ಫ್ಲೋರಿಡಾ ಒತ್ತೆಯಾಳು ಪ್ರಕರಣ ಅಂತ್ಯ, ಎಲ್ಲರೂ ಸುರಕ್ಷಿತ!

Posted By:
Subscribe to Oneindia Kannada

ಫ್ಲೋರಿಡಾ, ಡಿಸೆಂಬರ್ 01: ಇಲ್ಲಿನ ಜಾಕ್ಸನ್ ವಿಲ್ಲೆಯ ಬ್ಯಾಂಕೊಂದರಲ್ಲಿ ಮೂಡಿದ್ದ ಆತಂಕ ಈಗ ನಿವಾರಣೆಯಾಗಿದೆ. ಬ್ಯಾಂಕಿನಲ್ಲಿ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯೊಬ್ಬ, 11 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ.

ಆದರೆ, ಈಗ ಕಳ್ಳನನ್ನು ಬಂಧಿಸಲಾಗಿದೆ ಎಂದು ಜಾಕ್ಸನ್ ವಿಲ್ಲೆ ಪೊಲೀಸರು ಹೇಳಿದ್ದಾರೆ.

Florida hostage crisis ends: 11 rescued

ಎಜ್ಡ್ ವುಡ್ ಅವಿನ್ಯೂ ವೆಸ್ಟ್ ನಲ್ಲಿರುವ ಕಮ್ಯೂನಿಟಿ ಫಸ್ಟ್ ಕ್ರೆಡಿಟ್ ಯೂನಿಯನ್ ನಲ್ಲಿ ನಡೆದ ಘಟನೆಯನ್ನು SWAT ತಂಡ ನಾಜೂಕಾಗಿ ನಿಭಾಯಿಸಿದೆ.


ಸುತ್ತ ಮುತ್ತಾ ಇದ್ದ ನಾಗರಿಕರನ್ನು ದೂರಕ್ಕೆ ಕಳಿಸಿ, ಒತ್ತೆಯಾಳುಗಳನ್ನು ಇರಿಸಿಕೊಂಡಿದ್ದ ವ್ಯಕ್ತಿ ಜತೆ ಮಾತುಕತೆ ನಡೆಸಿದ್ದಾರೆ. ಕಾರ್ಯಾಚರಣೆ ನಡೆಸುವುದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಜಾಕ್ಸನ್ ವಿಲ್ಲೆ ಪೊಲೀಸರು ಸೂಚಿಸಿದ್ದರು.

ಒಟ್ಟಾರೆ, ಕಳ್ಳನನ್ನು ಉಪಾಯವಾಗಿ ಬಂಧಿಸಿ, ಒತ್ತೆಯಾಳಾಗಿದ್ದ 11 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Florida hostage crisis ends
English summary
A robber, who took hostages at a bank in Jacksonville, Florida, has been taken into custody. All the 11 hostages have been rescued, said Jacksonville Sheriff's Office.
Please Wait while comments are loading...