ಇರಾನ್ ಬೆಂಬಲಕ್ಕೆ ನಿಂತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್? Israel And Iran

ಇರಾನ್ ರೊಚ್ಚಿಗೆದ್ದು ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದೆ, ಇದೇ ಸಮಯದಲ್ಲಿ ಇಸ್ರೇಲ್ ಕೂಡ ತನ್ನ ಶತ್ರು ಇರಾನ್ ವಿರುದ್ಧ ರಣಭೀಕರ ದಾಳಿ ಮಾಡಲು ಎಲ್ಲಾ ರೀತಿ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೀಗೆ ಇಬ್ಬರ ನಡುವೆ ಘೋರ ಗಲಾಟೆ ನಡೆಯುವಾಗ ಜಗತ್ತು ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಆದ್ರೆ ಇದೇ ಸಮಯದಲ್ಲಿ ಅಮೆರಿಕದ ಶತ್ರು & ಇರಾನ್ ಮಿತ್ರ ರಷ್ಯಾ ಏನು ಮಾಡುತ್ತಿದೆ ಗೊತ್ತಾ? ಭೀಕರ ಯುದ್ಧದ ಬಗ್ಗೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿಲುವು ಏನು?

ಆಧುನಿಕ ಕಾಲದಲ್ಲಿ ಯುದ್ಧಗಳು ನಡೆಯೋದಿಲ್ಲ ಅನ್ನೋ ಮಾತು ಸುಳ್ಳು ಆಗುತ್ತಿದ್ದು, ಭಾರಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಶುರುವಾಗಿದೆ. ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾದ ನಂತರ ಪದೇ ಪದೇ ಹೊಸ ಹೊಸ ಯುದ್ಧ ನಡೆಯುತ್ತಿದ್ದು, ಭಾರಿ ದೊಡ್ಡ ಕಂಟಕ ಎದುರಾಗುವಂತೆ ಮಾಡಿದೆ. ಹಾಗಾದ್ರೆ ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನೆಗಳ ಪೈಕಿ ಒಂದಾಗಿರುವ ರಷ್ಯಾ ಈಗ ಯಾರ ಬೆಂಬಲಕ್ಕೆ ನಿಂತಿದೆ? ಇರಾನ್ & ಇಸ್ರೇಲ್ ಯುದ್ಧದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರ ನಿಲುವು ಏನು? ಮುಂದೆ ಓದಿ.

Explore What Russia Is Doing After Israel And Iran Conflict

ಯುದ್ಧದ ಕಾರಣಕ್ಕೆ ಹೊಸ ಆತಂಕ ಶುರು!

ಯುದ್ಧ.. ಯುದ್ಧ.. ಹೀಗೆ ಹಿಂಸೆಯ ಮಹಾಪರ್ವ ಜಗತ್ತಿನ ಮೂಲೆ ಮೂಲೆಗೂ ಹಬ್ಬುತ್ತಿದ್ದು, ಭಯ ಶುರುವಾಗಿದೆ. ಇಸ್ರೇಲ್ ಸೇನೆ ಯಾವಾಗ ಇರಾನ್ ಮೇಲೆ ಭೀಕರ ದಾಳಿ ಮಾಡಲು ಶುರು ಮಾಡಿತ್ತೋ ಆಗಲೇ ನೋಡಿ ಜಗತ್ತಿಗೆ ಹೊಸ ಭಯ ಶುರುವಾಗಿದ್ದು. ಈ ಎರಡೂ ದೇಶಗಳು ಬಡಿದಾಡಲು ನಿಂತರೆ ಎಂತಹ ಸಮಸ್ಯೆ ಆಗಬಹುದು? ಅನ್ನೋ ಊಹೆ ಮೊದಲೇ ಇತ್ತು. ಅದ್ರಲ್ಲೂ ಇರಾನ್ & ಇಸ್ರೇಲ್ ದೇಶಗಳ ಬಳಿ ಘೋರ ಘನಘೋರ ಅಸ್ತ್ರಗಳ ರಾಶಿ ಇದ್ದು, ಅಕಸ್ಮಾತ್ ಈ ಅಸ್ತ್ರಗಳನ್ನ ಬಳಕೆ ಮಾಡಿದರೆ ಭವಿಷ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗಲಿದೆ.

ಮನುಷ್ಯರ ಅಂತ್ಯ ಗ್ಯಾರಂಟಿ ಆಯ್ತಾ?

ಇಷ್ಟಾದರೂ ಇಬ್ಬರ ನಡುವಿನ ಯುದ್ಧವಂತೂ ನಿಲ್ಲುತ್ತಿಲ್ಲ, ಬದಲಾಗಿ ಇನ್ನಷ್ಟು ಹೆಚ್ಚಾಗುತ್ತಿರುವ ಯುದ್ಧದ ಕಾರಣಕ್ಕಾಗಿ ಹೊಸ ಆತಂಕವೂ ಎದುರಾಗಿದೆ. ಇಂತಹ ಭಾರಿ ಸೂಕ್ಷ್ಮ ಸಮಯದಲ್ಲಿ ರಷ್ಯಾ ಅಧ್ಯಕ್ಷ ನಿಲುವು ಕುತೂಹಲವನ್ನ ಕೆರಳಿಸಿದೆ. ಯಾಕೆ ಅಂದ್ರೆ ರಷ್ಯಾ ಅಧ್ಯಕ್ಷ ಪುಟಿನ್ ಇರಾನ್ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದು, ಮತ್ತೊಂದು ಕಡೆ ಇಸ್ರೇಲ್ ಜೊತೆ ಕೂಡ ಚನ್ನಾಗಿಯೇ ಇದ್ದಾರೆ. ಒಟ್ನಲ್ಲಿ ಇದನ್ನೆಲ್ಲಾ ನೋಡುತ್ತಿದ್ದರೆ ಮನುಷ್ಯರ ಅಂತ್ಯ ಶುರುವಾದಂತೆ ಕಾಣ್ತಾ ಇದ್ದು, ಸಾಲು ಸಾಲು ಯುದ್ಧಗಳ ಕಾರಣಕ್ಕೆ ಭವಿಷ್ಯದ ಬಗ್ಗೆಯೇ ಭಯ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+