ವರಸೆ ಬದಲಿಸಿದ ಪಾಕಿಸ್ತಾನ, F-16 ಯುದ್ಧ ವಿಮಾನ ಬಳಕೆ ಬಗ್ಗೆ ಹೇಳಿಕೆ

ಇಸ್ಲಾಮಾಬಾದ್, ಏಪ್ರಿಲ್ 1: ಭಾರತದ ವಿರುದ್ಧವಾಗಿ ಅಮೆರಿಕ ನಿರ್ಮಿತ F-16 ಯುದ್ಧ ವಿಮಾನವನ್ನು ಬಳಸಿಲ್ಲ ಎಂದು ಹೇಳಿಕೊಂಡು ಬಂದಿದ್ದ ಪಾಕಿಸ್ತಾನದ ಸೇನೆ ಸೋಮವಾರ ತನ್ನ ವರಸೆ ಬದಲಿಸಿದೆ. ತನ್ನ ನ್ಯಾಯಬದ್ಧವಾದ ಸ್ವ ರಕ್ಷಣೆಗೆ ಯಾವುದೇ ಯುದ್ಧ ವಿಮಾನವಾದರೂ ಬಳಸುವ ಹಕ್ಕು ತನಗಿದೆ ಎಂದು ಹೇಳಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭಾರತದ ವಾಯು ಸೇನೆ ವಿರುದ್ಧ ಚೀನಾ ನಿರ್ಮಿತ JF17 ಯುದ್ಧ ವಿಮಾನವನ್ನು ಮಾತ್ರ ಪಾಕ್ ಬಳಸಿತ್ತು ಎಂದು ಹೇಳಿಕೊಂಡು ಬರುತ್ತಿತ್ತು. ಅದು ಅಮೆರಿಕ ನಿರ್ಮಿತ F-16 ಯುದ್ಧ ವಿಮಾನವಲ್ಲ ಎಂದು ವಾದಿಸುತ್ತಿತ್ತು. ಜತೆಗೆ ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಿದ್ದಾಗಿ ಹೇಳಿಕೊಂಡು ಬರುತ್ತಿತ್ತು. ಈ ಎರಡೂ ಅಂಶಗಳನ್ನು ಭಾರತ ಅಲ್ಲಗಳೆಯುತ್ತಾ ಬಂದಿತ್ತು.

ಸೋಮವಾರ ಸಂಜೆ ಪಾಕಿಸ್ತಾನ ಸೇನೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಭಾರತದ ಎರಡು ಯುದ್ಧ ವಿಮಾನಗಳು ಎಲ್ ಒಸಿ ದಾಟಿ ಬಂದಾಗ ಪಾಕ್ ವಾಯು ಸೇನೆ ಹೊಡೆದುರುಳಿಸಿತು. ಅದು JF17 ಅಥವಾ F-16 ಯಾವುದು ಅನ್ನೋದು ವಿಷಯ ಅಲ್ಲ. ಪಾಕಿಸ್ತಾನವು ತನ್ನ ರಕ್ಷಣೆಗಾಗಿ ಭಾರತದ ಎರಡು ಯುದ್ಧ ವಿಮಾನ ಹೊಡೆದುರುಳಿಸಿದೆ ಎಂದು ತಿಳಿಸಲಾಗಿದೆ.

F-16 jets used against India, Pakistan military now says it was ‘self defence’

ಒಂದು ವೇಳೆ F-16 ಯುದ್ಧ ವಿಮಾನವನ್ನು ಬಳಸಿದ್ದೇ ಆದರೆ ಅದು ಅಮೆರಿಕ ವಿಧಿಸಿದ ಷರತ್ತು ಉಲ್ಲಂಘಿಸಿದಂತಾಗುತ್ತದೆ. ಈ ಯುದ್ಧ ವಿಮಾನವನ್ನು ಭಯೋತ್ಪಾದಕರ ಮೇಲೆ ದಾಳಿ ನಡೆಸುವುದಕ್ಕೆ ಮಾತ್ರ ಬಳಸಬೇಕು, ಬೇರೆ ಯಾವುದೇ ದೇಶದ ವಿರುದ್ಧ ಆಲ್ಲ ಎಂದಿತ್ತು. ಯಾವಾಗ ಭಾರತ, ಅಮೆರಿಕದಿಂದ ಪ್ರಬಲ ಸಾಕ್ಷ್ಯಾಧಾರ ನೀಡಲು ಆರಂಭಿಸಿದಾಗ ಪಾಕಿಸ್ತಾನ ಒತ್ತಡಕ್ಕೆ ಸಿಲುಕಿಕೊಂಡು, ಈ ಹೇಳಿಕೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+