ಉತ್ತರ ಅಮೆರಿಕದಲ್ಲಿ ಕಾಡು ಮೊಲಗಳನ್ನು ಕೊಲ್ಲುತ್ತಿರುವ ಮಾರಣಾಂತಿಕ ವೈರಸ್
ವಾಷಿಂಗ್ಟನ್, ಮೇ 21: ಉತ್ತರ ಅಮೆರಿಕದಲ್ಲಿ ಮಾರಣಾಂತಿಕ ವೈರಸ್ ಒಂದು ಕಾಡುಮೊಲಗಳನ್ನು ಬಲಿತೆಗೆದುಕೊಳ್ಳುತ್ತಿದೆ.
ಇದರಿಂದ ಅಳಿವಿನಂಚಿನಲ್ಲಿರುವ ಮೊಲವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಅಮೆರಿಕ ಇದೆ. ಕಳೆದ ವಾರ ಈ ವೈರಸ್ ದಕ್ಷಿಣ ಕ್ಯಾಲಿಫೋರ್ನಿಯಾವನ್ನು ತಲುಪಿದೆ.
ಈ ವೈರಸ್ ಮೊಲದ ದೇಹವನ್ನು ಪ್ರವೇಶಿಸಿದರೆ ತೀವ್ರ ರಕ್ತಸ್ರಾವ ಉಂಟಾಗಿ ಮೊಲ ಕೊನೆಯುಸಿರೆಳೆಯುತ್ತದೆ ಇದನ್ನು 'Rabbit Hemorrhagic Disease' ಎಂದು ಕರೆಯುತ್ತಾರೆ.
ಈ ವೈರಸ್ ಕೇವಲ ಮೊಲವನ್ನು ಮಾತ್ರ ಪ್ರವೇಶಿಸುತ್ತದೆಯೇ ಅಥವಾ ಇದರಿಂದ ಇತರೆ ಕಾಡುಪ್ರಾಣಿಗಳಿಗೂ ಅಪಾಯವಿದೆಯೇ ಎಂಬುದರ ಕುರಿತು ಸಂಶೋಧನೆ ನಡೆಸುತ್ತಿದ್ದೇವೆ ಎಂದು ಓಕ್ಲಾಮಾ ವಿಶ್ವವಿದ್ಯಾಲಯದ ಹೇಲಿ ಲ್ಯಾನಿಯರ್ ಹೇಳುತ್ತಾರೆ.

ಮೊದಲ ಬಾರಿಗೆ ಈ ವೈರಸ್ ಕಂಡುಬಂದಿದ್ದು 1980ರಲ್ಲಿ
ಈ ವೈರಸ್ 1980ರಲ್ಲಿ ಮೊದಲ ಬಾರಿಗೆ ಕಂಡುಬಂದಿತ್ತು. ಚೀನಾ ಹಾಗೂ ಯುರೋಪಿನಲ್ಲಿರುವ ಅಳಿವಿನಂಚಿನಲ್ಲಿರುವ ಮೊಲಕ್ಕೆ ಈ ವೈರಸ್ ತಗುಲಿತ್ತು. ಅದು ಕೊನೆಗೆ ಆಸ್ಟ್ರೇಲಿಯಾವನ್ನು ಪ್ರವೇಶಿಸಿತ್ತು. ಕೊನೆಗೆ ವೈರಸ್ ನಿಯಂತ್ರಣಕ್ಕೆ ಬಂದಿತು. ಆದರೆ 2010ರಲ್ಲಿ ಅದೇ ವೈರಸ್ ಹೊಸ ರೂಪ ಪಡೆದುಕೊಂಡು ಫ್ರಾನ್ಸ್‌ನಿಂದ ಹೊರಹೊಮ್ಮಿತ್ತು. ಇದು ಎಲ್ಲಾ ಕಾಡು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ.

ಇತ್ತೀಚೆಗೆ ಹುಟ್ಟಿದ ಮೊಲಗಳ ಮೇಲೆ ಕಣ್ಣು
ರಾಬಿಟ್ ಹೆಮೊರಾಜಿಕ್ ಡಿಸೀಸ್ ದೊಡ್ಡ ಮೊಲಗಳಿಗೆ ಏನೂ ಮಾಡುವುದಿಲ್ಲ, ಆದರೆ ಆಗತಾನೆ ಹುಟ್ಟಿದ ಮೊಲದ ಮರಿಗಳನ್ನು ಸಾಯಿಸುತ್ತವೆ. ಇದು ಹೊಸದಾಗಿ ಹುಟ್ಟಿ ಶೇ.70 ರಷ್ಟು ಮೊಲಗಳನ್ನು ಕೊಂದಿದೆ.

2018ರಲ್ಲಿ ಉತ್ತರ ಅಮೆರಿಕದಲ್ಲಿ ಕಾಣಿಸಿಕೊಂಡಿತ್ತು
ಈ ವೈರಸ್ 2018ರಲ್ಲಿ ಉತ್ತರ ಅಮೆರಿಕದಲ್ಲಿ ಮೊದಲ ಬಾರಿಗೆ ಕಂಡುಬಂದಿತ್ತು. ಆದರೆ ಬೇರೆ ಕಾಡುಪ್ರಾಣಿಗಳಿಗೆ ಇದರಿಂದ ತೊಂದರೆಯಾಗಿರಲಿಲ್ಲ. ಗೇರಿ ರೋಮರ್ ಎಂಬುವವರು ವಾಕಿಂಗ್‌ಗೆ ತೆರಳಿದ್ದಾಗ ಮೊದಲ ಪ್ರಕರಣ ಪತ್ತೆಯಾಗಿತ್ತು. ಈ ಮೊಲಗಳು ಯಾವತ್ತೂ ನಾಯಿಗಳ ಬಾಯಿಗೆ ಸಿಗುವುದಿಲ್ಲ ತುಂಬಾ ವೇಗವಾಗಿ ಓಡಿಹೋಗಿ ತಪ್ಪಿಸಿಕೊಳ್ಳುತ್ತವೆ. ಆದರೆ ಆಯಾಸದಿಂದ ರಸ್ತೆಯಲ್ಲೇ ಮಲಗಿದ್ದ ಮೊದಲವನ್ನು ನೋಡಿದಾಗ ಅನುಮಾನ ಬಂದಿತ್ತು. ಬಳಿಕ ಅಕ್ಕಪಕ್ಕದ ರಾಜ್ಯ ಹಾಗೂ ದೇಶಗಳಿಗೂ ಎಚ್ಚರಿಕೆ ನೀಡಲಾಗಿತ್ತು.ಮೇ 5 ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಲಾಗಿದೆ. ಆದರೆ ಅಮೆರಿಕ, ಕೆನಡಾದಿಂದ ಬಂದಿರುವ ಮಾದರಿ ವಿಭಿನ್ನವಾಗಿತ್ತು.

ಔಷಧಿ ಕಂಡುಹಿಡಿಯಲಾಗಿದೆಯೇ?
ಒಂದು ವೇಳೆ ಔಷಧಿ ಕಂಡು ಹಿಡಿದರೆ ಮೊಲದ ತಳಿಯನ್ನು ಕಾಪಾಡಲು ಸಹಕಾರಿಯಾಗಲಿದೆ. ಯುರೋಪಿನಲ್ಲಿ ದೇಶೀಯ ಮೊಲಗಳಿಗೆ ಲಭ್ಯವಿರುವ ಲಸಿಕೆಯನ್ನು ಕಾಡುಮೊಲಗಳಿಗೆ ನೀಡುವುದಿಲ್ಲ. ಈ ಲಸಿಕೆಗಳನ್ನು ನಿಷ್ಕ್ರಿಯಗೊಂಡ ವೈರಸ್‌ಗಳಿಂದ ತಯಾರಿಸಲಾಗುತ್ತದೆ. ಇದು ಮತ್ತಷ್ಟು ರೋಗವನ್ನು ಹರಡಬಹುದು ಎಂದು ಅಂದಾಜಿಸಲಾಗಿದೆ. 2021ರೊಳಗೆ ಲಸಿಕೆ ಕಂಡುಹಿಡಿಯಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.












Click it and Unblock the Notifications