ಹೊಸ ಜೀವದ ನಿರೀಕ್ಷೆಯಲ್ಲಿ ನಾನು, ಅವಳು ಮತ್ತು ಬೀಸ್ಟ್

ಕ್ಯಾಲಿಫೋರ್ನಿಯಾ, ಆ. 01: ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ತಂದೆಯಾಗಲಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು ಅದು ಹೆಣ್ಣು ಮಗುವೆ ಆಗಲಿ ಎಂದು ಬಯಸಿದ್ದಾರೆ.

ಹೆಂಡತಿ ಪ್ರಿಸಿಲ್ಲಾ ಚಾನ್ ಜತೆ ನಿಂತುಕೊಂಡಿರುವ ಫೋಟೋ ಹಾಕಿರುವ ಫೇಸ್ ಬುಕ್ ಸಂಸ್ಥಾಪಕ ತನ್ನ 33 ಲಕ್ಷಕ್ಕೂ ಅಧಿಕ ಫಾಲೋವರ್ ಗಳಿಗೆ ಏಕಕಾಲಕ್ಕೆ ಸುದ್ದಿ ಹೇಳಿದ್ದಾರೆ.[ಫೇಸ್ ಬುಕ್ ಒಪನ್ ಮಾಡಲು ಡಾಟಾ ಪ್ಯಾಕ್ ಹಂಗಿಲ್ಲ]

facebook

ಫೇಸ್ ಬುಕ್ ಜನಕನ ಪತ್ರದ ಪೂರ್ಣ ಪಾಠ ಇಲ್ಲಿದೆ..
ನಿಮಗೆಲ್ಲ ಒಂದು ಶುಭ ಸುದ್ದಿಯನ್ನು ನಾನು ಮತ್ತು ಪ್ರಿಸಿಲ್ಲಾ ನೀಡುತ್ತಿದ್ದೇವೆ. ನನ್ನ ಜೀವನದಲ್ಲಿ ಇದೊಂದು ಹೊಸ ಅಧ್ಯಾಯ. ನಿಮ್ಮನ್ನೆಲ್ಲ ಕ್ಷಣಮಾತ್ರದಲ್ಲಿ ತಲುಪುತ್ತಿರುವ ಅದೃಷ್ಟಶಾಲಿ ನಾನು. ಪ್ರಿಸಿಲ್ಲಾ ನನಗೆ ಕೇವಲ ಹೆಂಡತಿಯಲ್ಲ ಆಕೆ ನನಗೆ ವೈದ್ಯೆ, ಶಿಕ್ಷಕಿ ಎಲ್ಲ ಪಾತ್ರಗಳಲ್ಲೂ ಕಂಡುಬರುತ್ತಾಳೆ. ನಮ್ಮೆಲ್ಲರ ಗುರಿ ಒಂದೇ ಆಗಿರಬೇಕು. ಮುಂದಿನ ಪೀಳಿಗೆಯ ಮಕ್ಕಳಿಗೆ ಉತ್ತಮ ಪ್ರಪಂಚವನ್ನು ಕಟ್ಟಿಕೊಡಬೇಕು.[ಗಂಡನ ಕಳೆದುಕೊಂಡ ಮಹಿಳೆಯ ನೋವಿನ ಪತ್ರ]

ಮಗುವನ್ನು ಹೊಂದುವ ಕನಸು ಇಂದು ನನಸಾಗತೊಡಗಿದೆ. ನಮ್ಮ ಜೀವನದ ದಾರಿಯಲ್ಲಿ ಮೂರು ಗರ್ಭಪಾತ ಸಂಭವಿಸಿರುವ ನೋವು ಮರೆಯಾಗುವ ಹಂತ ತಲುಪಿದೆ.

ಪ್ರತಿಯೊಬ್ಬರಿಗೂ ಅವರ ಮಕ್ಕಳು ಹಾಗಿರಬೇಕು, ಹೀಗಾಗಬೇಕು ಎಂಬ ಕನಸುಗಳು ಗರ್ಭದಲ್ಲಿ ಇರುವಾಗಲೇ ಆರಂಭವಾಗುತ್ತದೆ. ಅದಕ್ಕಾಗಿ ನೀವು ಯೋಜನೆಗಳನ್ನು ಸಹ ಸಿದ್ಧ ಮಾಡುತ್ತೀರಿ. ಆಘಾತ ಉಂಟಾದರೆ ನಿಮಗೆ ಏಕಾಂಗಿತನ ಕಾಡುವುದು ಖಂಡಿತ. ಕೆಲವರು ಗರ್ಭಪಾತದ ನೋವನ್ನು ಮನಸ್ಸಿನಲ್ಲೇ ಅನುಭವಿಸುತ್ತಾರೆ. ಇದು ನಿಮ್ಮ ಮತ್ತು ನಿಮ್ಮೊಳಗಿನ ಹೋರಾಟಕ್ಕೆ ಸಂಬಂಧಿಸಿದ್ದಾಗಿರುತ್ತದೆ.

ಆದರೆ ಕೆಲವೊಂದು ಸಂದರ್ಭಗಳಲ್ಲಿ ಇಂಥ ಸಂಗತಿ ಚರ್ಚೆ ಮಾಡುವುದು ನಮ್ಮ ನಡುವಿನ ಬಾಂಧವ್ಯವನ್ನು ವೃದ್ಧಿ ಮಾಡುತ್ತದೆ. ಆರೋಗ್ಯವಂತ ಮಕ್ಕಳ ಜನನನಕ್ಕೆ ಸಲಹೆಗಳು ಇಲ್ಲಿ ಸಿಗಬಹುದು. ನಾವು ನಮ್ಮ ಕನಸುಗಳನ್ನು ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಹಾರೈಕೆಗಳು ನಮ್ಮ ಹುಟ್ಟಲಿರುವ ಮಗುವಿಗೆ ಶಕ್ತಿ ತುಂಬಲಿದೆ ಎಂದು ನಂಬಿದ್ದೇನೆ.

ಹೆಂಡತಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತಿದೆ. ನಾನು, ಅವಳು ಮತ್ತು ನಮ್ಮ ಮನೆಯ ನಾಯಿ ಬೀಸ್ಟ್ ಹೊಸ ವ್ಯಕ್ತಿಯ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಅವಳ ಒಂದು ನಗು ನನ್ನನ್ನು ಸಂತಸಭರಿತನನ್ನಾಗಿ ಮಾಡುತ್ತದೆ.

ನಾವು ಮಗುವಿನ ನೀರಿಕ್ಷೆಯಲ್ಲಿದ್ದು ಅದು ಹೆಣ್ಣು ಮಗುವಾಗಲಿ ಎಂದೇ ಬಯಸಿದ್ದೇವೆ. ಆಕೆ ಸಹ ಹೊಸ ಪ್ರಪಂಚಕ್ಕೆ ತೆರೆದುಕೊಳ್ಳಲಿದ್ದು ಇನ್ನು ಕೆಲವೇ ದಿನದಲ್ಲಿ ಶುಭಸುದ್ದಿ ಸತ್ಯವಾಗಲಿದೆ....

ಜುಕರ್ ಬರ್ಗ್ ಫೇಸ್ ಬುಕ್ ಪುಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+