Russia & Ukraine: ಉಕ್ರೇನ್‌ಗೆ ಬ್ರಹ್ಮಾಸ್ತ್ರ ಕೊಡಲಿದೆ ಅಮೆರಿಕ!

ಅಮೆರಿಕ ಅಖಾಡ ಪ್ರವೇಶ ಮಾಡಿದ್ದು, ಇಷ್ಟುದಿನ ತೆರೆ ಹಿಂದೆ ನಿಂತು ರಷ್ಯಾ & ಉಕ್ರೇನ್ ಯುದ್ಧದಲ್ಲಿ ಭಾಗವಹಿಸಿತ್ತು. ಆದರೆ ಇದೀಗ ಕಾಲ ಬದಲಾದಂತೆ ಅಮೆರಿಕ ತನ್ನ ನಿಲುವು ಬದಲಾಯಿಸಿಕೊಂಡಿದೆ. ಹೀಗಾಗಿ ಉಕ್ರೇನ್‌ಗೆ ಬಹಿರಂಗ ಬೆಂಬಲ ನೀಡಿದಂತೆ ಕಾಣುತ್ತಿದ್ದು ವಿಶ್ವದ ದೊಡ್ಡಣ್ಣ ತನ್ನ ಬಳಿ ಇರುವ ಅತ್ಯಂತ ಶಕ್ತಿಶಾಲಿ ಅಸ್ತ್ರ ಕೊಡುತ್ತಿದೆ. ಅಮೆರಿಕದ ಬ್ರಹ್ಮಾಸ್ತ್ರ ಉಕ್ರೇನ್ ಬತ್ತಳಿಕೆ ಸೇರಲಿದ್ದು, ರಷ್ಯಾ ಮತ್ತಷ್ಟು ರೊಚ್ಚಿಗೆದ್ದಿದೆ.

ಶಸ್ತ್ರಾಸ್ತ್ರ ಪೂರೈಕೆ ಮಾಡುವ, ಜಗತ್ತಿನ ಶಕ್ತಿಶಾಲಿ ದೇಶಗಳ ಪೈಕಿ ಅಮೆರಿಕ ನಂ.1 ಸ್ಥಾನ ಪಡೆದಿದೆ. ಇಂತಿಪ್ಪ ಅಮೆರಿಕ ಬಳಿ ಭಯಾನಕ ಅಸ್ತ್ರ ಒಂದಿದ್ದು ಅದರ ಹೆಸರು ಎಫ್-16 ಅಂತಾ. ಹೀಗೆ ಜಗತ್ತಿನ ಅತಿ ಶಕ್ತಿಶಾಲಿ ಹಾಗೂ ಭಾರಿ ವೆಚ್ಚದ ಯುದ್ಧ ವಿಮಾನಗಳ ಪೈಕಿ ಎಫ್-16 ಮುಂಚೂಣಿಗೆ ಸೇರುತ್ತೆ. ಜಗತ್ತಿನಾದ್ಯಂತ ಎಫ್ 16 ಖರೀದಿಗೆ ಹಲವು ದೇಶಗಳು ತುದಿಗಾಲಲ್ಲಿ ನಿಂತಿರುತ್ತವೆ. ಹೀಗೆ ಅತಿ ಶಕ್ತಿಶಾಲಿ ಯುದ್ಧ ವಿಮಾನವನ್ನು ಉಕ್ರೇನ್‌ಗೆ ಈಗ ಗಿಫ್ಟ್ ಕೊಡಲು ಅಮೆರಿಕ ಮುಂದೆ ಬಂದಿದೆ. ದೊಡ್ಡಣ್ಣ ಕೈಗೊಂಡ ಈ ನಿರ್ಧಾರ ರಷ್ಯಾ ಅಧ್ಯಕ್ಷರನ್ನ ರೊಚ್ಚಿಗೆಬ್ಬಿಸಿದೆ.

F-16 jets to join Ukraine military very soon

ಪರಮಾಣು ಯುದ್ಧ ಭೀತಿ ಶುರು?

ಎಫ್-16 ಯುದ್ಧ ವಿಮಾನಗಳನ್ನು ಯುರೋಪ್‌ನಲ್ಲಿನ ತನ್ನ ನ್ಯಾಟೋ ಮಿತ್ರರ ಮೂಲಕ ಉಕ್ರೇನ್‌ಗೆ ತಲುಪಿಸಲು ಅಮೆರಿಕ ಮುಂದಾಗಿದೆ. ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ ಜೊತೆ ಸೇರಿ ಉಕ್ರೇನ್‌ಗೆ ಎಫ್-16 ವಿಮಾನ ಕಳುಹಿಸಲು ಅಮೆರಿಕವು ರೆಡಿಯಾಗಿದೆ. ಅಧಿಕೃತವಾಗಿ ಈ ಬಗ್ಗೆ ಅಮೆರಿಕ ಪತ್ರ ಬರೆದಿದ್ದು, ಸಂಚಲನ ಸೃಷ್ಟಿಯಾಗಿದೆ. ಅಮೆರಿಕದ ಕ್ರಮದ ಬಗ್ಗೆ ರಷ್ಯಾ ಯಾವ ರೀತಿ ಕ್ರಮ ಕೈಗೊಳ್ಳುತ್ತೆ? ಅನ್ನೋದೆ ಈಗ ಯಕ್ಷ ಪ್ರಶ್ನೆಯಾಗಿದೆ ಈಗಾಗಲೇ ಅಮೆರಿಕ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ಮುಂದೆ ಪರಮಾಣು ಯುದ್ಧ ಭೀತಿ ಸೃಷ್ಟಿಯಾಗುವ ಆತಂಕ ಇದೆ ಆಕ್ರೋಶ ಹೊರಹಾಕಿದೆ.

ನ್ಯಾಟೋ & ಅಮೆರಿಕದ ಭಾರಿ ನೆರವು

ಇಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ರಷ್ಯಾ ಮತ್ತು ಉಕ್ರೇನ್ ಯುದ್ಧವೇ ಜಗತ್ತಿನ 3ನೇ ಮಹಾಯುದ್ಧ ಎನ್ನಬಹುದು. ಏಕೆಂದರೆ ಸುದೀರ್ಘ ಯುದ್ಧಕ್ಕೆ ರಷ್ಯಾ ತೊಡೆತಟ್ಟಿ ನಿಂತಿರುವ ಸಂದರ್ಭದಲ್ಲೇ, ನ್ಯಾಟೋ ಮತ್ತು ಅಮೆರಿಕ ಕೂಡ ಉಕ್ರೇನ್ ಬೆನ್ನಿಗೆ ನಿಂತು ಯುದ್ಧಕ್ಕೆ ಸಾಥ್ ಕೊಡಲು ಮುಂದಾಗಿವೆ. ಹೀಗಾಗಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಅದೆಷ್ಟು ವರ್ಷ ನಡೆದರೂ ಸಹಾಯ ಸಿಗಲಿದೆ. ಈಗಾಗಲೇ ಅಮೆರಿಕ 3 ಲಕ್ಷ ಕೋಟಿಯಷ್ಟು ನೆರವು ನೀಡಿ ಉಕ್ರೇನ್ ಬೆನ್ನಿಗೆ ನಿಂತಿದೆ. ಮುಂದೆಯೂ ಈ ರೀತಿ ಸಹಾಯ ಮಾಡಲು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಎಫ್-16 ಯುದ್ಧ ವಿಮಾನಗಳು ಉಕ್ರೇನ್‌ಗೆ ಹೋಗುತ್ತಿವೆ.

F-16 jets to join Ukraine military very soon

ಅಮೆರಿಕ ಕೂಡ ನೆರವು ನೀಡುತ್ತಿದೆ

ಒಟ್ನಲ್ಲಿ ಕೋಳಿ ಜಗಳದ ರೀತಿ ಶುರುವಾಗಿದ್ದ ರಷ್ಯಾ, ಉಕ್ರೇನ್ ಯುದ್ಧ ಎರಡು ವರ್ಷದ ಕಡೆ ಪಯಣ ಬೆಳೆಸಿದೆ. ಮುಂದಿನ 10 ವರ್ಷದಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎನ್ನುವ ಮುನ್ಸೂಚನೆ ಸಿಕ್ಕಿದೆ. ಅಮೆರಿಕ ಕೂಡ ಶಾಂತಿ ಮಾತುಕತೆಗೆ ಬದಲಾಗಿ ಉಕ್ರೇನ್‌ಗೆ ಅಸ್ತ್ರಗಳನ್ನ ನೀಡುತ್ತಿದೆ. ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿವೆ. ಅಮೆರಿಕ ಈಗಾಗಲೇ ಭಾರಿ ಪ್ರಮಾಣದಲ್ಲಿ ಉಕ್ರೇನ್‌ಗೆ ಮಿಲಿಟರಿ ನೆರವನ್ನು ನೀಡಿದ್ದು, ಇದೀಗ ಅಧಿಕೃತವಾಗಿ ತನ್ನ ಶಕ್ತಿಶಾಲಿ ಅಸ್ತ್ರ ಕೊಡಲು ಸಜ್ಜಾಗಿದೆ.

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ತುಪ್ಪ ಸುರಿಯುವ ಕೆಲಸ ಆಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಅಮೆರಿಕ ಕೈಗೊಂಡಿರುವ ನಿರ್ಧಾರಕ್ಕೆ ರಷ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದು, ತನ್ನ ಸಿಟ್ಟನ್ನು ಉಕ್ರೇನ್ ವಿರುದ್ಧ ದಾಳಿಯಲ್ಲಿ ತೀರಿಸಿಕೊಳ್ಳುವ ಭಯ ಕೂಡ ಮೂಡಿದೆ. ಹೀಗಾಗಿ ಉಕ್ರೇನ್ ಕೂಡ ಅಲರ್ಟ್ ಆಗಿದ್ದು, ದಾಳಿಗೆ ಸನ್ನದ್ಧವಾಗಿದೆ. ಇವರ ಈ ಕಿತ್ತಾಟದಲ್ಲಿ ಅಮಾಯಕರು ಬೆಚ್ಚಿ ಬೀಳುತ್ತಿರುವುದು ದುರಂತವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+