Donald Trump: ಟ್ರಂಪ್ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಜೋ ಬೈಡನ್
ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಮತ್ತು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯೆ ಮಾತಿನ ಚಕಮಕಿ ಮತ್ತಷ್ಟು ಹೆಚ್ಚಾಗಿದೆ. ಕೆಲವು ದಿನಗಳ ಹಿಂದಷ್ಟೇ ಉಕ್ರೇನ್ ಯುದ್ಧದಲ್ಲಿ ನನ್ನ ತಪ್ಪು ಇಲ್ಲ, ಇದು ಜೋ ಬೈಡನ್ & ಉಕ್ರೇನ್ ಅಧ್ಯಕ್ಷ ಮಾಡಿದ್ದ ತಪ್ಪು ಎಂದಿದ್ದ ಟ್ರಂಪ್ ಮಾತಿಗೆ ಇದೀಗ ತಿರುಗೇಟು ಸಿಕ್ಕಿದೆ. ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ರೊಚ್ಚಿಗೆದ್ದು ಡೊನಾಲ್ಡ್ ಟ್ರಂಪ್ ಆಡಳಿತದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?
ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ನೂರಾರು ವಿವಾದ ಮೈಮೇಲೆ ಎಳೆದುಕೊಂಡಿದ್ದ ಟ್ರಂಪ್, ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆದ್ದು ಅಧ್ಯಕ್ಷರಾದರೂ ಅದನ್ನ ನಿಲ್ಲಿಸುತ್ತಿಲ್ಲ. ದಿನದಿಂದ ದಿನಕ್ಕೆ ಡೊನಾಲ್ಡ್ ಟ್ರಂಪ್ ಅವರ ಎಡವಟ್ಟುಗಳ ಸರದಿ ಜಾಸ್ತಿ ಆಗುತ್ತಿದ್ದು, ಈ ರೀತಿ ಒಂದಾದ ನಂತರ ಒಂದು ವಿವಾದ ಟ್ರಂಪ್ ತಲೆಗೆ ಸುತ್ತಿಕೊಳ್ಳುತ್ತಿದೆ. ಇದರ ಜೊತೆಗೆ, ಜೋ ಬೈಡನ್ ಬಗ್ಗೆ ಕೂಡ ವಿವಾದ ಸೃಷ್ಟಿ ಮಾಡುವ ಹೇಳಿಕೆ ನೀಡಿದ್ದರು ಟ್ರಂಪ್. ಸದ್ಯ ಉಕ್ರೇನ್ ಯುದ್ಧ ನಿಲ್ಲಿಸಲು ಪ್ರಯತ್ನ ಮಾಡುತ್ತಿರುವ ಟ್ರಂಪ್, ಇದೇ ಸಮಯದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡುವ ಹೇಳಿಕೆ ನೀಡಿ ಬೈಡನ್ ಪಿತ್ತ ನೆತ್ತಿಗೇರಿಸಿದ್ದರು.

ಡೊನಾಲ್ಡ್ ಟ್ರಂಪ್‌ದು ವಿನಾಶಕಾರಿ ಆಡಳಿತ!
ಜೋ ಬೈಡನ್ ಈಗ ಡೊನಾಲ್ಡ್ ಟ್ರಂಪ್ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಬಂದ ನಂತರ ಬಡವರಿಗೆ ಸಂಕಷ್ಟ ಎದುರಾಗಿ, ಎಲ್ಲವೂ ಅಲ್ಲೋಲ ಕಲ್ಲೋಲ ಎನ್ನುವಂತೆ ಆಗಿರುವ ಸಮಯದಲ್ಲೇ ಜೋ ಬೈಡನ್ ಮಾತನಾಡಿದ್ದಾರೆ. ಹಾಗೇ ತಮ್ಮ ಮಾತುಗಳಲ್ಲೇ ಕಠುವಾಗಿ ಟ್ರಂಪ್ ಆಡಳಿತದ ಬಗ್ಗೆ ಟೀಕೆ ವ್ಯಕ್ತಪಡಿಸಿ, ಭಾರಿ ಆಕ್ರೋಶ ಹೊರ ಹಾಕಿದ್ದಾರೆ. ಬಡವರ ಬದುಕಿನ ಜೊತೆಗೆ ಡೊನಾಲ್ಡ್ ಟ್ರಂಪ್ ಸರ್ಕಾರವು ಆಟ ಆಡುತ್ತಿದೆ ಎಂಬ ಆರೋಪವನ್ನೂ ಇದೀಗ ಜೋ ಬೈಡನ್ ಮಾಡಿದ್ದಾರೆ.
ಬೈಡನ್ ಬಗ್ಗೆ ಟ್ರಂಪ್ ಹೇಳಿದ್ದೇನು?
ಅಮೆರಿಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ವಿರುದ್ಧ ಕೆಂಡಕಾರಿದ್ದರು. ಅನ್ಯಾಯವಾಗಿ ರಷ್ಯಾ & ಉಕ್ರೇನ್ ಯುದ್ಧ ಶುರು ಆಗಲು ನೀವೇ ಕಾರಣ ಅಂತಾ ಗುಡುಗಿದ್ದರು ಟ್ರಂಪ್. ಈ ಮೂಲಕ ಉಕ್ರೇನ್ ಅಧ್ಯಕ್ಷನಿಗೂ ಚಳಿ ಬಿಡಿಸಿದ್ದ ಡೊನಾಲ್ಡ್ ಟ್ರಂಪ್, ಈಗ ಆಗಿರುವ ಅವಾಂತರಕ್ಕೆ ನೀವಿಬ್ಬರೂ ಪ್ರಮುಖ ಕಾರಣರು ಅಂತಾ ಆಕ್ರೋಶ ಹೊರ ಹಾಕಿದ್ದರು. ಅಲ್ಲದೆ ನಾನು ಯುದ್ಧ ನಿಲ್ಲಿಸೋಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ಹೀಗಿದ್ದರೂ ಯುದ್ಧ ನಿಲ್ಲಿಸಲು ಸೂಕ್ತ ವಾತಾವರಣವೇ ಸೃಷ್ಟಿಯಾಗುತ್ತಿಲ್ಲ. ಪರಿಸ್ಥಿತಿ ಇಷ್ಟು ಕೈಮೀರಿ ಹೋಗಲು ಜೋ ಬೈಡನ್ ಮತ್ತು ಝೆಲೆನ್ಸ್ಕಿ ಕಾರಣ ಅಂತ ಆರೋಪ ಮಾಡಿದ್ದರು ಟ್ರಂಪ್. ಇದೀಗ ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ ಬೈಡನ್.












Click it and Unblock the Notifications