Israel & Gaza War: ಸಾಯುವ ಮೊದಲು ಸುರಂಗದೊಳಗೆ ಕಾಣಿಸಿದ್ದ ಹಮಾಸ್ ಮುಖ್ಯಸ್ಥ!
ಗಾಜಾ ಪಟ್ಟಿ ಭಾಗದಲ್ಲಿ ಇಸ್ರೇಲ್ ಮಿಲಿಟರಿ ದಾಳಿಯಲ್ಲಿ ಯಹ್ಯಾ ಸಿನ್ವರ್ ಮೃತಪಟ್ಟಿರುವ ಸುದ್ದಿ ಈಗಲೂ ಬೆಂಕಿ ಹೊತ್ತಿಸಿದೆ. ಯಹ್ಯಾ ಸಿನ್ವರ್ ಹಮಾಸ್ ಮುಖ್ಯಸ್ಥನ ಪಟ್ಟ ಪಡೆದಿದ್ದ ಹಿನ್ನೆಲೆಯಲ್ಲಿ, ಇಸ್ರೇಲ್ ಸೇನೆ ಸಿನ್ವರ್ ಹತ್ಯೆಗೆ ಹೊಂಚು ಹಾಕಿ ಕಾದಿತ್ತು. ಅದರಲ್ಲೂ ಈ ಯುದ್ಧದಲ್ಲಿ ದೊಡ್ಡ ಗೆಲುವು ಸಾಧಿಸಲು ಹಮಾಸ್ ಮುಖ್ಯಸ್ಥನ ಹತ್ಯೆ ಮಾಡಲೇಬೇಕು ಎಂಬ ಆಲೋಚನೆ ಕೂಡ ಇಸ್ರೇಲ್ ಸೇನೆಗೆ ಇತ್ತು. ಈ ಸಮಯದಲ್ಲೇ ಯಹ್ಯಾ ಸಿನ್ವರ್ ಹತ್ಯೆಯನ್ನ ಮಾಡಿ ಫೋಟೋ & ವಿಡಿಯೋ ರಿಲೀಸ್ ಮಾಡಿತ್ತು ಇಸ್ರೇಲ್ ಸೇನೆ. ಇಂತಹ ಸಮಯದಲ್ಲೇ ಸಾಯುವ ಮೊದಲು ಯಹ್ಯಾ ಸಿನ್ವರ್ ಏನು ಮಾಡಿದ್ದ ಗೊತ್ತಾ?
ಪದೇ ಪದೇ ಗಾಜಾದ ಮೇಲೆ ಇಸ್ರೇಲ್ ದಾಳಿ ಮಾಡ್ತಿರುವುದು ಮಧ್ಯಪ್ರಾಚ್ಯ ರೊಚ್ಚಿಗೇಳುವಂತೆ ಮಾಡಿದೆ. ಅದರಲ್ಲಿಯೂ ಹಮಾಸ್ ಮುಖ್ಯಸ್ಥನ ಹತ್ಯೆ ಕೂಡ ನಡೆದಿದೆ. ಗಾಜಾದಲ್ಲಿ ಅಡಗಿದ್ದ ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಹೀಗೆ, ಸಾಕ್ಷ್ಯ ಎಂಬಂತೆ ವಿಡಿಯೋ ಹಾಗೂ ಫೋಟೊಗಳನ್ನ ಕೂಡ ಹಂಚಿಕೊಂಡಿತ್ತು ಇಸ್ರೇಲ್ ಸೇನೆ. ತನ್ನ ಶತ್ರುಗಳಿಗೆ ಮತ್ತೆ ಎಚ್ಚರಿಕೆ ರವಾನಿಸಿತ್ತು. ಇಂತಹ ಸಮಯದಲ್ಲೇ, ಇದೀಗ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಹತ್ಯೆಯಾಗುವ ಮೊದಲು ಓಡಾಟ ನಡೆಸಿದ್ದ ವಿಡಿಯೋ ಸದ್ಯಕ್ಕೆ ರಿಲೀಸ್ ಆಗಿದ್ದು, ಫುಲ್ ವೈರಲ್ ಆಗುತ್ತಿದೆ.

ಗಾಜಾ ಯುದ್ಧಕ್ಕೆ ಬೀಳುತ್ತಾ ಬ್ರೇಕ್?
ಅಂದಹಾಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಹತ್ಯೆ ಆಗುವುದಕ್ಕೆ ಮೊದಲು ಸುರಂಗ ಮಾರ್ಗದ ಮೂಲಕ ಓಡಾಟ ನಡೆಸಿರುವ ವಿಡಿಯೋ ರಿಲೀಸ್ ಆಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗುತ್ತಿದ್ದು, ಇಸ್ರೇಲ್ ಸೇನೆ ಕಾರ್ಯಾಚರಣೆ ಬಗ್ಗೆ ಪರ & ವಿರೋಧದ ಚರ್ಚೆ ಜೋರಾಗಿದೆ.
ಅಂದಹಾಗೆ ಮಧ್ಯಪ್ರಾಚ್ಯ ಭಾಗದಲ್ಲಿ ಗಾಜಾ ವಿರುದ್ಧ ಯುದ್ಧ ಶುರುವಾಗಲು ಇದೇ ಹಮಾಸ್ ಕಾರಣ ಎಂಬ ಆರೋಪವೂ ಇದೆ. ಹೀಗೆಲ್ಲಾ ಯುದ್ಧ ಶುರುವಾದ ನಂತರ ಪರಿಸ್ಥಿತಿ ಕೈಮೀರಿ ಹೋಗಿದೆ. ಮತ್ತೊಂದು ಕಡೆ ಯಾಹ್ಯಾ ಸಿನ್ವರ್ ಹತ್ಯೆ ನಂತರ ಗಾಝಾ ವಿರುದ್ಧದ ಯುದ್ಧ ನಿಲ್ಲಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ಬಗ್ಗೆ ಇಸ್ರೇಲ್ ಪ್ರಧಾನಿ ಏನು ಹೇಳಿದ್ದಾರೆ ಗೊತ್ತಾ? ಮುಂದೆ ಓದಿ.
🎥DECLASSIFIED FOOTAGE:
— LTC Nadav Shoshani (@LTC_Shoshani) October 19, 2024
Sinwar hours before the October 7 massacre: taking down his TV into his tunnel, hiding underneath his civilians, and preparing to watch his terrorists murder, kindap and rape. pic.twitter.com/wTAF9xAPLU
ಹಮಾಸ್ ಮುಖ್ಯಸ್ಥನ ಹತ್ಯೆ...
ಆದರೆ ಇದೀಗ, ಹಮಾಸ್ ಮುಖ್ಯಸ್ಥನ ಹತ್ಯೆ ನಂತರ ಕೂಡ ಯುದ್ಧ ನಿಲ್ಲಿಸಲು ಇಸ್ರೇಲ್‌ನ ಸೇನೆ ಸಿದ್ಧವಿಲ್ಲ ಎಂಬ ಸಂದೇಶ ಸಿಕ್ಕಿದೆ. ಯಾಕಂದ್ರೆ ಹಮಾಸ್ ಮುಖ್ಯಸ್ಥನ ಹತ್ಯೆ ಮಾಡಿದ ತಕ್ಷಣ ಸಮಸ್ಯೆ ಸರಿಯಾಗಿದೆ ಅಂತಾ ಅಲ್ಲ. ಹೀಗಾಗಿ ಯುದ್ಧ ನಿಲ್ಲುವುದಿಲ್ಲ, ಮತ್ತೊಂದು ಕಡೆ ನಾವು ಇನ್ನೂ ಕಾರ್ಯಾಚರಣೆ ನಡೆಸಬೇಕಿದೆ. ಈ ಮೂಲಕ ಹಮಾಸ್ ಸಂಪೂರ್ಣವಾಗಿ ನಮ್ಮ ಎದುರು ಬಂದು ಶರಣಾಗಬೇಕು ಎನ್ನುತ್ತಿದೆ ಇಸ್ರೇಲ್. ಹೀಗೆ ಇಸ್ರೇಲ್ ಸೇನೆ ನಿರ್ಧಾರ ಮತ್ತು ಗುರಿಯ ಬಗ್ಗೆ ಖುದ್ದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications