2 ವರ್ಷ ರಹಸ್ಯ ಡೇಟಿಂಗ್ ಮಾಡಿ ಮದುವೆಯಾದ ಸಲಿಂಗಿ ಜೋಡಿ!
ಸಲಿಂಗಿ ಮಹಿಳೆಯರಾದ ಮಾಜಿ ಮಿಸ್ ಅರ್ಜೆಂಟೀನಾ ಆಗಿದ್ದ ಮರಿಯಾನಾ ವರೆಲಾ ಮತ್ತು ಮಿಸ್ ಪೋರ್ಟೊ ರಿಕೊ ಫ್ಯಾಬಿಯೊಲಾ ವ್ಯಾಲೆಂಟೈನ್ (ಲೆಸ್ಬಿಯನ್ ಮಹಿಳೆಯರು) ಮದುವೆಯಾಗಿದ್ದಾರೆ. ಪ್ರೇಮ ಸಂಬಂಧದಲ್ಲಿದ್ದ ಈ ಸಲಿಂಗಿ ಜೋಡಿಯು 2020ರಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಭೇಟಿಯಾದ್ದರು.
ಇದಾದ ನಂತರ ಇವರಿಬ್ಬರು ನಡುವೆ ಸಲುಗೆ ಬೆಳದಿತ್ತು. ಇದೀಗ ರಹಸ್ಯ ಸಮಾರಂಭವೊಂದರಲ್ಲಿ ವಿವಾಹವಾಗಿದ್ದಾರೆ. ಈ ಕುರಿತಾದ ಅಧಿಕೃತ ಮಾಹಿತಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಕಳೆದ ಅಕ್ಟೋಬರ್ 28ರಂದು ರಹಸ್ಯ ಸಮಾರಂಭದಲ್ಲಿ ವಿವಾಹವಾದರು ವಿಡಿಯೋದ ಶೀರ್ಷಿಕೆಯಲ್ಲಿ "ನಮ್ಮ ಸಂಬಂಧವನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದ ನಾವು ಅಕ್ಟೋಬರ್ 28ರಂದು ಮದುವೆಯಾಗಿದ್ದೇವೆ. ನಾಮ್ಮಿಬ್ಬರ ನಡುವಿನ ಪ್ರೀತಿಯ ಸಂಬಂಧವನ್ನು ಜಗತ್ತಿಗೆ ಬಹಿರಂಗಪಡಿಸುತ್ತಿದ್ದೇವೆ ಹಾಗೂ ನಾವು ಮದುವೆಯಾಗಿ ಒಂದಾಗಿದ್ದೇವೆ" ಎಂದು ಈ ಸಲಿಂಗಿ ಮಹಿಳೆಯರು ಹೇಳಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಕೂಡಲೇ ವಿಡಿಯೋ ವೈರಲ್ ಆಗಿದೆ. ಇಲ್ಲಿಯವರೆಗೆ ಲಕ್ಷಾಂತರ ಜನರು ವಿಡಿಯೋ ಇಷ್ಟಪಟ್ಟಿದ್ದಾರೆ ಮತ್ತು ಎರಡು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸೌಂದರ್ಯ ರಾಣಿಯರಿಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಮತ್ತೊಂದೆಡೆ, ಎರಡು ವರ್ಷಗಳ ಸಂಬಂಧದ ನಂತರ ಜೋಡಿಯಾಗಿ ಅಭಿಮಾನಿಗಳ ಮುಂದೆ ಬರುತ್ತಿರುವುದು ಅಚ್ಚರಿ ಮೂಡಿಸಿದೆ. ನವ ಜೋಡಿಗೆ ಜನರು ವಿಭಿನ್ನ ರೀತಿಯಲ್ಲಿ ಶುಭ ಹಾರೈಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಈ ಜೋಡಿಯ ಪ್ರೀತಿಯ ಕ್ಷಣಗಳಿದ್ದು, ಇದು ಅವರಿಗಾಗಿಯೇ ವಿಶೇಷವಾಗಿದೆ. ಅವರು ರಜಾದಿನಗಳನ್ನು ಆಚರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮರಿಯಾನಾ ವರೆಲಾ ಜೊತೆ ಫ್ಯಾಬಿಯೊಲಾ ವ್ಯಾಲೆಂಟೈನ್ ಕೂಡ ಐಷಾರಾಮಿ ಮದುವೆಯ ಪ್ರಸ್ತಾಪವನ್ನು ಹಂಚಿಕೊಳ್ಳುವುದನ್ನು ಕಾಣಬಹುದು. ಇದರಲ್ಲಿ ಇಡೀ ಕೊಣೆಯನ್ನು ದೀಪಗಳು ಮತ್ತು ಬಲೂನ್‌ಗಳಿಂದ ಅಲಂಕರಿಸಲಾಗಿದೆ ಮತ್ತು ಅವಳು ತನ್ನ ಉಂಗುರವನ್ನು ತೋರಿಸುತ್ತಿದ್ದಾಳೆ. ಮದುವೆಯ ದಿನದ ಒಂದು ನೋಟವು ವೀಡಿಯೊದ ಕೊನೆಯಲ್ಲಿ ಗೋಚರಿಸುತ್ತದೆ. ಇದರಲ್ಲಿ ಅವಳು ಸಾಂಪ್ರದಾಯಿಕ ಬಿಳಿ ಉಡುಪನ್ನು ಧರಿಸಿದ್ದಾರೆ.












Click it and Unblock the Notifications