ಫ್ಲೋರಿಡಾ ನೈಟ್ ಕ್ಲಬ್ ನಲ್ಲಿ ಶೂಟೌಟ್: 2 ಸಾವು, 14 ಮಂದಿಗೆ ಗಾಯ
ಫ್ಲೋರಿಡಾ, ಜುಲೈ 25: ಇಲ್ಲಿನ ನೈಟ್ ಕ್ಲಬ್ ವೊಂದರಲ್ಲಿ ಶೂಟೌಟ್ ನಡೆದಿದ್ದು, ಇಬ್ಬರು ಮೃತಪಟ್ಟು, 14ಕ್ಕೂ ಅಧಿಕ ಮಂದಿಗೆ ಗಾಯಗಳಾಗಿರುವ್ ವರದಿ ಬಂದಿದೆ.
ಫೋರ್ಟ್ ಮೇರ್ಸ್ ನ ಕ್ಲಬ್ ಬ್ಲೂನ ವಾಹನ ನಿಲುಗಡೆ ಸ್ಥಳದಲ್ಲಿ ಸ್ಥಳೀಯ ಕಾಲಮಾನ 12.30 AM (EST) ಕ್ಕೆ ಗುಂಡಿನ ದಾಳಿ ಕೇಳಿ ಬಂದಿದ್ದು, ಗಾಯಗೊಂಡವರ ಪೈಕಿ ಕೆಲವ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜೂನ್ 12ರಂದು ಓರ್ಲಾಂಡೋದ ಗೇ ನೈಟ್ ಕ್ಲಬ್ ನಲ್ಲಿ 29 ವರ್ಷದ ಗನ್ ಮ್ಯಾನ್ ಒಬ್ಬ 49 ಜನರ ಸಾವಿಗೆ ಕಾರಣನಾಗಿದ್ದ ಘಟನೆ ಮಾಸುವ ಮುನ್ನವೇ ಈ ದುರ್ಘಟನೆ ಸಂಭವಿಸಿದೆ.












Click it and Unblock the Notifications