ವಿಶ್ವದ ಶಕ್ತಿಶಾಲಿ ಫಾಲ್ಕನ್ ಹೆವಿ ರಾಕೆಟ್ ಯಶಸ್ವೀ ಉಡ್ಡಯನ
ಫ್ಲೊರಿಡಾ, ಫೆಬ್ರವರಿ 07: ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ ಹೆವಿ ರಾಕೆಟ್ ಅನ್ನು ನಿನ್ನೆ(ಫೆ.06) ಅಮೆರಿಕದ ಫ್ಲೊರಿಡಾದ ಕೇಪ್ ಕ್ಯಾನವೆರಲ್ ನಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಯಿತು.
ಟೆಸ್ಲಾ ಸಂಸ್ಥಾಪಕ, ಪ್ರಖ್ಯಾತ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿಯ ಚೊಚ್ಚಲ ಶಕ್ತಿಶಾಲಿ ರಾಕೆಟ್ ಭವಿಷ್ಯದಲ್ಲಿ ಮಂಗಳ ಗ್ರಹ ಮತ್ತು ಚಂದ್ರನಲ್ಲಿಗೆ ಮನುಷ್ಯರನ್ನು ಕಳಿಸಲು ನೆರವಾಗಲಿದೆ.
More photos from Falcon Heavy's first flight → https://t.co/095WHX44BX pic.twitter.com/6vlXJoYif0
— SpaceX (@SpaceX) 7 February 2018
27 ಎಂಜಿನ್ ಗಳನ್ನು ಹೊಂದಿರುವ ಫಾಲ್ಕನ್ ಹೆವಿ ರಾಕೆಟ್ 20 ಮಹಡಿ ಕಟ್ಟಡದಷ್ಟೇ ಎತ್ತರವಿದೆ! ರಾಕೆಟ್ ಗೆ ಅಳವಡಿಸಲಾಗಿದ್ದ ಒಂಬತ್ತು ಬೂಸ್ಟರ್ ಗಳು 3 ವಿವಿಧ ಸ್ಥರಗಳಲ್ಲಿ ಕೆಲಸ ನಿರ್ವಹಿಸಿ ರಾಕೆಟ್ ಯಶಸಸ್ವಿಯಾಗಿ ಬಾಹ್ಯಾಕಾಶಕ್ಕೆ ಉಡ್ಡಯನವಾಗುವಂತೆ ಮಾಡಿದವು.

ರಾಕೆಟ್ ಒಮ್ಮೆ ಉಡ್ಡಯನವಾದರೆ ಅದನ್ನು ಹೊತ್ತ ಬೂಸ್ಟರ್ ಗಳು ನಿಷ್ಪ್ರಯೋಜಕವಾಗುತ್ತಿದ್ದವು. ಆದರೆ ಎಲಾನ್ ಮಸ್ಕ್ ಅವರ ಕನಸಿನ ಯೋಜನೆಯಾದ ಈ ಸ್ಪೇಸ್ ಎಕ್ಸ್ ಫಾಲ್ಕನ್ ಹೆವಿ ರಾಕೆಟ್ ಬೂಸ್ಟರ್ ಗಳನ್ನು ಮರುಬಳಕೆ ಮಾಡಬಹುದಾಗಿದೆ ಎಂಬುದು ವಿಶೇಷ.












Click it and Unblock the Notifications