ಪತ್ನಿಯ ಎದೆ ಹಾಲು ಕುಡಿದು ಆರೋಗ್ಯವಂತನಾದ ಪತಿ: ಎದೆ ಹಾಲು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ತಿಳಿಯಿರಿ
ನವದೆಹಲಿ ಸೆಪ್ಟೆಂಬರ್ 14: ಮಗುವಿನ ಆರೋಗ್ಯ ಚೆನ್ನಾಗಿರಬೇಕು, ಅದರ ದೇಹದಲ್ಲಿ ಸರಿಯಾಗಿ ರೋಗ ನಿರೋಧಕ ಶಕ್ತಿ ಇರಬೇಕು ಎಂದಲ್ಲಿ ತಾಯಿ ಎದೆಹಾಲು ಕುಡಿಸುವುದು ತುಂಬಾನೇ ಮುಖ್ಯ. ಆದರೆ ವಯಸ್ಕರು ಆರೋಗ್ಯವಂತರಾಗಲು ಎದೆಹಾಲನ್ನು ಕುಡಿಯುವುದನ್ನು ನೀವು ಎಂದಾದರೂ ಕೇಳಿರುವುದುಂಟಾ? ಇಂತಹ ಆಶ್ಚರ್ಯಕರ ಪ್ರಕರಣವೊಂದು ಅಮೆರಿಕಾದಲ್ಲಿ ವರದಿಯಾಗಿದೆ.
ಹೆಂಡತಿಯೊಬ್ಬಳು ತನ್ನ ಪತಿಗೆ ಎರಡು ವರ್ಷಗಳಿಂದ ಎದೆ ಹಾಲುಣಿಸುತ್ತಿರುವುದನ್ನು ಬಹಿರಂಗಪಡಿಸಿದ್ದಾಳೆ. ಅದು ಅವರನ್ನು ಆರೋಗ್ಯವಂತರನ್ನಾಗಿ ಕೂಡ ಮಾಡಿದಿಯಂತೆ. ರಾಚೆಲ್ ಬೈಲಿ (Rachel Bailey) ಅವರು ತಮ್ಮ ಪತಿಗೆ ಎದೆಹಾಲು ನೀಡಿದ ಮಹಿಳೆ. ಇವರು ತಮ್ಮ ಪತಿ ಅಲೆಕ್ಸಾಂಡರ್‌ಗೆ (Alexander) 2017ರಲ್ಲಿ ಹಾಲುಣಿಸುತ್ತಿದ್ದರು. ಇದು ಅವರಿಬ್ಬರ ಸಂಬಂಧವನ್ನು ಗಟ್ಟಿಗೊಳಿಸುವುದು ಮಾತ್ರವಲ್ಲದೆ ಪತಿಯನ್ನು ಆರೋಗ್ಯಕರವಾಗಿಸಿದೆ ಎಂದು ಬೈಲಿ ಅವರು ಹಂಚಿಕೊಂಡರು.

ಅಂದಹಾಗೆ ರಾಚೆಲ್ ಬೈಲಿ ಮೂರು ಮಕ್ಕಳ ತಾಯಿ. ಇವರು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದಾಗ ಎದೆಹಾಲು ಅಧಿಕವಾಗಿ ಅವಳಿಗೆ ಎದೆನೋವು ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಆಕೆಗೆ ಭಯ ಕಾಡತೊಡಗಿತು. ಎದೆಹಾಲು ತೆಗೆದರೂ ಆಕೆಗೆ ಎದೆನೋವು ಕಾಣಿಸಿಕೊಳ್ಳುತ್ತಲೇ ಇತ್ತು. ಇದರಿಂದ ಗಾಬರಿಯಾದ ಬೈಲಿಗೆ ಸೋಂಕು ತಗುಲುವ ಭೀತಿ ಕೂಡ ಎದುರಾಯಿತು. ಆಗ ಪತಿಗೆ ಎದೆಹಾಲನ್ನು ನೀಡಲು ಪ್ರಾರಂಭಿಸಿದರು. ಹಾಗಾಗಿ ಇದನ್ನು ತಡೆಯಲು ಆಕೆಯ ಪತಿ ಎದೆಹಾಲು ಕುಡಿಯಲು ಪ್ರಾರಂಭಿಸಿದರು.
ಆಗ ರಾಚೆಲ್ ಬೈಲಿಗೆ ಎದೆನೋವು ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ರಾಚೆಲ್ ಬೈಲಿ ಅವರು ಅದನ್ನೇ ಮುಂದುವರಿಸಲು ನಿರ್ಧರಿಸಿದರು. ಇದರಿಂದಾಗಿ ದಂಪತಿಗಳು ತಮ್ಮ ಬಂಧವನ್ನು ಮೊದಲಿಗಿಂತ ಬಲಗೊಳಿಸಿದ್ದಾರೆ ಎಂದು ವರದಿ ಮಾಡಿದ್ದಾರೆ. ಈ ಪ್ರಕ್ರಿಯೆ ಕೇವಲ ರಾಚೆಲ್ ಬೈಲಿಗೆ ಮಾತ್ರ ಪ್ರಯೋಜನವನ್ನು ನೀಡಲಿಲ್ಲ. ಬದಲಿಗೆ ಆಕೆಯ ಪತಿಗೂ ಆರೋಗ್ಯಕರ ಪ್ರಯೋಜನವನ್ನು ನೀಡಿದೆ ಎಂದು ರಾಚೆಲ್ ಬೈಲಿ ಹೇಳಿದ್ದಾರೆ. ಆಕೆಯ ಪತಿಯ ಆರೋಗ್ಯ ವೃದ್ಧಿಯಾಗಿದೆ. ಎರಡು ವರ್ಷಗಳ ಕಾಲ ತನ್ನ ಪತಿಗೆ ಶೀತವಾಗಲಿಲ್ಲ ಮತ್ತು ಅವನ ಚರ್ಮವು ಮೊದಲಿಗಿಂತ ಉತ್ತಮವಾಗಿದೆ ಎಂದು ರಾಚೆಲ್ ಹೇಳಿಕೊಂಡಿದ್ದಾರೆ.

ಎದೆ ಹಾಲು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು?
ನವಜಾತ ಶಿಶುಗಳಿಗೆ ಅವರ ತಾಯಿಯ ಹಾಲು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಶಿಶುಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮ ರೀತಿಯಲ್ಲಿ ನಡೆಯಲು ತಾಯಿಯ ಎದೆ ಹಾಲು ತುಂಬಾ ಅವಶ್ಯಕ. ಅದಕ್ಕಾಗಿಯೇ ಪ್ರತಿ ಮಗುವಿಗೆ ತಾಯಿಯ ಹಾಲು ಸಿಗಬೇಕು ಎಂಬ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ. ಮಗುವಿಗೆ ತಾಯಿ ಎದೆಹಾಲು ಉಣಿಸುವುದರಿಂದ ಮಗು ಮತ್ತು ತಾಯಿಯ ನಡುವಿನ ಬಂಧವು ಹೆಚ್ಚುವುದು.
ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ತಾಯಿಯ ಹಾಲಿನಲ್ಲಿ ಇರುತ್ತದೆ. ಹಾಗಾಗಿ ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ತಾಯಿಯ ಹಾಲಿನಲ್ಲಿ ಇರುತ್ತದೆ. ಹಾಗಾಗಿ ಮಗುವಿನ ಬೆಳವಣಿಗೆಯು ಸೂಕ್ತ ರೀತಿಯಲ್ಲಿ ಉಂಟಾಗುವುದು. ತಾಯಿ ಸೂಕ್ತ ಸಮಯಗಳ ಕಾಲ ಮಗುವಿಗೆ ಹಾಲುಣಿಸುವುದರಿಂದ ಅಂಡಾಶಯದ ಕ್ಯಾನ್ಸರ್, ಸ್ತನ ಕ್ಯಾಣ್ಸರ್ ಸೇರಿದಂತೆ ಇನ್ನಿತರ ಕ್ಯಾನ್ಸರ್ ಮತ್ತು ಅನಾರೋಗ್ಯ ಸಮಸ್ಯೆಯನ್ನು ತಡೆಯಬಹುದು.
ಎದೆಹಾಲಿನ ಸೇವನೆಯು ಮಕ್ಕಳಲ್ಲಿ ರೋಗಗಳ ಕಡಿಮೆ ಅಪಾಯವನ್ನು ಹೊಂದಿದೆಯಾದರೂ, ಇದು ವಯಸ್ಕರಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದರ ಕುರಿತು ಕಡಿಮೆ ಪುರಾವೆಗಳಿವೆ. ಆದರೂ ಇದನ್ನು ಬಳಸುವುದರಿಂದ ಗಾಯವನ್ನು ಗುಣಪಡಿಸುವ ಗುಣಗಳನ್ನು ಹೊಂದಿರುತ್ತದೆ. 2019 ರ ಅಧ್ಯಯನದ ಪ್ರಕಾರ, ಎದೆ ಹಾಲು ಡರ್ಮಟೈಟಿಸ್ ಮತ್ತು ಎಸ್ಜಿಮಾವನ್ನು ಸಹ ಸರಾಗಗೊಳಿಸುತ್ತದೆ.
ಹ್ಯೂಮನ್ ಮಿಲ್ಕ್ ಆಲಿಗೋಸ್ಯಾಕರೈಡ್‌ಗಳು (HMOs) ಎಂದು ಕರೆಯಲ್ಪಡುವ ಎದೆಹಾಲಿನಲ್ಲಿರುವ ಅಣುಗಳು ಶಿಶುಗಳಲ್ಲಿ ಕಾಂಜಂಕ್ಟಿವಿಟಿಸ್ ಅಪಾಯವನ್ನು ಕಡಿಮೆ ಮಾಡುವುದರ ಜೊತೆಗೆ B ಗುಂಪಿನ ಸ್ಟ್ರೆಪ್ಟೋಕೊಕಸ್ ಸೋಂಕನ್ನು ನಿವಾರಿಸುತ್ತದೆ.












Click it and Unblock the Notifications