ಇರಾನ್ ಪರಮಾಣು ಸ್ಥಾವರಕ್ಕೆ ಭಾರಿ ದೊಡ್ಡ ಪ್ರಮಾಣದ ಹಾನಿ, ಮುಂದಿನ ಕಥೆ ಏನು?
ಇರಾನ್ & ಇಸ್ರೇಲ್ ನಡುವೆ ಯುದ್ಧ ನಿಂತು ಹೋಗಿದ್ದರೂ ಯುದ್ಧದ ಪರಿಣಾಮಗಳು ಮಾತ್ರ ಒಂದೊಂದಾಗಿ ಹೊರಗೆ ಬರುತ್ತಿವೆ. ಇರಾನ್ ನೆಲದಲ್ಲಿ ಪರಮಾಣು ಯೋಜನೆ ಕೈಗೊಳ್ಳಲಾಗಿದೆ, ಅಂತಾ ಆರೋಪಿಸಿದ್ದ ಇಸ್ರೇಲ್ ಪಡೆಗಳು ಘೋರವಾದ ದಾಳಿ ಮಾಡಿದ್ದವು. ಆ ನಂತರ ಅಮೆರಿಕ ಕೂಡ ಎಂಟ್ರಿ ಕೊಟ್ಟು ಇದೇ ಇರಾನ್ ಪರಮಾಣು ಸ್ಥಾವರದ ಮೇಲೆ ಕೂಡ ದಾಳಿ ಮಾಡಿತ್ತು. ಇಂತಹ ಸಮಯದಲ್ಲೇ ಆತಂಕ ಸೃಷ್ಟಿ ಮಾಡುವ ವರದಿಯೊಂದು ಇದೀಗ ಸಿಕ್ಕಿದೆ.
ಇರಾನ್ ನೆಲದಲ್ಲಿ ಪರಮಾಣು ಬಾಂಬ್ ತಯಾರಿಸುತ್ತಿದ್ದಾರೆ ಅನ್ನೋ ಸುದ್ದಿ ಸಿಕ್ಕ ನಂತರ ಅಮೆರಿಕದಲ್ಲಿ ಕೂಡ ಭಾರಿ ದೊಡ್ಡ ಚರ್ಚೆ ಶುರುವಾಗಿತ್ತು. ಅಲ್ಲದೆ ಭವಿಷ್ಯದಲ್ಲಿ ಇದು ನಮಗೆ ಕೂಡ ಸಮಸ್ಯೆ ಮಾಡಿ ತೊಂದರೆ ಕೊಡಬಹುದು ಅಂತಾ ಅಮೆರಿಕ ಕೂಡ ದಾಳಿ ಮಾಡಿತ್ತು. ಆದರೆ ಅಮೆರಿಕ ಅಂದುಕೊಂಡಿದ್ದ ರೀತಿ ಇರಾನ್ ಪರಮಾಣು ಸ್ಥಾವರಗಳು ನಾಶವಾಗಿಲ್ಲ, ಬದಲಾಗಿ ಒಂದಷ್ಟು ದೊಡ್ಡ ಪ್ರಮಾಣದ ಹಾನಿ ಆಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಚರ್ಚೆಗಳು ನಡೆಯುತ್ತಿರುವಾಗ, ಇರಾನ್ ಮತ್ತೆ ತನ್ನ ಪರಮಾಣು ಬಾಂಬ್ ಯೋಜನೆಗಳನ್ನ ಶುರು ಮಾಡುವ ಭಯ ಕೂಡ ಎದುರಾಗಿದೆ.

ಇಸ್ರೇಲ್ ಎದೆಯಲ್ಲಿ ಈಗಲೂ ನಡುಕ?
ಇರಾನ್ ನೆಲದಲ್ಲಿ ಒಂದು ಬಾರಿ ಪರಮಾಣು ಬಾಂಬ್ ತಯಾರಿಕೆ ಸಕ್ಸಸ್ ಕಂಡರೆ ದೊಡ್ಡ ಹಾನಿ ಜೊತೆಗೆ ಇಸ್ರೇಲ್ ದೇಶಕ್ಕೆ ನೆಲೆ ಕೂಡ ಇಲ್ಲದಂತೆ ಆಗುವ ಆತಂಕ ಈಗ ಕಾಡುತ್ತಿದೆ. ಇದೇ ಕಾರಣಕ್ಕೆ ಇರಾನ್ ಬಗ್ಗೆ ಅಲರ್ಟ್ ಆಗಿರುವ ಇಸ್ರೇಲ್, ಪದೇ ಪದೇ ದಾಳಿ ಮಾಡುತ್ತಾ ಇರಾನ್ ವಿರುದ್ಧ ತಿಕ್ಕಾಟ ನಡೆಸುತ್ತಾ ಇದೆ. ಇಷ್ಟೆಲ್ಲದರ ನಡುವೆ ಕೂಡ ಇರಾನ್ ಎಲ್ಲವನ್ನೂ ಎದುರಿಸಿ ನಿಂತಿದ್ದು, ಇಸ್ರೇಲ್‌ಗೆ ಕೂಡ ತನ್ನ ಶಕ್ತಿಯನ್ನ ತೋರಿಸಿತ್ತು. ಆದರೆ ಅಮೆರಿಕದ ದಾಳಿ ನಂತರ ಸೈಲೆಂಟ್ ಆಗಿದ್ದ ಇರಾನ್ ಈಗ ಮತ್ತೆ ಪರಮಾಣು ಬಾಂಬ್ ಪರೀಕ್ಷೆ ಶುರು ಮಾಡಬಹುದು ಅನ್ನೋ ಆತಂಕ ಇಸ್ರೇಲ್ ದೇಶಕ್ಕೆ ಕಾಡುತ್ತಿದೆ.












Click it and Unblock the Notifications