• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಮ್ಮ ಪೈಲಟ್‌ನನ್ನೇ ಹೊಡೆದು ಕೊಂದ ಪಾಕಿಸ್ತಾನ, ಅಚ್ಚರಿಯಾದರೂ ಸತ್ಯ

|
   Surgical Strike 2: ತಮ್ಮ ಪೈಲಟ್‌ನನ್ನೇ ಹೊಡೆದು ಕೊಂದ ಪಾಕಿಸ್ತಾನ, ಅಚ್ಚರಿಯಾದರೂ ಸತ್ಯ

   ಇಸ್ಲಾಮಾಬಾದ್, ಮಾರ್ಚ್ 2: ತಮ್ಮ ಪೈಲಟ್‌ನಲ್ಲೇ ಪಾಕಿಸ್ತಾನದ ಸ್ಥಳೀಯರು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆದರೆ ಪಾಕಿಸ್ತಾನವು ಪೈಲಟ್ ಸಾವನ್ನು ಒಪ್ಪಿಕೊಳ್ಳಲು ಇನ್ನೂ ತಯಾರಿಲ್ಲ.

   ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಮಾಡಲು ತುದಿಗಾಲಿನಲ್ಲಿ ನಿಂತಿತ್ತು, ಅದಕ್ಕೆ ಪ್ರತಿಯಾಗಿ ಭಾರತ ದಾಳಿ ಮಾಡಿದ ಹಿನ್ನೆಲೆಯಲ್ಲಿ ಹೆದರಿದ ಪಾಕಿಸ್ತಾನ ಶಾಂತಿ ಮಾರ್ಗದಲ್ಲಿ ಸಾಗೋಣ ಯುದ್ಧ ಬೇಡ ಎಂದು ಅಂಗಲಾಚಿದ ಮೇಲೆ ಭಾರತವು ಸುಮ್ಮನಿತ್ತು ಆದರೆ ಅವರ ಹಳೆಯ ಚಾಳಿಯನ್ನು ಮರೆತಿಲ್ಲ, ದಾಳಿಯನ್ನು ಮುಂದುವರೆಸಿದೆ.

   ಭಾರತದ ಯೋಧರ ಪಡಿತರದಲ್ಲಿ ವಿಷ ಬೆರೆಸಲು ಪಾಕ್ ಏಜೆಂಟ್‌ಗಳ ಷಡ್ಯಂತ್ರ

   ಭಾರತೀಯ ಪೈಲಟ್‌ನ್ನು ಬಂಧಿಸುವ ಭರದಲ್ಲಿ ತಮ್ಮದೇ ಪೈಲಟ್‌ನ್ನು ಕೊಲೆ ಮಾಡಿರುವ ಘಟನೆ ಇದಾಗಿದೆ. ಇದು ಅಚ್ಚರಿಯೆನಿಸಿದರೂ ನಡೆದ ಸತ್ಯ ಘಟನೆ. ಭಾರತದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಎಫ್ 16 ವಿಮಾನಗಳ ಪೈಕಿ ಒಂದು ವಿಮಾನವನ್ನು ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ಹೊಡೆದುರುಳಿಸಿದ್ದರು.

   ಈ ವಿಮಾನ ಪತನಗೊಂಡ ವೇಳೆ ಅದರಲ್ಲಿದ್ದ ಪೈಲಟ್ ಸುರಕ್ಷಿತವಾಗಿ ಹೊರನಡೆದಿದ್ದರು. ಅವರು ಭಾರತೀಯ ಪೈಲಟ್ ಎಂದು ಪಾಕಿಗಳೇ ಬಡಿದು ಕೊಂದಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

   ಬುಧವಾರ ಭಾರತದ ಮೇಲೆ ದಾಳಿಗೆ ಆಗಮಿಸಿದ್ದ ಮೂರು ಎಫ್ 16 ವಿಮಾನಗಳನ್ನು ಭಾರತದ ಮಿಗ್ ವಿಮಾನಗಳು ಓಡಿಸಿದ್ದವು. ಈ ವೇಳೆ ಒಂದು ಎಫ್ 16 ವಿಮಾನವನ್ನು ಸ್ವತಃ ಅಭಿನಂದನ್ ಅವರೇ ಹೊಡೆದುರುಳಿಸಿದ್ದರು.

   ಪಾಕಿಸ್ತಾನದ ಯುದ್ಧ ವಿಮಾನ ಪತನ ಖಚಿತ: ವಿದೇಶಾಂಗ ಸಚಿವಾಲಯ

   ಮತ್ತೊಂದು ಎಫ್ 16 ವಿಮಾನ ಚಲಾಯಿಸುತ್ತಿದ್ದ ಶಹಾಜ್ ಉದ್ ದಿನ್ ಪ್ಯಾರಾಚ್ಯೂಟ್ ಬಳಸಿ ಸುರಕ್ಷಿತವಾಗಿ ಕೆಳಗೆ ಇಳಿದಿದ್ದರಾದರೂ ಅವರನ್ನು ಭಾರತೀಯ ಯೋಧ ಎಂದು ತಿಳಿದು ಪಾಕ್ ಜನತೆ ಹೊಡೆದು ಕೊಂದಿದ್ದಾರೆ.

   ಭಾರತದ ಮೇಲೆ ದಾಳಿಗೆ ಎಫ್ 16 ವಿಮಾನ ಬಳಸಿ ಅಮೆರಿಕ ಕೆಂಗಣ್ಣಿಗೆ ಗುರಿಯಾಗಿದ್ದ ಪಾಕ್ ಅದೇ ಕಾರಣ ಎಫ್ 16 ವಿಮಾನ ಪತನ ಹಾಗೂ ಅದರಲ್ಲಿದ್ದ ಪೈಲಟ್ ಸಾವು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನೂ ಮಾಡಿದೆ.

   English summary
   F-16 jet fighter deployed by Pakistan during February 27 assault against India in northern sector was flown by Wg Cdr Shahzaz Ud Din.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X