜೆಯೂ ಸೇರಿದಂತೆ ಒಟ್ಟಾರೆ ಮೂವರು ಇಸ್ರೇಲಿ ಒತ್ತೆಯಾಳು ಬಿಡುಗಡೆ ಗ್ಯಾರಂಟಿ ಆಗಿದೆ. ಹೀಗಾಗಿ ಇಸ್ರೇಲ್ ಪ್ರಜೆಗಳ ಮೊಗದಲ್ಲಿ ಮತ್ತಷ್ಟು ಮಂದಹಾಸ ಇದೀಗ ಮೂಡಿದೆ. ಯುದ್ಧ ನಿಂತ ನಂತರ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯಿಂದ ಭಾರಿ ದೊಡ್ಡ ಪ್ರಮಾಣದ ಕದನ ವಿರಾಮ ನಿಯಮ ಉಲ್ಲಂಘನೆ ಆಗಿದೆ ಎಂದು ಹಮಾಸ್ ಆರೋಪ ಮಾಡಿತ್ತು. ಹಾಗೇ ಇದೇ ಕಾರಣಕ್ಕೆ ನಾವು ಒತ್ತೆಯಾಳು ಬಿಡುಗಡೆ ಮಾಡುವುದಿಲ್ಲ ಅಂತಾ ಪಟ್ಟು ಹಿಡಿದಿದ್ದರು ಹಮಾಸ್ ಬಂಡುಕೋರರು. ಆದರೆ ಇದೀಗ ಮನಸ್ಸು ಬದಲಾಯಿಸಿದ್ದಾರೆ.

ಶನಿವಾರ ಸಿಗಲಿದೆ ಮತ್ತೊಂದು ಬಂಪರ್
ಹೌದು, ಹಮಾಸ್ ಯಾವಾಗ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿ ಹೊಸ ಬಾಂಬ್ ಸಿಡಿಸಿತ್ತೋ ಆಗಲೇ ಸಂಚಲನ ಸೃಷ್ಟಿಯಾಗಿತ್ತು. ಖುದ್ದು ಇಸ್ರೇಲ್ ಪ್ರಧಾನಿ ಈ ಬಗ್ಗೆ ಎಚ್ಚರಿಕೆ ನೀಡಿ, ನಾವು ಕೂಡ ಕದನ ವಿರಾಮ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದರು. ಇದು ದೊಡ್ಡ ಕೋಲಾಹಲ ಎಬ್ಬಿಸಿತ್ತು, ಕೊನೆಗೂ ನಿರ್ಧಾರ ಬದಲಿಸಿ ಇದೀಗ ಹಮಾಸ್ ಬಂಡುಕೋರರು ಇಸ್ರೇಲಿ ಒತ್ತೆಯಾಳುಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಶನಿವಾರ ಮತ್ತೆ 3 ಒತ್ತೆಯಾಳುಗಳು ರಿಲೀಸ್ ಆಗಲಿದ್ದಾರೆ.












Click it and Unblock the Notifications