Donald Trump: ಟ್ರಂಪ್ ಕೋಪ ತಣ್ಣಗಾಗಿಸಲು ಜಾರ್ಜಿಯಾ ಮೆಲೋನಿ ಎಂಟ್ರಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುರೋಪ್ ದೇಶಗಳ ವಿರುದ್ಧ ಭಾರಿ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡುವ ಮೂಲಕ ತಲ್ಲಣ ಎಬ್ಬಿಸಿದ್ದಾರೆ. ಇನ್ನೊಂದು ಕಡೆ ಟ್ರಂಪ್ ಟ್ಯಾಕ್ಸ್ ವಾರ್ ಶುರು ಮಾಡಿದ ನಂತರ ಆರ್ಥಿಕ ಕುಸಿತದ ಭೀತಿಗೆ ಸಿಲುಕಿ ಯುರೋಪ್ ಒಕ್ಕೂಟವೂ ನರಳಿದೆ.
ಹೀಗಿದ್ದಾಗ ನಮ್ಮ ಜೊತೆ ಕೈಜೋಡಿಸಿ ಅಂತಾ ಚೀನಾ ಕೂಡ ಆಫರ್ ಕೊಟ್ಟಿದ್ದು, ಯುರೋಪ್ ಒಕ್ಕೂಟದ ದೇಶಗಳ ಮನ ಒಲಿಸಲು ಪ್ರಯತ್ನಿಸುತ್ತಿದೆ ಚೀನಾ. ಹೀಗಿದ್ದಾಗಲೇ ದಿಢೀರ್ ಟ್ರಂಪ್ ಮತ್ತಷ್ಟು ರೊಚ್ಚಿಗೆದ್ದಿದ್ದು, ಯುರೋಪ್ ದೇಶಗಳು ಚೀನಾ ಜೊತೆಗೆ ಹೋದರೆ ಪರಿಸ್ಥಿತಿಯು ನೆಟ್ಟಗೆ ಇರಲ್ಲ ಅಂತಿದ್ದಾರೆ. ಟ್ರಂಪ್‌ರ ಈ ಕೋಪ ತಣ್ಣಗಾಗಿಸಲು ಜಾರ್ಜಿಯಾ ಮೆಲೋನಿ ಎಂಟ್ರಿ ಕೊಟ್ಟಿದ್ದಾರೆ.

ಟ್ರಂಪ್ ಅವರನ್ನ ದಾರಿಗೆ ತರಲು...
ಡೊನಾಲ್ಡ್ ಟ್ರಂಪ್ ತಾವು ನಡೆದಿದ್ದೇ ದಾರಿ, ಮಾಡಿದ್ದೇ ರೂಲ್ಸ್ ಅಂತಾ ಅಂದುಕೊಂಡು ತೆರಿಗೆ ಯುದ್ಧ ಸಾರಿದ್ದಾರೆ. ಆದರೆ ಇದು ಡೊನಾಲ್ಡ್ ಟ್ರಂಪ್ ಅವರಿಗೇ ಏಟು ಕೊಡುತ್ತಿದ್ದು, ಈಗಾಗಲೇ ಅಮೆರಿಕ ಆರ್ಥಿಕತೆ ಹಲವು ಸಮಸ್ಯೆ ಎದುರಿಸುತ್ತಿದೆ. ಯುರೋಪ್ ಕೂಡ ಇದೇ ವಿಚಾರವಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಮುಂದಿನ ಪರಿಸ್ಥಿತಿ ಭಯ ಹುಟ್ಟಿಸುತ್ತಿದೆ. ಇಷ್ಟೆಲ್ಲದರ ನಡುವೆ ದಿಢೀರ್ ಯುರೋಪ್ ಒಕ್ಕೂಟದ ದೇಶಗಳು ಹೊಸ ಪ್ಲಾನ್ ಮಾಡಿದ್ದು, ಟ್ರಂಪ್ ಅವರನ್ನ ದಾರಿಗೆ ತರಲು ಇಟಲಿ ಪ್ರಧಾನಿ ಮೆಲೋನಿ ಅವರನ್ನ ಮುಂದೆ ಬಿಟ್ಟಿವೆ.
ಅಮೆರಿಕ ಅಧ್ಯಕ್ಷರ ಮನೆಯಲ್ಲಿ ಮಾತುಕತೆ
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಭರ್ಜರಿ ಡೀಲ್ ಮಾಡಲು ಇದೀಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅಮೆರಿಕ ತಲುಪಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ತೆರಿಗೆ ತಿಕ್ಕಾಟದ ಸಮಸ್ಯೆಗಳ ಬಗ್ಗೆ ತಿಳಿಸಲು & ಪಾಶ್ಚಿಮಾತ್ಯ ದೇಶಗಳ ಒಗ್ಗಟ್ಟನ್ನು ಮನವರಿಕೆ ಮಾಡಲು ಮುಂದಾಗಿದ್ದಾರೆ ಇಟಲಿ ಪ್ರಧಾನಿ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಸರ್ಕಾರಿ ನಿವಾಸ ವೈಟ್ ಹೌಸ್‌ನಲ್ಲಿ ಈ ಬಗ್ಗೆ ಮಾತುಕತೆ ಆರಂಭವಾಗಿದೆ. ಅಲ್ಲದೆ ಈ ವಿಚಾರದಲ್ಲಿ ಟ್ರಂಪ್ ದಾರಿಗೆ ಬರುವ ನಿರೀಕ್ಷೆ ಕೂಡ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಇದೆ.
ಕಠಿಣ ಸ್ಥಿತಿಯಲ್ಲಿ ಇಟಲಿ ಪ್ರಧಾನಿ ಎಂಟ್ರಿ
ಯುರೋಪ್ ಒಕ್ಕೂಟ & ಅಮೆರಿಕ ನಡುವೆ ಭಾರಿ ದೊಡ್ಡ ವ್ಯಾಪಾರ ವಹಿವಾಟು ನಡೆಯುತ್ತದೆ. ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ಪ್ರತಿವರ್ಷ ಎರಡೂ ಒಕ್ಕೂಟದ ಮಧ್ಯೆ ನಡೆಯುತ್ತಾ ಬಂದಿದೆ. ಹೀಗಿದ್ದರೂ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತ್ರ ಭಾರಿ ತೆರಿಗೆ ಹೇರಲು ಮುಂದಾಗಿದ್ದು, ಆಕ್ರೋಶಕ್ಕೆ ಕಾರಣವಾಗಿತ್ತು. ಭವಿಷ್ಯದ ದೃಷ್ಟಿಯಿಂದ ಇನ್ನಷ್ಟು ಸಮಸ್ಯೆ ಮಾಡುವ ಆತಂಕ ಆವರಿಸಿತ್ತು. ಇಂತಹ ಕಠಿಣ ಸ್ಥಿತಿಯಲ್ಲಿ ಇಟಲಿಯ ಪ್ರಧಾನಿ ಸಂಧಾನ ಮಾಡಲು ಮುಂದೆ ಬಂದಿರುವುದು ಗಮನ ಸೆಳೆದಿದೆ. ಶೀಘ್ರದಲ್ಲೇ ಈ ವಿಚಾರವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೊಸ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಕೂಡ ಮೂಡಿದೆ. ಮತ್ತೊಂದು ಕಡೆ ಚೀನಾ ಈ ಭೇಟಿಯ ಬಗ್ಗೆ ಕಣ್ಣಿಟ್ಟು ಕೂತಿದ್ದು, ಪ್ರತಿ ಕ್ಷಣದ ಮಾಹಿತಿಯು ಚೀನಾಗೆ ತಲುಪುತ್ತಿದೆ.












Click it and Unblock the Notifications