ವಿಶ್ವಕಪ್ 2014: ಬ್ರೆಜಿಲ್' ಎ' ಗುಂಪಿನ ವೇಳಾಪಟ್ಟಿ
ಬೆಂಗಳೂರು, ಜೂ.10: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ.
ಕಳೆದ ಬಾರಿಯ ವಿಶ್ವಕಪ್ ಚಾಂಪಿಯನ್ ಸ್ಪೇನ್, ಈ ಬಾರಿಯ ಅತಿಥೇಯ ರಾಷ್ಟ್ರ ಬ್ರೆಜಿಲ್, ಜರ್ಮನಿ, ಅರ್ಜೆಂಟೀನಾ, ಪೋರ್ಚುಗಲ್, ಇಟಲಿ ಲೀಗ್ ಹಂತದ ಸುಲಭವಾಗಿ ದಾಟುವ ನಿರೀಕ್ಷೆ ಹೊಂದಲಾಗಿದೆ. ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಇಲ್ಲಿದೆ.
ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ.
ಎ ಗುಂಪಿನಲ್ಲಿ ಬ್ರೆಜಿಲ್ ತಂಡ ಬಲಿಷ್ಠವಾಗಿದ್ದು ಮುಂದಿನ ಹಂತಕ್ಕೆ ಸುಲಭವಾಗಿ ತಲುಪುವ ನಿರೀಕ್ಷೆ ಹೊಂದಲಾಗಿದೆ. ಉಳಿದ ಮೂರು ತಂಡಗಳಾದ ಕ್ರೊವೇಷಿಯಾ, ಮೆಕ್ಸಿಕೋ, ಕ್ಯಾಮರೂನ್ ನಡುವೆ ಎರಡನೇ ತಂಡವಾಗಿ ಲೀಗ್ ಹಂತ ದಾಟಲು ತೀವ್ರ ಪೈಪೋಟಿ ನಿರೀಕ್ಷಿಸಬಹುದು.

| ವಿಶ್ವಕಪ್ 2014, ಬ್ರೆಜಿಲ್ | ||||||||||||||||||||||||||||||||||||||
| ಗ್ರೂಪ್ ಎ | ||||||||||||||||||||||||||||||||||||||
| ದಿನಾಂಕ/ದಿನ | ಎದುರಾಳಿ | ಸ್ಥಳ | ಸಮಯ | |||||||||||||||||||||||||||||||||||
| ಜೂನ್ 13, ಶುಕ್ರವಾರ | ಬ್ರೆಜಿಲ್ vs ಕ್ರೋವೇಷಿಯಾ | ಅರೇನಾ ಡಿ ಸಾವೋ ಪೋಲೊ, ಸಾವೊ ಪೋಲೋ | 1.30 AM IST | |||||||||||||||||||||||||||||||||||
| ಮೆಕ್ಸಿಕೊ vs ಕ್ಯಾಮರೂನ್ | ಅರೇನಾ ಡಾಸ್ ಡನಸ್, ನಟಾಲ್ | 9.30 PM IST | ||||||||||||||||||||||||||||||||||||
| ಜೂನ್ 17, ಮಂಗಳವಾರ | ಬ್ರೆಜಿಲ್ vs ಮೆಕ್ಸಿಕೊ | ಎಸ್ಟಾಡಿಯೋ ಸ್ಯಾಟೆಲಾಯೋ, ಫೋರ್ಟಲಿಝಾ | 12.30 AM IST | |||||||||||||||||||||||||||||||||||
| ಜೂನ್ 18, ಬುಧವಾರ | ಕ್ಯಾಮರೂನ್ vs ಕ್ರೋವೇಷಿಯಾ | ಅರೇನಾ ಡಾ ಅಮಾಜಾನಿಯಾ, ಮನೌಸ್ | 1.30 AM IST | |||||||||||||||||||||||||||||||||||
| ಜೂನ್ 23, ಸೋಮವಾರ | ಬ್ರೆಜಿಲ್ vs ಕ್ಯಾಮರೂನ್ | ಎಸ್ಟಾಡಿಯೋ ನಾಸಿನಲ್ ಬ್ರಸಿಲಿಯಾ | 1.30 AM IST | |||||||||||||||||||||||||||||||||||
| ಮೆಕ್ಸಿಕೊ vs ಕ್ರೋವೇಷಿಯಾ | ಅರೇನಾ ಪರ್ನಾಬುಕೋ ರೆಕಿಫೆ | 1.30 AM IST | ||||||||||||||||||||||||||||||||||||












Click it and Unblock the Notifications