ನ್ಯಾಟೋ ಬುಟ್ಟಿಗೆ ಬಿತ್ತು ಫಿನ್‌ಲ್ಯಾಂಡ್: ರಷ್ಯಾ ಕಥೆ ಮುಂದೇನು?

ಬ್ರಸೆಲ್ಸ್: ಹಾವು ಸಾಯಬಾರದು, ಕೋಲು ಮುರಿಯಬಾರದು ಅನ್ನೋ ಗಾದೆ ಮಾತನ್ನ ಅಮೆರಿಕ ಅಚ್ಚುಕಟ್ಟಾಗಿ ಅನುಸರಿಸಿಕೊಂಡು ಬರುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಅಂದರೆ, ತನ್ನ ಆಜನ್ಮ ಶತ್ರು ರಷ್ಯಾಗೆ ಅದರದ್ದೇ ಗಡಿಯಲ್ಲಿ ಬಿಸಿ ಮುಟ್ಟಿಸಿದೆ ಅಮೆರಿಕ. ಇಷ್ಟುದಿನ ಯಾವುದೇ ಒಕ್ಕೂಟಕ್ಕೆ ಸೇರದೆ ತಟಸ್ಥವಾಗಿ ಉಳಿದಿದ್ದ ಫಿನ್‌ಲ್ಯಾಂಡ್ ಅನ್ನು ನ್ಯಾಟೋ ಬುಟ್ಟಿಗೆ ಬೀಳುವಂತೆ ಮಾಡಿದ್ದಾನೆ ಜಗತ್ತಿನ ದೊಡ್ಡಣ್ಣ.

ರಷ್ಯಾ ಜೊತೆ ಫಿನ್‌ಲ್ಯಾಂಡ್ ಭಾರಿ ಪ್ರಮಾಣದಲ್ಲಿ ಗಡಿ ಹಂಚಿಕೊಂಡಿದೆ. ಇದೀಗ ನ್ಯಾಟೋ ಒಕ್ಕೂಟ ಸೇರುತ್ತಿರುವ 31ನೇ ರಾಷ್ಟ್ರವಾಗಿ ಹೊರಹೊಮ್ಮಿದೆ ಫಿನ್‌ಲ್ಯಾಂಡ್. ಈ ಮೂಲಕ ರಷ್ಯಾ ಜೊತೆಗೆ ಗಡಿ ಹಂಚಿಕೊಂಡಿರುವ ನ್ಯಾಟೋ ಒಕ್ಕೂಟದ ರಾಷ್ಟ್ರಗಳಿಗೆ ಬಲ ಬಂದಿದ್ದು, ರಷ್ಯಾ ವಿರುದ್ಧ ಮತ್ತೊಂದು ಹಂತದ ಮಸಲತ್ತು ಆರಂಭವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Finland has become 31st Member of NATO Alliance

ರಷ್ಯಾಗೆ ಕಂಟಕ?: ಉಕ್ರೇನ್ ಯುದ್ಧದ ನಂತರ ರಷ್ಯಾ ವಿರುದ್ಧ ನ್ಯಾಟೋ ರಾಷ್ಟ್ರಗಳು ಮತ್ತಷ್ಟು ಬಲಗೊಳ್ಳುತ್ತಿವೆ. ಇದೀಗ ಫಿನ್‌ಲ್ಯಾಂಡ್ ಸೇರ್ಪಡೆ ಮೂಲಕ, ನ್ಯಾಟೋ ಒಕ್ಕೂಟ ರಷ್ಯಾ ಗಡಿಯ ಮೇಲೆ ಭಾರಿ ಹಿಡಿತ ಸಾಧಿಸಿದಂತಾಗಿದೆ. ನ್ಯಾಟೋ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಫಿನ್‌ಲ್ಯಾಂಡ್ ವಿದೇಶಾಂಗ ಸಚಿವ ಪೆಕ್ಕಾ ಹಾವಿಸ್ಟೋ ಅಧಿಕೃತವಾಗಿ ದಾಖಲೆಗಳನ್ನು ಹಸ್ತಾಂತರ ಮಾಡಿದರು. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್‌ ಅವರಿಗೆ ಪೆಕ್ಕಾ ದಾಖಲೆ ಹಸ್ತಾಂತರಿಸಿದರು.

ವಾರ್ಷಿಕೋತ್ಸವ ಸಂಭ್ರಮ: ನ್ಯಾಟೋ ಒಕ್ಕೂಟ ಸ್ಥಾಪನೆಯಾಗಿ ಇಂದಿಗೆ 74 ವರ್ಷ ತುಂಬಿದೆ. ನ್ಯಾಟೋ ಒಕ್ಕೂಟದ ವಾರ್ಷಿಕೋತ್ಸವದ ದಿನವೇ ಫಿನ್‌ಲ್ಯಾಂಡ್ 31ನೇ ಸದಸ್ಯ ರಾಷ್ಟ್ರವಾಗಿ ಎಂಟ್ರಿಕೊಟ್ಟಿದೆ. ಒಂದು ಕಡೆ ಉಕ್ರೇನ್ ಮತ್ತು ರಷ್ಯಾ ನಡುವೆ ಘೋರ ಯುದ್ಧ ನಡೆಯುವಾಗಲೇ ತನ್ನ ನಿಲುವು ಬದಲಿಸಿಕೊಂಡು ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳ ಜೊತೆ ಫಿನ್‌ಲ್ಯಾಂಡ್ ಕೈಜೋಡಿಸಿರುವುದು ಕುತೂಹಲ ಕೆರಳಿಸಿದೆ.

ರಷ್ಯಾ ಎಚ್ಚರಿಕೆ: ತನ್ನ ಪಕ್ಕದ ದೇಶವೊಂದು ಶತ್ರು ಪಡೆಯ ಜೊತೆ ಕೈಜೋಡಿಸಿರುವುದು ರಷ್ಯಾಗೆ ಸಹಜವಾಗಿಯೇ ಕೋಪ ತರಿಸಿದೆ. ಫಿನ್‌ಲ್ಯಾಂಡ್ ನ್ಯಾಟೋ ಪಡೆ ಸೇರಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಸ್ಕೋ, ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದಿದೆ. ಈ ಮೂಲಕ ಫಿನ್‌ಲ್ಯಾಂಡ್ ನ್ಯಾಟೋ ಒಕ್ಕೂಟ ಸೇರಿರುವ ಬಗ್ಗೆ ಪರೋಕ್ಷವಾಗಿ ಖಡಕ್ ಎಚ್ಚರಿಕೆ ನೀಡಿದೆ.

Finland has become 31st Member of NATO Alliance

ಉಕ್ರೇನ್ ಉದಾಹರಣೆ: ರಷ್ಯಾ ಸೇನೆ ಉಕ್ರೇನ್ ಮೇಲೆ ಯುದ್ಧ ಸಾರುವುದಕ್ಕೂ ಇದೇ ಕಾರಣವಾಗಿತ್ತು. ಅಂದಹಾಗೆ ನ್ಯಾಟೋ ಒಕ್ಕೂಟ ಸೇರಲು ಉಕ್ರೇನ್ ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನೇ ಬಂಡವಾಳ ಮಾಡಿಕೊಂಡು ರಷ್ಯಾ ಪಡೆಗಳು ಉಕ್ರೇನ್ ಮೇಲೆ ಯುದ್ಧ ಸಾರಿದ್ದವು. ಈ ಘಟನೆ ನಡೆದು ಈಗಿನ್ನೂ ಒಂದು ವರ್ಷ ಕಳೆದಿದೆ. ಅದಾಗಲೇ ಮತ್ತೊಂದು ದೇಶ ರಷ್ಯಾ ವಿರುದ್ಧ ನಿಲ್ಲಲು ಸಜ್ಜಾಗಿದೆ. ಇದು ಸಹಜವಾಗಿ ಯುರೋಪ್ ರಾಷ್ಟ್ರಗಳಲ್ಲಿ ಆತಂಕ ಹೆಚ್ಚಿಸಿದೆ.

ಒಂದು ಕಡೆ ಉಕ್ರೇನ್ ನೆಲದಲ್ಲಿ ರಷ್ಯಾ ಮಣಿಸಲು ಪರೋಕ್ಷ ಸಹಕಾರ ನೀಡುತ್ತಿರುವ ಅಮೆರಿಕ ಹಾಗು ನ್ಯಾಟೋ ಸದಸ್ಯ ರಾಷ್ಟ್ರಗಳು, ಇದೀಗ ಮತ್ತೊಂದು ರಾಷ್ಟ್ರವನ್ನು ತಮ್ಮ ಪಟ್ಟಿಗೆ ಸೇರಿಸಿಕೊಂಡಿವೆ. ಈ ಮೂಲಕ ರಷ್ಯಾಗೆ ಮತ್ತೊಂದು ರಾಷ್ಟ್ರ ಮಗ್ಗಲ ಮುಳ್ಳಾಗಿ ಪರಿಣಮಿಸುತ್ತಿದೆ. ಮುಂದಿನ ದಿನಗಳಲ್ಲಿ ಇದೆಲ್ಲದಕ್ಕೂ ಸೂಕ್ತ ಉತ್ತರ ನೀಡುವ ಮುನ್ಸೂಚನೆಯನ್ನು ರಷ್ಯಾ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+