5 ಕೋಟಿ ಅಲ್ಲ, 2.90 ಕೋಟಿ ಮಂದಿ ಮಾಹಿತಿ ಕಳವು: ಫೇಸ್ ಬುಕ್
ಸ್ಯಾನ್ ಫ್ರಾನ್ಸಿಸ್ಕೊ, ಅಕ್ಟೋಬರ್ 12: ಫೇಸ್ ಬುಕ್ ಅಧಿಕೃತ ಸಂಖ್ಯೆಯೊಂದನ್ನು ಮುಂದಿಟ್ಟಿದೆ. ಅದು 2.90 ಕೋಟಿ. ಹೌದು, ಇಷ್ಟು ಸಂಖ್ಯೆಯ ಫೇಸ್ ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಗೆ ಹ್ಯಾಕರ್ ಗಳು ಕನ್ನ ಹಾಕಿದ್ದಾರಂತೆ. ಇದು ಕಳೆದ ತಿಂಗಳಲ್ಲಿ ಬಯಲಾಗಿದ್ದ ಸಂಗತಿ. ಮೊದಲಿಗೆ 50 ಮಿಲಿಯನ್ ಜನರ ವೈಯಕ್ತಿಕ ಮಾಹಿತಿ ಎಂದಿತ್ತು ಫೇಸ್ ಬುಕ್.
ಅಂದರೆ, 5 ಕೋಟಿ ಮಂದಿಯ ಖಾತೆ ಮೇಲೆ ಸೈಬರ್ ದಾಳಿಕೋರರ ದಾಳಿಯಾಗಿದೆ. ಅದರಿಂದ ಫೇಸ್ ಬುಕ್ ಖಾತೆಯಲ್ಲಿರುವ ಮಾಹಿತಿ ಕಳುವಿಗೆ ನೆರವಾಗಿದೆ. ಸಾಫ್ಟ್ ವೇರ್ ಅಸಮರ್ಥತೆ ಕಾರಣಕ್ಕೆ ಇಂಥದ್ದೊಂದು ಸವಾಲು ಎದುರಾಗಿದೆ ಎಂದು ಫೇಸ್ ಬುಕ್ ಮಾಹಿತಿ ನೀಡಿತ್ತು.

"ನಮಗೆ ಈಗ ಗೊತ್ತಾಗಿದೆ, ನಾವಂದುಕೊಂಡಿದ್ದ ಸಂಖ್ಯೆಗಿಂತ ಕಡಿಮೆ ಮಂದಿಗೆ ಈ ಸೈಬರ್ ದಾಳಿಯ ತೊಂದರೆ ಆಗಿದೆ" ಎಂದು ಫೇಸ್ ಬುಕ್ ಪ್ರಾಡಕ್ಟ್ ಮ್ಯಾನೇಜ್ ಮೆಂಟ್ ನ ಉಪಾಧ್ಯಕ್ಷ ಗೈ ರೋಸನ್ ಆನ್ ಲೈನ್ ಪೋಸ್ಟ್ ವೊಂದರಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.












Click it and Unblock the Notifications