Donald Trump Tariffs: ಟ್ರಂಪ್ ತೆರಿಗೆ ಬಾಣಕ್ಕೆ ನಲುಗಿದ ಭಾರತ, ಉದ್ಯೋಗ ಕಟ್ ಗ್ಯಾರಂಟಿ?

ಡೊನಾಲ್ಡ್ ಟ್ರಂಪ್ ಈಗ ತಮ್ಮ ಎದುರಾಳಿ ದೇಶಗಳ ವಿರುದ್ಧ ತೆರಿಗೆ ಯುದ್ಧವನ್ನು ಸಾರಿದ್ದು, ಇದರ ಪರಿಣಾಮ ಈಗಾಗಲೇ ಸಾವಿರಾರು ಉದ್ಯಮಗಳು ನಲುಗುವಂತೆ ಆಗಿದೆ. ಅದರಲ್ಲೂ ಭಾರತಕ್ಕೆ ಕೂಡ ದೊಡ್ಡ ಕಂಟಕ ಎದುರಾಗಿ, ಭಾರತದಿಂದ ರಫ್ತು ಮಾಡುತ್ತಿರುವ ವಸ್ತುಗಳ ಮೇಲೆ ಕೂಡ ಭಾರಿ ದೊಡ್ಡ ಮೊತ್ತದ ಸುಂಕ ಬೀಳುವ ಭಯ ಕಾಡುತ್ತಿದೆ. ಈ ಪೈಕಿ ಇದೀಗ ಭಾರತದ ಆಭರಣ ಉದ್ಯಮದಲ್ಲಿ ದೊಡ್ಡ ಮಟ್ಟದ ಉದ್ಯೋಗ ಕಡಿತ ಗ್ಯಾರಂಟಿ ಆಗುತ್ತಿದೆ.

ಅಮೆರಿಕದ ಆರ್ಥಿಕ ಪರಿಸ್ಥಿತಿ ಸರಿ ಮಾಡುತ್ತೇನೆ ಅಂತಾ ಡೊನಾಲ್ಡ್ ಟ್ರಂಪ್ ಅವರು ಈಗ ವಿದೇಶದಿಂದ ಬರುವ ವಸ್ತುಗಳ ಮೇಲೆ ಭಾರಿ ದೊಡ್ಡ ಮೊತ್ತದ ತೆರಿಗೆ ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಜಾಗತಿಕ ಆರ್ಥಿಕ ವಲಯ ಕೂಡ ನಲುಗಿ ಹೋಗಿದ್ದು, ಮುಂದಿನ ಪರಿಸ್ಥಿತಿ ಇನ್ನೂ ಭಯಾನಕ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲೇ ಭಾರತದ ಆಭರಣ ಕ್ಷೇತ್ರಕ್ಕೂ ದೊಡ್ಡ ಹೊಡೆತ ಬಿದ್ದಿದ್ದು, ಟ್ರಂಪ್ ಕೈಗೊಂಡಿರುವ ನಿರ್ಧಾರದ ಪರಿಣಾಮ ಭಾರತದಲ್ಲಿ ಲಕ್ಷ ಲಕ್ಷ ಉದ್ಯೋಗ ನಷ್ಟ ಪಕ್ಕಾ ಆಗುತ್ತಿದೆ.

Explore how Trump tariff on Indian gems and jewellery will impact the industry

ಅಮೆರಿಕ ಅಧ್ಯಕ್ಷರ ತೆರಿಗೆ ಬಾಂಬ್!

ಟ್ರಂಪ್ ಅವರು ಇದೀಗ ಘೋಷಣೆ ಮಾಡಿರುವಂತೆ ಭಾರತದಿಂದ ಅಮೆರಿಕಗೆ ರಫ್ತು ಆಗುವ ಆಭರಣಗಳ ಮೇಲೆ ಶೇಕಡಾ 27 ರಷ್ಟು ಸುಂಕ ಬೀಳಲಿದೆ. ಅದರಲ್ಲೂ ಚಿನ್ನ & ಪ್ಲಾಟಿನಂ ಮೇಲೆ ಶೇಕಡಾ 32 ರಿಂದ 34 ರಷ್ಟು ಸುಂಕ ಹಾಕಲಾಗುತ್ತದೆ. ಇದು ಭವಿಷ್ಯದಲ್ಲಿ ಭಾರತದ ಆಭರಣ ಉದ್ಯಮಗಳು ನಡೆಯುವುದೇ ಕಷ್ಟಕರವಾಗುವ ಹಂತಕ್ಕೆ ತಲುಪಲಿದ್ದು, ಹೀಗಾಗಿಯೇ ಇದೀಗ ಭಾರತದ ಆಭರಣ ಉದ್ಯಮ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಭಯ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+