Ukraine War: ರಷ್ಯಾ ಡೆಡ್ಲಿ ಡ್ರೋನ್ ಅಟ್ಯಾಕ್‌ಗೆ ನಲುಗಿದ ಉಕ್ರೇನ್, 4 ಜೀವಗಳು ಬಲಿ
ರಷ್ಯಾ ತನ್ನ ಶತ್ರು ಉಕ್ರೇನ್ ವಿರುದ್ಧ ಯುದ್ಧ ನಿಲ್ಲಿಸಿ ಶಾಂತವಾಗುವ ಯಾವುದೇ ಲಕ್ಷಣವೂ ಕಾಣುತ್ತಿಲ್ಲ. ಬದಲಾಗಿ ರಷ್ಯಾ ಸೇನೆಯಿಂದ ನಡೆಯುತ್ತಿರುವ ದಾಳಿ ಮತ್ತಷ್ಟು ಹೆಚ್ಚಾಗುತ್ತಿದ್ದು, ಸಾಮಾನ್ಯ ಜನರ ಪರಿಸ್ಥಿತಿ ಹೀನಾಯವಾಗಿದೆ. ಇದೀಗ ರಷ್ಯಾ ಸೇನೆಯಿಂದ ನಡೆದಿರುವ ಡೆಡ್ಲಿ ಡ್ರೋನ್ ಅಟ್ಯಾಕ್ ಪರಿಣಾಮ ನಾಲ್ವರು ಉಕ್ರೇನ್ ಪ್ರಜೆಗಳು ಮೃತಪಟ್ಟು, ಹತ್ತಾರು ಮಂದಿ ಆಸ್ಪತ್ರೆಗೆ ಸೇರಿದ್ದಾರೆ ಎಂದು ಆರೋಪಿಸಲಾಗಿದೆ.
ರಷ್ಯಾ & ಉಕ್ರೇನ್‌ನ ನಡುವೆ ಸಂಧಾನ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ತಮ್ಮ ಸರ್ಕಾರದ ಅಧಿಕಾರಿಗಳ ತಂಡವನ್ನು ಸೌದಿ ಅರೇಬಿಯಾದಲ್ಲಿ ನಿಯೋಜನೆ ಮಾಡಿದ್ದಾರೆ ಡೊನಾಲ್ಡ್ ಟ್ರಂಪ್. ಹೀಗೆ ಒಂದು ಕಡೆ ಅಮೆರಿಕದ ಸರ್ಕಾರ ಈ ಯುದ್ಧವನ್ನು ನಿಲ್ಲಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಆದರೆ ರಷ್ಯಾ & ಉಕ್ರೇನ್ ಮಾತ್ರ ಟ್ರಂಪ್ ಪಡುತ್ತಿರುವ ಶ್ರಮಕ್ಕೆ ಬೆಲೆಯನ್ನೇ ನೀಡದವರಂತೆ ಯುದ್ಧ ಮಾಡುತ್ತಿವೆ. ಅದೇ ರೀತಿ ದಿಢೀರ್ ರಷ್ಯಾ ಸೇನೆಯಿಂದ ಭೀಕರವಾದ ಡ್ರೋನ್ ದಾಳಿ ನಡೆದಿದೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ಹೆದರಿಕೆ?
ರಷ್ಯಾ ಈ ರೀತಿಯಾಗಿ ದಾಳಿ ನಡೆಸುತ್ತಿದ್ದರೆ ಇನ್ನೊಂದು ಕಡೆ ಅದನ್ನು ಎದುರಿಸುವ ಶಕ್ತಿ & ಸಂಪತ್ತು ಉಕ್ರೇನ್ ಬಳಿ ಇಲ್ಲ. ಹೀಗಾಗಿ ರಷ್ಯಾ ಏಟು ಕೊಡುತ್ತಿದ್ದರೂ ಉಕ್ರೇನ್ ಏನನ್ನೂ ಮಾಡಲು ಆಗದಂತೆ ಕೂತುಬಿಟ್ಟಿದೆ. ಮತ್ತೊಂದು ಕಡೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ರಷ್ಯಾ ಸೇನೆಯ ಭೀಕರ ದಾಳಿಯನ್ನು ನೋಡಿ ಬೆಚ್ಚಿಬಿದ್ದಿದ್ದು, ಹೆದರಿದಂತೆ ಕಾಣುತ್ತಿದೆ.
ಉಕ್ರೇನ್ ಸಂಸತ್ ಚುನಾವಣೆಗೆ ಒತ್ತಾಯ
ಹೌದು, ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಷ್ಯಾ ಅಧ್ಯಕ್ಷ ಪುಟಿನ್ ಅವರು ಶೀಘ್ರದಲ್ಲೇ ಉಕ್ರೇನ್ ಸಂಸತ್‌ಗೆ ಚುನಾವಣೆ ನಡೆಸಿ ಎಂದು ಡಿಮ್ಯಾಂಡ್ ಇಟ್ಟಿದ್ದಾರೆ. ಈ ಮೂಲಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಹೊಸ ಶಾಕ್ ಕೊಟ್ಟಿದ್ದಾರೆ. 2024ರ ಮೇ ತಿಂಗಳಲ್ಲಿಯೇ ವೊಲೊಡಿಮಿರ್ ಝೆಲೆನ್ಸ್ಕಿ ಅಧಿಕಾರದ ಅವಧಿ ಮುಕ್ತಾಯವಾಗಿದ್ದು, ಹೀಗಿದ್ದರೂ ಸುಮಾರು 1 ವರ್ಷದಿಂದ ಆಡಳಿತ ವಿಸ್ತರಣೆ ಮಾಡಿಕೊಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಬದ್ಧ ಆಡಳಿತ ಸ್ಥಾಪನೆಗೆ ವ್ಲಾದಿಮಿರ್ ಪುಟಿನ್ ಆಗ್ರಹಿಸಿದ್ದಾರೆ.
ಒಟ್ನಲ್ಲಿ ರಷ್ಯಾ ಏಟು ಕೊಡುವುದಕ್ಕೂ, ಉಕ್ರೇನ್ ಅದಕ್ಕೆ ಪ್ರತಿಕ್ರಿಯೆ ಕೊಡಲು ಹೋಗಿ ಭಾರಿ ದೊಡ್ಡ ದೊಡ್ಡ ಎಡವಟ್ಟು ಮಾಡಿಕೊಳ್ಳುವುದಕ್ಕೂ ಸರಿಯಾಗಿದೆ. ಹೀಗೆ ಇಬ್ಬರ ನಡುವಿನ ಈ ವಾರ್ ಸದ್ಯಕ್ಕೆ ನಿಲ್ಲುವ ಲಕ್ಷಣ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಯುದ್ಧ ಭೀಕರತೆ ಇನ್ನಷ್ಟು ಹೆಚ್ಚಾಗಿ ಪರಿಸ್ಥಿತಿ ಕೈಮೀರುವ ಭಯ ಕೂಡ ಯುರೋಪ್ ದೇಶಗಳಲ್ಲಿ ಆವರಿಸಿದೆ.












Click it and Unblock the Notifications