ವಿಶ್ವಕಪ್ 2014: 'ಬಿ ' ಗುಂಪಿನ ವೇಳಾಪಟ್ಟಿ
ಬೆಂಗಳೂರು, ಜೂ.11: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ. ಬಿ ಗುಂಪಿನ ವೇಳಾಪಟ್ಟಿ ನಿಮಗಾಗಿ ನೀಡಲಾಗಿದೆ.
ಕಳೆದ ಬಾರಿಯ ವಿಶ್ವಕಪ್ ಚಾಂಪಿಯನ್ ಸ್ಪೇನ್ ಈ ಬಾರಿ ಬಿ ಗುಂಪಿನಲ್ಲಿದೆ. ಉಳಿದಂತೆ ನೆದರ್ಲೆಂಡ್, ಚಿಲಿ ಹಾಗೂ ಆಸ್ಟ್ರೇಲಿಯಾ ಗುಂಪಿನಲ್ಲಿದೆ. ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಇಲ್ಲಿದೆ.
ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ. ['ಎ' ಗುಂಪಿನ ವೇಳಾಪಟ್ಟಿ]
ಬಿ ಗುಂಪಿನಲ್ಲಿ ಸ್ಪೇನ್ ತಂಡ ಬಲಿಷ್ಠವಾಗಿದ್ದು ಮುಂದಿನ ಹಂತಕ್ಕೆ ಸುಲಭವಾಗಿ ತಲುಪುವ ನಿರೀಕ್ಷೆ ಹೊಂದಲಾಗಿದೆ. ಉಳಿದ ಮೂರು ತಂಡಗಳಾದ ನೆದರ್ಲೆಂಡ್, ಚಿಲಿ, ಆಸ್ಟ್ರೇಲಿಯಾ ಪೈಕಿ ನೆದರ್ಲೆಂಡ್ ಕಳೆದ ಬಾರಿ ಅಂತಿಮ ಹಂತಕ್ಕೆ ತಲುಪಿದ್ದು ಉತ್ತಮ ಲಯದಲ್ಲಿದೆ. ಚಿಲಿ ಹಾಗೂ ಆಸ್ಟ್ರೇಲಿಯಾ ಎರಡನೇ ತಂಡವಾಗಿ ಲೀಗ್ ಹಂತ ದಾಟಲು ಹೆಣಗಾಡಬೇಕಾಗುತ್ತದೆ.

| ವಿಶ್ವಕಪ್ 2014, ಬ್ರೆಜಿಲ್ | ||||||||||||||||||||||||||||||||||||||
| ಗ್ರೂಪ್ ಬಿ | ||||||||||||||||||||||||||||||||||||||
| ದಿನಾಂಕ/ದಿನ | ಎದುರಾಳಿ | ಸ್ಥಳ | ಸಮಯ | |||||||||||||||||||||||||||||||||||
| ಜೂನ್ 14 ಶನಿವಾರ | ಸ್ಪೇನ್ vs ಹಾಲೆಂಡ್ (ನೆದರ್ಲೆಂಡ್) | ಅರೇನಾ ಫಾಂಟೆ ನೋವಾ, ಸಾವೊ ಪೋಲೋ | 12.30 AM IST | |||||||||||||||||||||||||||||||||||
| ಚಿಲಿ vs ಆಸ್ಟ್ರೇಲಿಯಾ | Arena Pantanal | 3.30 AM IST | ||||||||||||||||||||||||||||||||||||
| ಜೂನ್ 18, ಬುಧವಾರ | ಆಸ್ಟ್ರೇಲಿಯಾ vs ಹಾಲೆಂಡ್ | Estadio Beira-Rio | 9.30 PM IST | |||||||||||||||||||||||||||||||||||
| ಜೂನ್ 19, ಶುಕ್ರವಾರ | ಸ್ಪೇನ್ vs ಚಿಲಿ | ಮರಕಾನ | 12.30 AM IST | |||||||||||||||||||||||||||||||||||
| ಜೂನ್ 23, ಸೋಮವಾರ | ಆಸ್ಟ್ರೇಲಿಯಾ vs ಸ್ಪೇನ್ | Arena da Baixada | 9.30 PM IST | |||||||||||||||||||||||||||||||||||
| ಹಾಲೆಂಡ್ vs ಚಿಲಿ | ಸಾವೊ ಪೋಲೋ | 9.30 PM IST | ||||||||||||||||||||||||||||||||||||











Click it and Unblock the Notifications