Pizza: ಮಾರುಕಟ್ಟೆಯಲ್ಲಿ ಈಗ ಡಿಸ್ಕ್ ಡಿಸೈನ್ ಕಪ್ಪೆ ಪಿಜ್ಜಾದ್ದೇ ಸುದ್ದಿ...!
Goblin Pizza: ಪಿಜ್ಜಾ ಹಟ್ ಮಾರುಕಟ್ಟೆಯ ಡಿಮ್ಯಾಂಡ್‌ಗೆ ತಕ್ಕಂತೆ ಹೊಸ ಮಾದರಿಯ ಪಿಜ್ಜಾಗಳನ್ನು ಬಿಡುಗಡೆ ಮಾಡುತ್ತದೆ. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪಿಜ್ಜಾ ಹಾಗೂ ಬರ್ಗರ್‌ಗೆ ಹೊಸ ಮಾರುಕಟ್ಟೆಯೇ ಸೃಷ್ಟಿಯಾಗಿದೆ. ಯುವ ಸಮೂಹದ ಫುಡ್ ಲಿಸ್ಟ್ ಹಾಗೂ ಫೇವರೆಟ್ ಲಿಸ್ಟ್‌ನಲ್ಲಿ ಪಿಜ್ಜಾ ಹಾಗೂ ಫಾಸ್ಟ್‌ಪುಡ್‌ಗಳಿಗೆ ಮೊದಲ ಸ್ಥಾನ. ಇನ್ನು ಚೀನಾದವರ ಫುಡ್ ಟೆಸ್ಟ್ ಹಾಗೂ ಫುಡ್ ಸ್ಟೈನ್‌ನ ಬಗ್ಗೆಯಂತೂ ಹೇಳುವುದೇ ಬೇಡ ಅವರ ಆಹಾರವನ್ನು ನೋಡಿದರೆನೇ ಭಾರತೀಯರು ಕಿ.ಮೀ ದೂರು ಓಡ್ತಾರೆ. ಬಾವುಲಿ, ನಾಯಿ & ಜಿರಳೆ ಅಂತ ಅವರು ತಿನ್ನದೆ ಇರುವ ಆಹಾರವೇ ಇಲ್ಲವೇನೋ. ಈಗ ಚೀನಾದಲ್ಲಿ ಪಿಜ್ಜಾ ಹಟ್ ಡೀಪ್ ಫ್ರೈಡ್ ಫ್ರಾಗ್ (ಕಪ್ಪೆ ಫ್ರೈ) ತುಂಬಾ ಫೇಮಸ್ ಆಗಿದ್ಯಂತೆ!
ಹೌದು ನೀವು ಓದಿದ್ದು ಸರಿಯಾಗಿಯೇ ಇದೆ. ಚೀನಾದವರ ಆಹಾರ ಪದ್ಧತಿಯ ಪರಿಚಯ ಇರುವವರಿಗೆ ಈ ಕಪ್ಪೆ ಫ್ರೈ ಹೊಸದು ಅಥವಾ ಅಚ್ಚರಿ ಎನಿಸುವುದಿಲ್ಲ. ಆದರೆ, ಚೀನಾದ ಹೊಸ ಪಿಜ್ಜಾವನ್ನು ನೋಡಿದರೆ ಓಡುವುದು ಗ್ಯಾರಂಟಿ. ಚೀನಾ ಪಿಜ್ಜಾ ಹಟ್ ಇದೀಗ ಡೀಪ್ ಫ್ರೈಡ್ ಫ್ರಾಗ್ ಎಂಬ ಕಪ್ಪೆ ಪಿಜ್ಜಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಈ ಚೀನಾದವರು ಕೈಗೆ ಸಿಕ್ಕಿದನ್ನೆಲ್ಲ ತಿಂತಾರೆ ನಿಜ. ಆದರೆ, ಕಪ್ಪೆನ ಫ್ರೈ ಮಾಡಿ ಅದನ್ನ ಪಿಜ್ಜಾದಲ್ಲೂ ತಿಂತಾರೆ ಶಿವ.. ಶಿವ ನಮ್ಮ ಕಣ್ಣಲ್ಲಿ ಇನ್ನೂ ಏನ್ ಏನ್ ನೋಡ್ಬೇಕೋ ಅಂತಿದ್ದಾರೆ ಜನ.

ಚೀನಾದ ಪಿಜ್ಜಾ ಹಟ್ ಎನ್ನುವ ಸಂಸ್ಥೆಯು ಅಲ್ಲಿ ಗಾಬ್ಲಿನ್ ಪಿಜ್ಜಾ ಅಂತ ಒಂದು ಪಿಜ್ಜಾನ ಪರಿಚಯಿಸಿದೆ. ಇದನ್ನು ಕಪ್ಪೆ ಪಿಜ್ಜಾ ಅಂತ ಸೋಷಿಯಲ್ ಮೀಡಿಯಾದಲ್ಲಿ ಜನ ಕರಿತಿದ್ದಾರೆ. ಹಲವರು ಸೋಷಿಯಲ್ ಮೀಡಿಯಾದ ಎಕ್ಸ್‌ನಲ್ಲಿ ಕಪ್ಪೆ ಪಿಜ್ಜಾದ ಚಿತ್ರವನ್ನು ಹಂಚಿಕೊಂಡಿದ್ದು, ಕಪ್ಪೆ ಪಿಜ್ಜಾ ಟ್ರೈ ಮಾಡ್ತೀರಾ ಅಂತ ಕೇಳಿದ್ದಾರೆ. ನಿಮಗೆ ಪೈನಾಪಲ್ ಪಿಜ್ಜಾ ಇಷ್ಟವಾಗದೆ ಇರಬಹುದು. ಇಲ್ಲಿ ನೀವೆಂದೂ ಕೇಳದ ಪಿಜ್ಜಾವೊಂದು ಬಂದಿದೆ. ಇದರ ಟೇಸ್ಟ್ ಮಾಡ್ತೀರಾ ಅಂತ ತಮಾಷೆ ಮಾಡಿದ್ದಾರೆ.
ಆಹಾರ ವಿಕೃತಿ: ಭಾರತದಲ್ಲೂ ಇತ್ತೀಚಿನ ವರ್ಷಗಳಲ್ಲಿ ಆಹಾರ ವಿಕೃತಿ ಜೋರಾಗಿಯೇ ಇದೆ. ಒಂದೊಂದು ಆಹಾರವನ್ನು ಒಂದೊಂದು ರೀತಿ ಮಾಡಿ ತಿನ್ನುವುದು ಟ್ರೆಂಡ್ ಆಗಿ ಹೋಗಿದೆ. ಅದರಲ್ಲಿ ಜಾಮೂನು ಬೋಂಡಾ, ಚಾಕಲೆಟ್ ಮಸಾಲೆದೋಸೆ ಅಂತ ಫುಡ್ ಅಂತ ಆಹಾರಗಳು ಭಾರತದಲ್ಲೂ ಫೇಮಸ್ ಆಗಿವೆ. ಅಲ್ಲದೇ ಮ್ಯಾಗಿ ಜೊತೆ ಸ್ಪ್ರೈಟ್ ಜ್ಯೂಸ್ ಸೇರಿಸುವ ವಿಡಿಯೋಗಳು ಸಹ ವೈರಲ್ ಆಗಿದ್ದವು. ಆದರೆ, ಸಮಾಧಾನಕರ ಸಂಗತಿಯೆಂದರೆ ನಮ್ಮಲ್ಲಿ ಇನ್ನೂ ಚೀನಾದಷ್ಟು ಆಹಾರ ಪದ್ಧತಿ ಕೆಟ್ಟಿಲ್ಲ. ಭಾರತದಲ್ಲೂ ಮಾಂಸ ಪ್ರಿಯರ ಸಂಖ್ಯೆ ಹೆಚ್ಚಾಗಿದೆ. ಹಾಗಂತ ಈ ಚೀನಾದವರ ರೀತಿ ನಮ್ಮ ಭಾರತೀಯರು ಸಿಕ್ಕಿದೆಲ್ಲವನ್ನೂ ಬಾಯಿಗೆ ಹಾಕಿಕೊಳ್ಳಲ್ಲ.

the most weird product at Chinese pizza hut, fried bull frog and cilantro pizza "Goblin", collaboration with the DNF game 🤣 https://t.co/TEq9qBPGvq pic.twitter.com/2LniKpZCAZ
— Alysterwolf 🇨🇳 (@Alysterwolf) November 21, 2024
ಆಹಾರ ಅವರವರ ಆಯ್ಕೆ ಅದನ್ನು ಜಡ್ಜ್ ಮಾಡಬಾರದು. ಮಾಂಸಹಾರವೋ ಸಸ್ಯಹಾರವೋ ಜನರಿಗೆ ಇಷ್ಟವಾದ ಆಹಾರವನ್ನು ಅವರು ತಿಂತಾರೆ ಅನ್ನೋದನ್ನು ಒಪ್ಪಿಕೊಳ್ಳೋಣ. ಆದರೆ, ಆಹಾರವನ್ನು ವಿಕೃತಗೊಳಿಸಿ ಈ ರೀತಿ ತಿನ್ನೋರನ್ನ ಏನಂತ ಕರಿಯೋಣ ಅಂತಿದ್ದಾರೆ ನೆಟ್ಟಿಗರು.. ಜಗತ್ತು ಏನಾದರೂ ಹೇಳಿಕೊಳ್ಳಲಿ ನಾವು ಮಾತ್ರ ನಮಗೆ ಇಷ್ಟ ಬಂದಿದ್ದು ತಿಂತೀವಿ ಅಂತಿದ್ದಾರಂತೆ ಚೀನಾದವರು. ಇದೇ ಕಾರಣಕ್ಕೆ ಇರಬೇಕು ಚೀನಾದಲ್ಲಿ ಈ ಹೊಸ ಕಪ್ಪೆ ಪಿಜ್ಜಾ ಸೇಲ್ ಮಾತ್ರ ಟಾಪ್‌ನಲ್ಲಿದ್ಯಂತೆ!
-
Viral Videlo: ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Gas Bill: ಹೋಟೆಲ್ ಬಿಲ್ನಲ್ಲಿ ಗ್ರಾಹಕರಿಗೆ 'ಗ್ಯಾಸ್ ಶುಲ್ಕ' ವಿಧಿಸುವಂತಿಲ್ಲ: ಕೇಂದ್ರದಿಂದ ಖಡಕ್ ಎಚ್ಚರಿಕೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ










Click it and Unblock the Notifications