Donald Trump: ಸಂಬಂಧ ಮುಚ್ಚಿಡಲು ನೀಲಿಚಿತ್ರ ತಾರೆಗೆ ಹಣ ನೀಡಿದ ಅಮೆರಿಕ ಮಾಜಿ ಅಧ್ಯಕ್ಷ- ಬಂಧನ ಸಾಧ್ಯತೆ
ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ಗೆ ಹಣ ಸಂದಾಯ ಮಾಡಿದ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸುವ ಸಾಧ್ಯತೆ ಇದೆ.
ವಾಷಿಂಗ್ಟನ್, ಮಾರ್ಚ್ 21: 2016 ರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ಗೆ ಹಣ ಸಂದಾಯ ಮಾಡಿದ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಮಂಗಳವಾರ ತಡರಾತ್ರಿ ಅಥವಾ ಬುಧವಾರದಂದು ಟ್ರಂಪ್ ಅವರನ್ನು ಅಮೆರಿಕ ಪೊಲೀಸರು ಬಂಧಿಸಬಹುದೆಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
2016 ರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಸ್ಟಾರ್ಮಿ ಡೇನಿಯಲ್ಸ್‌ಗೆ ಟ್ರಂಪ್ ಅವರ ಮಾಜಿ ವಕೀಲ ಮೈಕೆಲ್ ಕೋಹೆನ್ $130,000 ಹಣ ಪಾವತಿ ಮಾಡಿದ್ದರು ಎಂದು ತಿಳಿದುಬಂದಿದೆ. ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರ ಕಚೇರಿ ಈ ಆರೋಪದ ಕುರಿತು ತನಿಖೆ ನಡೆಸುತ್ತಿದೆ.

ಟ್ರಂಪ್ ಅವರು ಮಾರ್ಚ್ 18 ರಂದು ತಮ್ಮ ಬೆಂಬಲಿಗರಿಗೆ ಪ್ರತಿಭಟನೆಗಳನ್ನು ನಡೆಸಲು ಕರೆ ನೀಡಿದ್ದರು. ಅವರನ್ನು ಮಂಗಳವಾರ ಬಂಧಿಸಲಾಗುವುದು ಎಂಬ ನಿರೀಕ್ಷೆ ಇದೆ.
ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರು ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟ ವ್ಯವಸ್ಥೆಯ ಭಾಗವಾಗಿದ್ದಾರೆ. ನನ್ನ ಬೆಂಬಲಿಗರು ಇದರ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ಟ್ರಂಪ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಟ್ರಂಪ್ ಮೇಲಿನ ಆರೋಪವೇನು?
ರಾಯಿಟರ್ಸ್ ಪ್ರಕಾರ, 2006 ರಲ್ಲಿ ಟ್ರಂಪ್ ಜೊತೆಗೆ ಸ್ಟಾರ್ಮಿ ಡೇನಿಯಲ್ಸ್ ಲೈಂಗಿಕ ಸಂಪರ್ಕವನ್ನು ಹೊಂದಿದ್ದರು. ಇದರ ಕುರಿತು ಎಲ್ಲಿಯೂ ಬಾಯಿ ಬಿಡಬಾರದು ಎಂಬ ಕಾರಣಕ್ಕೆ ಡೇನಿಯಲ್ಸ್‌ಗೆ ಟ್ರಂಪ್ ಕಡೆಯಿಂದ ಹಣ ಸಂದಾಯವಾಯಿತು. $130,000 ( 1,07 ಕೋಟಿ ) ಪಾವತಿಯ ಬಗ್ಗೆ ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿಗೆ ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರು ಸಾಕ್ಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ನೀಲಿ ಚಿತ್ರತಾರೆ ಸ್ಟಾರ್ಮಿ ಡೇನಿಯಲ್ಸ್ ಅವರ ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್ ಆಗಿದೆ.

BBC ವರದಿಯ ಪ್ರಕಾರ, ಕೊಹೆನ್ ( ಟ್ರಂಪ್ ಅವರ ಆಗಿನ ವಕೀಲರು ) ಡೇನಿಯಲ್ಸ್ ಪಾವತಿಯನ್ನು ಮಾಡಿದರು. ಆ ನಂತರ ಟ್ರಂಪ್ ಕೊಹೆನ್ ಅವರಿಗೆ ಮರುಪಾವತಿ ಮಾಡಿದರು. ಕೋಹೆನ್ ಪಾವತಿ ಹಾಗೂ ಮರುಪಾವತಿಯ ದಾಖಲೆಯು 'ಕಾನೂನು ಶುಲ್ಕ' ಪಾವತಿಯಾಗಿದೆ ಎಂದು ಹೇಳುತ್ತದೆ. ಇದು ಕಾನೂನಿನ ದಿಕ್ಕು ತಪ್ಪಿಸುವ ಕೆಲಸವಾಗಿದೆ ಎಂದು ಆರೋಪಿಸಲಾಗಿದೆ.
ಟ್ರಂಪ್ ಅವರು ಲೈಂಗಿಕ ಸಂಬಂಧವನ್ನು ನಿರಾಕರಿಸಿದ್ದಾರೆ. ಇದು ಅವರ ಪ್ರಸ್ತುತ ಪತ್ನಿ ಮೆಲೆನಿಯಾ ಟ್ರಂಪ್ ಅವರನ್ನು ಮದುವೆಯಾದ ನಂತರ ಮತ್ತು ಅವರ ಮಗ ಬ್ಯಾರನ್ ಜನಿಸಿದ ಕೆಲವು ತಿಂಗಳ ನಂತರ ನಡೆದಿದೆ ಎಂದು ಆರೋಪಿಸಲಾಗಿದೆ.
ಸ್ಟಾರ್ಮಿ ಡೇನಿಯಲ್ಸ್ ಪ್ರಕರಣ ಹೊರಬಂದಿದ್ದ ಹೇಗೆ?
2006ರಲ್ಲಿ ಡೊನಾಲ್ಡ್ ಟ್ರಂಪ್ ಅವರು ರಿಯಾಲಿಟಿ ಶೋ 'ದಿ ಅಪ್ರೆಂಟಿಸ್' ನಡೆಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ತನ್ನನ್ನು ಹಾಕಿಕೊಳ್ಳುವುದಾಗಿ ಟ್ರಂಪ್ ಆಸೆ ಹುಟ್ಟಿಸಿದರು. ಆಗ ನನಗೆ 27 ವರ್ಷ ವಯಸ್ಸಾಗಿತ್ತು. ಆ ಭರವಸೆಗೆ ತಲೆದೂಗಿದ ನಾನು ಟ್ರಂಪ್ ಜೊತೆ ಲೈಂಗಿಕ ಸಂಬಂಧ ಹೊಂದಲು ಮುಂದಾದೆ. ನಾನು ಅವರ ಜೊತೆ ಲೈಂಗಿಕ ಸಂಪರ್ಕ ಹೊಂದಿದೆ. ಟ್ರಂಪ್ ಅವರು ನನಗೆ ಸಾಂದರ್ಭಿಕವಾಗಿ 'ಹನಿ ಬಂಚ್' ಎಂದು ಕರೆಯುತ್ತಿದ್ದರು ಎಂದು ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಹೇಳಿಕೊಂಡಿದ್ದಾರೆ.

2016 ರಲ್ಲಿ ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ಕೈಗೊಂಡರು. ಆಗ ನಾನು ನನ್ನ ಜೀವನ ವೃತ್ತಾಂತವನ್ನು ಬಹಿರಂಗ ಪಡಿಸುವುದಾಗಿ ಹೇಳಿದೆ. ಆಗ ಟ್ರಂಪ್ ಅವರ ಕಾನೂನು ಸಲಹೆಗಾರರು ನನಗೆ ಕಾನೂನಿನ ಮೂಲಕ ಬೆದರಿಗೆ ಒಡ್ಡಿದರು. ಆ ನಂತರ ನಾನು ಮೌನವಾಗಿರಬೇಕೆಂದು ಹಣವನ್ನೂ ಸಂದಾಯ ಮಾಡಿದರು ಎಂದು ಸ್ಟಾರ್ಮಿ ಡೇನಿಯಲ್ಸ್ 'ನ್ಯೂಯಾರ್ಕ್ ಟೈಮ್ಸ್' ಗೆ ತಿಳಿಸಿದ್ದಾರೆ.












Click it and Unblock the Notifications