ಸೀಮೆನ್ಸ್ ಕಂಪನಿಯಿಂದ 15,000 ಉದ್ಯೋಗ ಕಡಿತ

German engineering and technology company Siemens to cut 15,000 jobs worldwide
ಮ್ಯುನಿಕ್ (ಜರ್ಮನಿ), ಸೆ.30: ವೆಚ್ಚ ಕಡಿತಕ್ಕೆ ಮುಂದಾಗಿರುವ ಜರ್ಮನಿಯ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಸೀಮೆನ್ಸ್ 15,000 ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. Siemens ಕಂಪನಿಯಲ್ಲಿ ಒಟ್ಟು 3,70,000 ಮಂದಿ ಉದ್ಯೋಗಿಗಳಿದ್ದಾರೆ. ಜರ್ಮನಿಯಲ್ಲೇ 1,19,000 ಮಂದಿ ನೌಕರರಿದ್ದಾರೆ.

ಮುಂದಿನ ವರ್ಷಾಂತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣವಾಗಲಿದ್ದು, ಸ್ವದೇಶದಲ್ಲಿನ 5 ಸಾವಿರ ಮಂದಿ ಸೇರಿದಂತೆ ಜಗತ್ತಿನಾದ್ಯಂತ ಒಟ್ಟು 15,000 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಸತತವಾಗಿ 2 ತಿಂಗಳ ಕಾಲ ಲಾಭ/ಆದಾಯದ ಪ್ರಮಾಣ ಕುಸಿದಿದ್ದರಿಂದ ಚಿಂತಿತಗೊಂಡ ಕಂಪನಿ ಈ ಕ್ರಮಕ್ಕೆ ಮುಂದಾಗಿದೆ.

ಗ್ಯಾಸ್ ಟರ್ಬೈನ್, ರೈಲ್ವೆ ಉಪಕರಣ, ಆರೋಗ್ಯ ಸಂಬಂಧಿ ಉಪಕರಣಗಳನ್ನು ಉತ್ಪಾದಿಸುವ ಅಗ್ರ ಕಂಪನಿಗಳಲ್ಲಿ ಒಂದಾದ ಸೀಮೆನ್ಸ್ ಸ್ವಯಂ ಪ್ರೇರಣೆಯಿಂದ ಇಷ್ಟೂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತದೆಯಾದರೂ ತಕ್ಷಣವೇ ತನ್ನದೇ ಅಧೀನದ ಬೇರೆ ಬೇರೆ ಕಂಪನಿಗಳಲ್ಲಿ ಇವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತದೆ.

ಇದೊಂದು ಯೋಜಿತ ಮಾನವ ಸಂಪನ್ಮೂಲ ಹೊಂದಾಣಿಕೆ ಪ್ರಕ್ರಿಯೆಯಾಗಿದ್ದು, ಈ ಕ್ರಮದಿಂದ ಕಂಪನಿಗೆ 8 ಶತಕೋಟಿ ಡಾಲರ್ ಹಣ ಉಳಿತಾಯವಾಗಲಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

ಸೀಮೆನ್ಸ್ ಕಂಪನಿಯ ಔದ್ಯಮಿಕ ಕ್ಷೇತ್ರದಲ್ಲಿ 2 ಸಾವಿರ ಮಂದಿ, ವಿದ್ಯುತ್ ಕ್ಷೇತ್ರದಲ್ಲಿ 1,400 ಸಾವಿರ ಮಂದಿ, ಮೂಲಸೌಕರ್ಯ ಕ್ಷೇತ್ರದಲ್ಲಿ 1,400 ಸಾವಿರ ಮಂದಿ, ಕಾರ್ಪೊರೇಟ್ ಕ್ಷೇತ್ರದಲ್ಲಿ 1,400 ಸಾವಿರ ಮಂದಿ ಉದ್ಯೋಗ ವ್ಯತ್ಯಯಕ್ಕೆ ಒಳಗಾಗಲಿದ್ದಾರೆ. ಈ ವರ್ಷದಿಂದಲೇ ಪ್ರಕ್ರಿಯೆ ಶುರುವಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+