ಹಮಾಸ್ - ಇಸ್ರೇಲ್ ಯುದ್ಧದ ಅಖಾಡಕ್ಕೆ ಸೌದಿ ಅರೇಬಿಯಾ ಎಂಟ್ರಿ!
ಇಸ್ರೇಲ್ ಸೇನೆ & ಹಮಾಸ್ ಉಗ್ರರ ನಡುವೆ ಕಳೆದ 1 ತಿಂಗಳಿಂದ ನಡೆಯುತ್ತಿರುವ ಭೀಕರ ಯುದ್ಧ ಕೈಮೀರಿ ಹೋಗುತ್ತಿದೆ. ಈವರೆಗೆ 10,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನ ಬಲಿಯಾಗಿ ಜೀವ ಬಿಟ್ಟಿದ್ದು, ಹೀಗೆ ಮೃತಪಟ್ಟವರಲ್ಲಿ 4,100 ಮಕ್ಕಳೇ ಸೇರಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಸೌದಿ ಅರೇಬಿಯಾ ಕೂಡ ಯುದ್ಧದ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ!
ಮಧ್ಯಪ್ರಾಚ್ಯ ದೇಶಗಳಲ್ಲಿ ಸೌದಿ ಅರೇಬಿಯಾ ತುಂಬಾನೆ ಸ್ಟ್ರಾಂಗ್, ಅದು ಹಣದ ವಿಚಾರ ಇರಲಿ, ಅಥವಾ ಮಿಲಿಟರಿ ಮ್ಯಾಟರ್ರೇ ಇರಲಿ. ಸೌದಿ ಅರೇಬಿಯಾ ಮುಟ್ಟೋಕೆ ಸುಲಭದ ಹಾದಿಯಲ್ಲಿ ಸಾಧ್ಯವಿಲ್ಲ. ಸ್ಥಿತಿ ಹೀಗಿದ್ದಾಗಲೇ ಇಸ್ರೇಲ್ ಸೇನೆ & ಹಮಾಸ್ ಉಗ್ರರ ಮಧ್ಯೆ ನಡೆಸುತ್ತಿರುವ ಯುದ್ಧದಲ್ಲಿ ಸೌದಿ ಅರೇಬಿಯಾ ಯಾರ ಪರವಾಗಿ ನಿಲ್ಲಲಿದೆ ಗೊತ್ತಾ? ಹೀಗೆ ಸೌದಿ ಅರೇಬಿಯಾ ಇಬ್ಬರ ಯುದ್ಧದಲ್ಲಿ ಮಧ್ಯಪ್ರವೇಶ ಮಾಡಲು ಕಾರಣ ಏನಿರಬಹುದು? ಅದರ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಇಸ್ಲಾಮಿಕ್ ರಾಷ್ಟ್ರಗಳ ಜೊತೆಗೆ ಸಭೆ
ಹೌದು ಇಸ್ರೇಲ್, ಹಮಾಸ್ ಉಗ್ರರ ನಡುವೆ ಈಗ ನಡೆಯುತ್ತಿರುವ ಯುದ್ಧದ ಬಗ್ಗೆ ಚರ್ಚಿಸಲು ಘಟಾನುಘಟಿ ದೇಶಗಳೆ ಒಂದಾಗುತ್ತಿವೆ. ಯುದ್ಧದ ಸಂಬಂಧ ಅರಬ್, ಇಸ್ಲಾಮಿಕ್ ಹಾಗೂ ಆಫ್ರಿಕನ್ ದೇಶಗಳ ಶೃಂಗಸಭೆ ಆಯೋಜಿಸುತ್ತೇವೆ ಅಂತ ಸೌದಿ ಅರೇಬಿಯಾ ಬಂಡವಾಳ ಸಚಿವ ಖಾಲಿದ್ ಅಲ್ ಫಲಿಹ್ ಮಾಹಿತಿ ನೀಡಿದ್ದಾರೆ. ಈ ಮೂಲಕ, ಇಸ್ರೇಲ್ ಸೇನೆ & ಹಮಾಸ್ ಉಗ್ರರ ಯುದ್ಧಕ್ಕೆ ಬ್ರೇಕ್ ಹಾಕಲು ಸೌದಿ ಅರೇಬಿಯಾ ಕೂಡ ತನ್ನ ಪ್ರಯತ್ನ ಆರಂಭಿಸಿದ ರೀತಿ ಕಾಣುತ್ತಿದೆ.
ಶೃಂಗಸಭೆ ಹೇಗೆ ನಡೆಯಲಿದೆ?
ಹಾಗೇ ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಖಾಲಿದ್ ಅಲ್ ಫಲಿಹ್, 'ಕೆಲ ದಿನಗಳಲ್ಲಿ ರಿಯಾದ್‌ನಲ್ಲಿ ಆಫ್ರಿಕಾ & ಸೌದಿ ಶೃಂಗ ಸಭೆಯನ್ನ ಸೌದಿ ಆಯೋಜನೆ ಮಾಡುತ್ತೆ ಎಂಬುದು ಖಚಿತ. ಸೌದಿ ಅರೇಬಿಯಾ ನಾಯಕತ್ವದಲ್ಲಿ ನಡೆಯುವ ಸಮ್ಮೇಳನದ ಮೂಲಕ, ಯುದ್ಧಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿದ್ದೇವೆ' ಎಂದಿದ್ದಾರೆ. ಈ ಮಧ್ಯೆ ಸೌದಿ ಅರೇಬಿಯಾ ಆಡಳಿತ ಆಫ್ರಿಕಾ-ಸೌದಿ ಶೃಂಗಸಭೆ ನಂತರ ಇಸ್ಲಾಮಿಕ್ ಸಮ್ಮೇಳನ ಕೂಡ ಆಯೋಜನೆ ಮಾಡಲಿದೆ ಎಂದಿದ್ದಾರೆ ಫಲಿಹ್.
ಒಟ್ನಲ್ಲಿ ಇಸ್ರೇಲ್ ಸೇನೆ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಈಗ ಬ್ರೇಕ್ ಹಾಕಲೇಬೇಕು ಅಂತಾ ಅರಬ್ ದೇಶಗಳು ಗಟ್ಟಿ ಮನಸ್ಸು ಮಾಡಿವೆ. ಆದರೆ ಇದೀಗ ನಡೆಯುತ್ತಿರುವ ಚರ್ಚೆಗಳು ವರ್ಕೌಟ್ ಆಗುತ್ತವಾ? ಸೌದಿ ಮಾತು ಕೇಳಿ ಇಸ್ರೇಲ್ ಯುದ್ಧ ಹಿಂಪಡೆಯುತ್ತಾ? ಕಾದು ನೋಡಬೇಕಿದೆ.

30 ಸಾವಿರ ಟನ್ ಬಾಂಬ್ ಬಳಕೆ
ಹಮಾಸ್ ಉಗ್ರರು ಎಸಗಿರುವ ಕೃತ್ಯಕ್ಕೆ ಗಾಜಾಪಟ್ಟಿಯ ಸಾಮಾನ್ಯ ಜನರು ಪರದಾಡುತ್ತಿದ್ದಾರೆ. ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು ಇಸ್ರೇಲ್‌ನ ವಿರುದ್ಧ 5000 ರಾಕೆಟ್ ಉಡಾಯಿಸಿ ಅಟ್ಟಹಾಸ ಮೆರೆದಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನು ಮತ್ತು ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಭರ್ಜರಿ 1 ತಿಂಗಳು ಕಳೆದಿದೆ. ಹೀಗೆ 1 ತಿಂಗಳ ಅವಧಿಯಲ್ಲಿ, ತನ್ನ ಶತ್ರುಗಳನ್ನ ನಾಶ ಮಾಡಲು ಇಸ್ರೇಲ್ ಬಳಸಿರುವುದು ಬರೋಬ್ಬರಿ 30 ಸಾವಿರ ಟನ್ ಬಾಂಬ್‌ಗಳನ್ನು.












Click it and Unblock the Notifications