ಫ್ಲೊರಿಡಾದ ಯೋಗ ಸ್ಟುಡಿಯೋದಲ್ಲಿ ಶೂಟೌಟ್: ಮೂವರು ಬಲಿ
ಫ್ಲೊರಿಡಾ, ನವೆಂಬರ್ 03: ಅಮೆರಿಕದ ಫ್ಲೊರಿಡಾದ ಯೋಗ ಸ್ಟುಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಗುಂಡು ಹಾರಿಸಲು ಆರಂಭಿಸಿದ ಕಾರಣ ಮೂವರು ಮೃತರಾಗಿದ್ದಾರೆ. ಮೂವರನ್ನು ಹತ್ಯೆಮಾಡಿದ ನಂತರ ಗನ್ ಮ್ಯಾನ್ ತಾನೂ ಗುಂಡುಕ್ಕಿಕೊಂಡು ಮೃತನಾಗಿದ್ದಾನೆ.
ಸ್ಥಳೀಯ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ಗನ್ ಮ್ಯಾನ್ ಗುಂಡು ಹಾರಿಸಲು ಆರಂಭಿಸುತ್ತಿದ್ದಂತೆಯೇ ತುರ್ತು ಸೇವೆಗೆ, ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತಾದರೂ ಸ್ಥಳಕ್ಕೆ ಪೊಲೀಸರು ಆಗಮಿಸುವ ಮುನ್ನವೇ ಗನ್ ಮ್ಯಾನ್ ತಾನೂ ಗುಂಡಿಕ್ಕಿಕೊಂದು ಮೃತನಾಗಿದ್ದ.
ಘಟನೆಗೆ ಕೌಟುಂಬಿಕ ಕಲಹವೇ ಕಾರಣವಿದ್ದಿರಬಹುದು ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇತ್ತೀಚೆಗಷ್ಟೆ ಪೆನ್ಸಿಲ್ವಿನಿಯಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ನಡೆದ ಶೂಟೌಟ್ ನಲ್ಲಿ ವ್ಯಕ್ತಿಯೊಬ್ಬ ಮೃತರಾಗಿದ್ದರು.
ಮೇ ತಿಂಗಳಲ್ಲಿ ಸ್ಯಾಂಟಫೆ ಹೈಸ್ಕೂಲ್ ನಲ್ಲಿ ನಡೆದ ಶೂಟೌಟ್ ನಲ್ಲಿ ವ್ಯಕ್ತಿಯೊಬ್ಬ 10 ಜನರನ್ನು ಹತ್ಯಗೈದಿದ್ದ.
ಇದಕ್ಕೂ ಮುನ್ನ ಫೆಬ್ರವರಿ ತಿಂಗಳಿನಲ್ಲಿ ಅಮೆರಿಕದ ಫ್ಲೋರಿಡಾ ಹೈಸ್ಕೂಲಿನಲ್ಲಿ ನಡೆದ ಭೀಕರ ಶೂಟೌಟ್ ವೊಂದರಲ್ಲಿ 17 ಜನ ಮೃತರಾಗಿದ್ದರು. ಈ ಕೃತ್ಯ ಎಸಗಿದ್ದು ಈ ಶಾಲೆಯ ಮಾಜಿ ವಿದ್ಯಾರ್ಥಿ ಎಂಬುದು ನಂತರ ದೃಢವಾಗಿತ್ತು.












Click it and Unblock the Notifications