ಹಿಂಸೆ ನಿಲ್ಲಿಸಿ ಶಾಂತಿಯ ಕಡೆಗೆ ಮರಳುತ್ತಿರುವ ಮಧ್ಯಪ್ರಾಚ್ಯ... ಮುಂದಿನ ಕಥೆ ಏನು?
ಮಧ್ಯಪ್ರಾಚ್ಯ ಪದೇ ಪದೇ ಹಿಂಸೆಯ ಕೂಪದಲ್ಲಿ ಬಿದ್ದು ಒದ್ದಾಡಿದ್ದು, ಕಳೆದ 2 ವರ್ಷಗಳಿಂದ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲೇ ದಿಢೀರ್ ದೊಡ್ಡ ದೊಡ್ಡ ಯುದ್ಧಗಳನ್ನು ಅಮೆರಿಕ ನಿಲ್ಲಿಸಿದ್ದು, ಭಾರಿ ಕುತೂಹಲ ಕೆರಳಿಸಿತ್ತು. ಇಂತಹ ಸಮಯದಲ್ಲೇ ಮತ್ತೊಂದು ಕುತೂಹಲವು ಕೂಡ ಕೆರಳುತ್ತಿದೆ. ಹಾಗಾದ್ರೆ, ಹಿಂಸೆ ನಿಲ್ಲಿಸಿ ಶಾಂತಿಯ ಕಡೆಗೆ ಮರಳುತ್ತಿರುವ ಮಧ್ಯಪ್ರಾಚ್ಯ... ಮುಂದಿನ ಕಥೆ ಏನು?
ಕಚ್ಚಾತೈಲ ಸೇರಿದಂತೆ ಹಲವು ರೀತಿಯ ನೈಸರ್ಗಿಕ ಸಂಪತ್ತು ಹೊಂದಿರುವ ಮಧ್ಯಪ್ರಾಚ್ಯ ಭಾಗದಲ್ಲಿ ಈಗ ಭೀಕರ ಸಂಘರ್ಷಗಳು ಶುರುವಾಗಿವೆ. ಇದೇ ಕಾರಣಕ್ಕೆ ಪದೇ ಪದೇ ಮಧ್ಯಪ್ರಾಚ್ಯ ಪ್ರದೇಶವನ್ನು ಸೈಲೆಂಟ್ ಮಾಡುವ ಪ್ರಯತ್ನಗಳು ಕೂಡ ನಡೆಯುತ್ತಿವೆ. ಇಷ್ಟೆಲ್ಲಾ ಪ್ರಯತ್ನಗಳ ನಡುವೆ ಕೂಡ ಆಗಾಗ ಯುದ್ಧ & ಹಿಂಸೆ ನಡೆಯುತ್ತಿರುವುದು ಆತಂಕ ಮೂಡಿಸಿದೆ. ಹೀಗಿದ್ದಾಗಲೇ ಅಮೆರಿಕ ಕೂಡ ಮಧ್ಯಪ್ರವೇಶ ಮಾಡಿ, ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧಗಳನ್ನ ನಿಲ್ಲಿಸಿದೆ. ಇಸ್ರೇಲ್ ತಣ್ಣಗೆ ಇರಲಿ ಅಂತಾ ಅಮೆರಿಕ ಸಲಹೆಯನ್ನ ಕೂಡ ನೀಡಿದೆ. ಇಂತಹ ಸಮಯದಲ್ಲೇ ಮತ್ತೊಂದು ಯುದ್ಧದ ಅನುಮಾನ ಕೂಡ ಶುರುವಾಗಿದೆ...

ಇಸ್ರೇಲ್ & ಗಾಜಾ ನಡುವೆ ಕದನ ವಿರಾಮ...
ಗಾಜಾ & ಇಸ್ರೇಲ್, ಯೆಮನ್ & ಇಸ್ರೇಲ್, ಲೆಬನಾನ್ & ಇಸ್ರೇಲ್, ಸಿರಿಯಾ & ಇಸ್ರೇಲ್ ಯುದ್ಧದ ನಡುವೆ ಇರಾನ್ ಜೊತೆಗೂ ಘೋರ ಯುದ್ಧವನ್ನು ಶುರು ಮಾಡಿತ್ತು ಇಸ್ರೇಲ್ ಮಿಲಿಟರಿ. ಮಧ್ಯಪ್ರಾಚ್ಯದಲ್ಲಿ ಭಾರಿ ದೊಡ್ಡ ಯುದ್ಧ ಶುರುವಾಗಿ, ಪರಮಾಣು ಸಾಮರ್ಥ್ಯ ಇರುವ ಇರಾನ್ ವಿರುದ್ಧ ಕೂಡ ದಾಳಿ ಮಾಡೋಕೆ ಮುಂದಾಗಿತ್ತು ಇಸ್ರೇಲ್. ಆದರೆ ಕೊನೆಗೆ ಅಮೆರಿಕದ ಮಧ್ಯಸ್ಥಿಕೆ ಹಿನ್ನೆಲೆ ಇರಾನ್ ವಿರುದ್ಧದ ಯುದ್ಧವನ್ನ ನಿಲ್ಲಿಸಿತ್ತು ಇಸ್ರೇಲ್. ಇದರ ಜೊತೆಗೆ ಗಾಜಾ ವಿರುದ್ಧದ ಯುದ್ಧಕ್ಕೆ ಕೂಡ ಬ್ರೇಕ್ ಹಾಕಲಾಗಿದೆ. ಆದರೂ ಮತ್ತೊಮ್ಮೆ ಮಧ್ಯಪ್ರಾಚ್ಯ ಭಾಗದಲ್ಲಿ ತಿಕ್ಕಾಟ ಜೋರಾಗುವ ಆತಂಕ ಮೂಡಿದೆ.












Click it and Unblock the Notifications