ಪಾಕಿಸ್ತಾನ: ದ್ವೇಷ ಹರಡುತ್ತಿದ್ದ ಐವರು ಐಎಸ್ಐಎಸ್ ಭಯೋತ್ಪಾದಕರ ಬಂಧನ

ಲಾಹೋರ್, ಏಪ್ರಿಲ್ 6: ದ್ವೇಷ ಹರಡುತ್ತಿದ್ದ ಐದು ಮಂದಿ ನಿಷೇಧಿತ ಉಗ್ರ ಸಂಘಟನೆ ಐಎಸ್‌ಐಎಸ್‌ನ ಉಗ್ರರನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದಕರನ್ನು ಮಸೀದಿಯೊಂದರಲ್ಲಿ ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 'ಲಾಹೋರ್ ನ ಡಿಫೆನ್ಸ್ ಹೌಸಿಂಗ್ ಅಥಾರಿಟಿ (ಡಿಹೆಚ್ಎ) ಬಳಿ ಐಎಸ್ಐಎಸ್ ಉಗ್ರರ ಇರುವಿಕೆ ಬಗ್ಗೆ ಮಾಹಿತಿ ದೊರೆತಿತ್ತು. ಸಿಟಿಡಿ ದಾಳಿ ನಡೆಸಿ ಐವರು ಉಗ್ರರನ್ನು ಬಂಧಿಸಿದೆ' ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕರನ್ನು ಬಂಧಿಸಲಾಗಿದ್ದು ಜನರ ನಡುವೆ ದ್ವೇಷದ ಅಂಶಗಳಿರುವ ವಸ್ತುಗಳನ್ನು ಪ್ರಚಾರ ಮಾಡಿ ದೇಣಿಗೆ ಸಂಗ್ರಹಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Five ISIS Terrorist Arrested From Mosque For Distributing Hate Material Among People: Officials

ಬಂಧಿತರಿಂದ, ನಿಷೇಧಗೊಂಡ 40 ಪುಸ್ತಕಗಳು, ಹಣ, ದಾಶ್ (ಇಸ್ಲಾಮಿಕ್ ಭಯೋತ್ಪಾದನೆಗೆ ಸಂಬಂಧಿಸಿದ ಬರಹಗಳು) ನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಉಗ್ರರನ್ನು ನಜೀಫ್ ಉಲ್ಲಾ, ಜಿಯಾ ಉರ್ ರೆಹಮಾನ್, ಮುಹಮ್ಮದ್ ಇಸ್ತಿಯಾಕ್, ಅಬ್ದುಲ್ ರೆಹಮಾನ್ ಭಟ್, ಮಲೀಕ್ ಕಾಸಿಫ್ ಎಂದು ಗುರುತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+