Russia & Ukraine: ಸಂಕಷ್ಟದಲ್ಲಿ ನರಳುತ್ತಿರುವ ಉಕ್ರೇನ್ ಮಿಲಿಟರಿಗೆ ಮತ್ತೊಂದು ಆಘಾತ!
ರಷ್ಯಾ & ಉಕ್ರೇನ್ ಕಲಹದ ಬೆಂಕಿ ಇನ್ನೂ ಆರಿಲ್ಲ, ಇದೇ ಕಾರಣಕ್ಕೆ ನೆರವಿನ ನಿರೀಕ್ಷೆಯಲ್ಲಿ ಕಾಯುತ್ತಾ ಪರದಾಡುತ್ತಿದೆ ಉಕ್ರೇನ್. ಈಗಾಗಲೇ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ನಾಯಕರು ಉಕ್ರೇನ್ ಮಿಲಿಟರಿಗೆ ಲಕ್ಷಾಂತರ ಕೋಟಿ ರೂಪಾಯಿ ನೆರವು ನೀಡಿದ್ದಾರೆ. ಹೀಗೆ ಭಾರಿ ದೊಡ್ಡ ಪ್ರಮಾಣದ ನೆರವು ಪಡೆದರೂ ಉಕ್ರೇನ್ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ಈ ಸಮಯದಲ್ಲೇ ಜರ್ಮನಿ ಕಡೆಯಿಂದ ಉಕ್ರೇನ್‌ಗೆ ಆಘಾತಕಾರಿ ಸುದ್ದಿ ಸಿಕ್ಕಿದೆ!
ರಷ್ಯಾ & ಉಕ್ರೇನ್ ಯುದ್ಧದಲ್ಲಿ ರಷ್ಯಾ ರೊಚ್ಚಿಗೆದ್ದಿದ್ದು ಯುದ್ಧ ಮತ್ತೊಂದು ಭೀಕರ ಹಂತಕ್ಕೆ ತಲುಪುವ ಆತಂಕ ಮನೆಮಾಡಿದೆ. ಈಗಾಗಲೇ ಉಕ್ರೇನ್ ದೇಶದ ಪ್ರಮುಖ ನಗರಗಳಲ್ಲಿ ವಿದ್ಯುತ್ ಕೈಕೊಟ್ಟಿದ್ದು ರಷ್ಯಾ ಸೇನೆ ದಾಳಿ ಮತ್ತಷ್ಟು ವೇಗವಾಗಿ ನಡೆಸುತ್ತಿದೆ. ವಿದ್ಯುತ್ ಇಲ್ಲದೆ ಈಗಾಗಲೆ ಉಕ್ರೇನ್‌ನ ಹಲವು ನಗರಗಳ ಜನ ಪರದಾಡಿ ಹೋಗಿದ್ದು ರಷ್ಯಾ & ಉಕ್ರೇನ್ ಯುದ್ಧ ಮತ್ತಷ್ಟು ಭೀಕರವಾಗುವ ಮುನ್ಸೂಚನೆ ಸಿಕ್ಕಿದೆ. ಈ ಸಮಯದಲ್ಲಿ ಜರ್ಮನಿ ಕೂಡ ಉಕ್ರೇನ್‌ಗೆ ಇದೀಗ ಶಾಕ್ ಕೊಟ್ಟಿದೆ!

25,000 ಕೋಟಿ ರೂಪಾಯಿ ನೆರವು ಢಮಾರ್?
ಹೌದು, ಮೊದಲೇ ಹೇಳಿದಂತೆ ಪಾಶ್ಚಿಮಾತ್ಯ ದೇಶಗಳು ಅದರಲ್ಲೂ ನ್ಯಾಟೋ ಒಕ್ಕೂಟದಲ್ಲಿ ಗುರುತಿಸಿಕೊಂಡ ದೇಶಗಳಿಂದ ಬರುವ ಅನುದಾನ ನಂಬಿ ಜೀವನ ನಡೆಸುತ್ತಿದೆ ಉಕ್ರೇನ್ ಸೇನೆ. ಈಗಿನ ಸ್ಥಿತಿಯಲ್ಲಿ ಉಕ್ರೇನ್ ಸೇನೆ ರಷ್ಯಾ ವಿರುದ್ಧ ಹೋರಾಡಲು ಪಾಶ್ಚಿಮಾತ್ಯರ ಈ ನೆರವು & ಯುದ್ಧ ಸಹಾಯ ಬೇಕೆ ಬೇಕು. ಹೀಗಿದ್ದಾಗಲೇ ಜರ್ಮನಿ ದೇಶ ದಿಢೀರ್ ತಾನು ನೀಡಬೇಕಿದ್ದ 3 ಬಿಲಿಯನ್ ಡಾಲರ್ ಅಂದ್ರೆ ಸುಮಾರು 25 ಸಾವಿರ ಕೋಟಿ ರೂಪಾಯಿ ನೆರವನ್ನ ತಡೆಹಿಡಿದು ಉಕ್ರೇನ್‌ಗೆ ಮತ್ತೊಂದು ಆಘಾತ ನೀಡಿದೆಯಂತೆ.
ಲಕ್ಷ ಲಕ್ಷ ಜನರ ಸಾವು
ಉಕ್ರೇನ್ ವಿರುದ್ಧ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿಯನ್ನ ಹೆಚ್ಚಿಸುತ್ತಿದೆ ಹೀಗೆ ಇಬ್ಬರ ನಡುವೆ ಘೋರ ಕಾಳಗ ನಡೆಯುತ್ತಿದೆ. ಹೀಗೆ ಯುದ್ಧದಿಂದಾಗಿ ಇದುವರೆಗೆ 50,000 ನಾಗರಿಕರು ಮೃತಪಟ್ಟು, 70,000 ಉಕ್ರೇನ್ ಸೈನಿಕರು ಜೀವ ಬಿಟ್ಟಿದ್ದಾರೆ ಎನ್ನುವುದು ಉಕ್ರೇನ್ ಆರೋಪ. ಈ ಮೂಲಕ ಒಟ್ಟಾರೆ 1 ಲಕ್ಷ 20 ಸಾವಿರ ಉಕ್ರೇನ್ ಮೂಲದ ಜನರ ಪ್ರಾಣವೇ ಹೋಗಿದೆ ಅಂತಾ ಉಕ್ರೇನ್ ಆರೋಪ ಮಾಡುತ್ತಿದೆ. ಕಳೆದ 2 ವರ್ಷಗಳಿಂದ ಎರಡೂ ದೇಶಗಳು ಕಚ್ಚಾಡುತ್ತಿವೆ.












Click it and Unblock the Notifications