ಮದುವೆಗೆ ಪೆರೋಲ್ ನಿರಾಕರಿಸಿದ ಪಾಕ್
ಗಿಲ್ಗಿಟ್ (ಪಾಕ್ ಆಕ್ರಮಿತ ಕಾಶ್ಮೀರ): ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯ ಮತ್ತೊಂದು ಘಟನೆ ವರದಿಯಾಗಿದೆ.
ಗಿಲ್ಗಿಟ್-ಬಾಲ್ಟಿಸ್ತಾನ್ ಸರ್ಕಾರವು ಅವಾಮಿ ವರ್ಕರ್ಸ್ ಪಾರ್ಟಿಯ ಮುಖಂಡ ಮತ್ತು ರಾಜಕೀಯ ಕಾರ್ಯಕರ್ತ ಬಾಬಾ ಜಾನ್ ಅವರ ಮದುವೆಗೆ ಪೆರೋಲ್ ನೀಡಲು ನಿರಾಕರಿಸಿದೆ.
ಗೀಚ್ ಗ್ರಾಮದ ಯುವತಿಯೊಬ್ಬಳೊಂದಿಗೆ ಬಾಬಾ ಜಾನ್ ನಿಶ್ಚಿತಾರ್ಥ ನಡೆದಿತ್ತು. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸೇರಿದ ಘಿಜೆರ್ ಜಿಲ್ಲೆಯಲ್ಲಿ ಏಪ್ರಿಲ್ 15ರಂದು ಇಬ್ಬರ ಮದುವೆ ನಡೆಯಬೇಕಿತ್ತು. ಹೀಗಾಗಿ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಬಾಬಾ ಜಾನ್ ಅರ್ಜಿ ಸಲ್ಲಿಸಿದ್ದರು. ಆದರೆ ಅದಕ್ಕೆ ಸರ್ಕಾರ ಸಹಮತ ವ್ಯಕ್ತಪಡಿಸಿಲ್ಲ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಮದುವೆ ಸಮಾರಂಭಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಳಿಸಿದ್ದೆವು. ಪೆರೋಲ್ ಮೇಲೆ ಬಿಡುಗಡೆ ಹೊಂದಿ ಮದುವೆಯಾಗಲು ಆತನಿಗೆ ಎಲ್ಲ ಹಕ್ಕುಗಳೂ ಇವೆ ಎಂದು ಬಾಬಾ ಜಾನ್ ಕುಟುಂಬದವರು ಪ್ರತಿಪಾದಿಸಿದ್ದಾರೆ.
2014ರಲ್ಲಿ ಹಿಂಸಾಚಾರ ನಡೆಸಲು ಜನರನ್ನು ಪ್ರಚೋದಿಸಿದ್ದ ಆರೋಪದಡಿ ಬಾಬಾ ಜಾನ್ ಅವರನ್ನು ಬಂಧಿಸಲಾಗಿತ್ತು. ಘಿಜೆರ್ನ ಜೈಲಿನಲ್ಲಿ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.












Click it and Unblock the Notifications