Israel & Gaza War: ಗಾಜಾ ಪಟ್ಟಿಯಲ್ಲಿ ಮತ್ತೆ ಸಂಧಾನ ಮಾತುಕತೆ, ಯುದ್ಧಕ್ಕೆ ಶಾಶ್ವತ ಪರಿಹಾರ?
ಇಸ್ರೇಲ್ & ಹಮಾಸ್ ನಡುವೆ ಭೀಕರ ಕದನ ನಡೆದು ಈಗಾಗಲೇ ಗಾಜಾ ಪಟ್ಟಿ ಸಂಪೂರ್ಣ ನಾಶವಾಗಿ ಹೋಗಿದೆ. ಹೀಗಿದ್ದಾಗ ಶಾಂತಿ ಮಾತುಕತೆ ನಡೆದು, ಕೆಲವು ವಾರಗಳ ಹಿಂದಷ್ಟೇ ಶಾಂತಿ ಸ್ಥಾಪನೆ ಮಾಡಲು ಮುಂದಾಗಿತ್ತು ವಿಶ್ವ ಸಮುದಾಯ. ಆದರೆ ಕದನ ವಿರಾಮ ಈಗ ಮುಕ್ತಾಯವಾಗಿದ್ದು, ಶನಿವಾರದ ನಂತರ ಮತ್ತೊಂದು ಸುತ್ತಿನ ಬ್ರೇಕ್ ಬೀಳುವ ನಿರೀಕ್ಷೆಯು ಇದೆ. ಹೀಗಿದ್ದಾಗ ಮಹತ್ವದ ಚರ್ಚೆ ಕೂಡ ಅಂತಿಮ ಹಂತವನ್ನು ತಲುಪಿದೆ.
ಈಜಿಪ್ಟ್ ದೇಶದ ರಾಜಧಾನಿ ಕೈರೋದಲ್ಲಿ ಈ ಬಗ್ಗೆ ಮಹತ್ವದ ಸಂಧಾನ ಮಾತುಕತೆ ಶುರು ಆಗಿತ್ತು. ಕೆಲವು ದಿನಗಳ ಹಿಂದೆ 2ನೇ ಸುತ್ತಿನ ಕದನ ವಿರಾಮ ಘೋಷಣೆ ಮಾಡಲು ಭಾರಿ ದೊಡ್ಡ ಮಟ್ಟದಲ್ಲಿ ಸಭೆ ನಡೆಸಲಾಗಿತ್ತು. ಇಸ್ರೇಲ್, ಅಮೆರಿಕ ಸೇರಿದಂತೆ ಹಮಾಸ್‌ನ ಪರ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಮಧ್ಯಪ್ರಾಚ್ಯದಲ್ಲಿ ಯುದ್ಧಗಳು ಜೋರಾಗಿ ಇಸ್ರೇಲ್ ತನ್ನ ಶತ್ರು ಪಡೆಗಳ ವಿರುದ್ಧ ಘೋರ ಕಾಳಗ ನಡೆಸುತ್ತಿದ್ದ ಸಮಯದಲ್ಲೇ ಒಂದೊಂದೇ ಯುದ್ಧಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಗಾಜಾ ಪಟ್ಟಿ ವಿರುದ್ಧದ ಯುದ್ಧಕ್ಕೆ ಇನ್ನೂ ಸಂಪೂರ್ಣ ವಿರಾಮ ಬಿದ್ದಿಲ್ಲ.

ಗಾಜಾ ಪಟ್ಟಿಯಲ್ಲಿ ಶಾಶ್ವತ ಶಾಂತಿ?
ಹೌದು, ಇದೀಗ ಇಸ್ರೇಲ್ ಎದುರು ಇರುವ ಮಹತ್ವದ ಸವಾಲು ಎಂದರೆ ಅದು ಗಾಜಾ ಪಟ್ಟಿ ಭಾಗದಲ್ಲಿ ಮಹತ್ವದ ಶಾಂತಿ ಒಪ್ಪಂದ ಘೋಷಣೆ ಮಾಡುವುದು. ಹೀಗಾಗಿ ಶಾಂತಿ ಒಪ್ಪಂದ ಘೋಷಣೆ ಮಾಡಲು ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ ಇಸ್ರೇಲ್ ಅಧಿಕಾರಿಗಳು. ಇದು ಒಂದು ಕಡೆ ಚರ್ಚೆಗೆ ಬಂದಿದ್ದರೆ, ಮತ್ತೊಂದು ಕಡೆ ಗಾಜಾ ಪಟ್ಟಿಯಲ್ಲಿ ಭಾರಿ ದೊಡ್ಡ ನಷ್ಟ ಉಂಟಾಗಿದ್ದು ಅಲ್ಲಿನ ಜನರಿಗೂ ಶಾಶ್ವತ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
2023ರ ಅಕ್ಟೋಬರ್ 7 ರಂದು ಶುರುವಾಗಿದ್ದ ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಈಗಾಗಲೇ ಸಾವಿರ ಸಾವಿರ ಜನರ ಜೀವ ಬಲಿಯಾಗಿದೆ. ಗಾಜಾದ ಭಾಗಶಃ ಕಟ್ಟಡಗಳು ಪೀಸ್ ಪೀಸ್ ಆಗಿವೆ. ಜೀವ ಉಳಿಸಿಕೊಳ್ಳಲು ನೂರಾರು ಕಿಲೋ ಮೀಟರ್ ದೂರ ಓಡಿ ಹೋಗಿದ್ದ ಜನ ಈಗ ವಾಪಸ್ ತಮ್ಮ ತಮ್ಮ ಮನೆಗಳಿಗೆ ಮರಳಿದ್ದು, ಅವರಿಗೆ ಸೂರಿನ ವ್ಯವಸ್ಥೆ ಮಾಡಬೇಕು ಎಂಬ ಬಗ್ಗೆ ಒತ್ತಾಯ ಕೇಳಿಬಂದಿದೆ.












Click it and Unblock the Notifications