ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯದಲ್ಲಿ ಚೀನಾಗೆ ಕಾದಿದೆಯಾ ಕಂಟಕ? ತಜ್ಞರು ಹೇಳಿದ್ದೇನು?

|
Google Oneindia Kannada News

ಚೀನಾ ಎಂಬ ದೈತ್ಯ ರಾಷ್ಟ್ರಕ್ಕೆ ಟೈಂ ಸರಿಯಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಎಲ್ಲವೂ ಒಂದೊಂದಾಗಿ ಉಲ್ಟಾ ಹೊಡೆಯುತ್ತಿದೆ. ಅತ್ತ ನಂಬರ್ 1 ರಾಷ್ಟ್ರ ಅಮೆರಿಕಗೆ ಸೆಡ್ಡು ಹೊಡೆಯುವ ರೀತಿ ಬೆಳೆದು ನಿಂತಿರುವ ಚೀನಾ ಒಂದೊಂದೇ ಸಂಕಷ್ಟದಲ್ಲಿ ಸಿಲುಕುತ್ತಿದೆ. 'ಕೊರೊನಾ' ಚೀನಾದ ಸೃಷ್ಟಿ ಎಂದು ಇತ್ತೀಚೆಗೆ ಯುರೋಪ್‌ನ ಕೆಲ ತಜ್ಞರು ಆರೋಪ ಮಾಡಿದ್ದರು. ಇದಾದ ಬಳಿಕ ವ್ಯಾಕ್ಸಿನ್ ಮಾರಾಟದ ವಿಚಾರದಲ್ಲೂ ಚೀನಾ ಗೊಂದಲದಲ್ಲೇ ಒದ್ದಾಡುತ್ತಿದೆ. ಇದೆಲ್ಲಾ ಸಾಕು ಎನ್ನುವಷ್ಟರಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಚೀನಾ ಭವಿಷ್ಯಕ್ಕೆ ದೊಡ್ಡ ಅಪಾಯ ತಂದೊಡ್ಡಿದೆ.

ಹೀಗಾಗಿಯೇ ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್ ಪಕ್ಷ ಹೊಸದೊಂದು ನಿಯಮ ಜಾರಿಗೆ ತರಲು ಮುಂದಾಗಿದ್ದು, ಇನ್ಮುಂದೆ ಮದುವೆಯಾದ ಜೋಡಿ ಗರಿಷ್ಠ ಮೂವರು ಮಕ್ಕಳನ್ನು ಹೊಂದಬಹುದು ಎಂದಿದೆ. ಆದರೆ ಚೀನಾ ಇಷ್ಟು ಮಾತ್ರ ಮಾಡಿದರೆ ಸಾಲದು ಎನ್ನುತ್ತಿದ್ದಾರೆ ತಜ್ಞರು.

ಇದೀಗ ಚೀನಾ ಕೈಗೊಂಡ ಕ್ರಮದಿಂದ ಜನಸಂಖ್ಯೆ ಹಾಗೂ ವಯಸ್ಸಿನ ನಡುವೆ ಇರುವ ವ್ಯತ್ಯಾಸವೇನು ಸರಿಯಾಗದು. ಹೀಗಾಗಿ ಚೀನಾ ಜನಸಂಖ್ಯೆ ಕಾನೂನನ್ನೇ ಸಂಪೂರ್ಣ ತೆಗೆದು ಹಾಕಬೇಕಿದೆ ಎಂಬುದು ತಜ್ಞರ ಅಭಿಪ್ರಾಯ.

ತಕ್ಷಣ ಕ್ರಮ ಅಗತ್ಯ..!

ತಕ್ಷಣ ಕ್ರಮ ಅಗತ್ಯ..!

ಚೀನಾ ಏನೇ ಮಾಡುವುದಿದ್ದರೂ ಈಗಲೇ ಮಾಡಬೇಕಿದೆ, ಏಕೆಂದರೆ ಚೀನಾದ ಜನಸಂಖ್ಯೆಯಲ್ಲಿ ವಯಸ್ಸಿನ ನಡುವಿನ ವ್ಯತ್ಯಾಸ ಕೈಮೀರಿ ಹೋಗಿದೆ. ಹೀಗಾಗಿ ಕೂಡಲೇ ಜನಸಂಖ್ಯೆ ಕುರಿತು ಇರುವ ಕಾನೂನಿಗೆ ಅಲ್ಲಿನ ಸರ್ಕಾರ ಎಳ್ಳುನೀರು ಬಿಡಬೇಕು. ಇಲ್ಲವಾದರೆ ಭವಿಷ್ಯದಲ್ಲಿ ದೊಡ್ಡ ಸಂಕಷ್ಟವೇ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಚೀನಾ ಹೊಸ ಕಾನೂನು ಜಗತ್ತಿನಾದ್ಯಂತ ದೊಡ್ಡ ಸದ್ದು ಮಾಡುತ್ತಿದ್ದು, ಎಲ್ಲೆಲ್ಲೂ ಚರ್ಚೆಯ ವಿಷಯವಾಗಿದೆ. ಚೀನಾ ಜನರು ಹೊಸ ನಿಯಮದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

1980ರಿಂದ ಕಠಿಣ ಕಾನೂನು

1980ರಿಂದ ಕಠಿಣ ಕಾನೂನು

ಚೀನಾದಲ್ಲಿ ವಿಪರೀತವಾಗಿ ಜನಸಂಖ್ಯೆ ಏರುತ್ತಿತ್ತು. ಹೀಗಾಗಿಯೇ ಚೀನಾದಲ್ಲಿ ಜನಸಂಖ್ಯೆ ಬೆಳವಣಿಗೆಯನ್ನು ತಡೆಯಲು ಕಮ್ಯುನಿಸ್ಟ್ ಪಾರ್ಟಿ 1980ರಿಂದ ಜನನದ ಮಿತಿ ಜಾರಿಗೊಳಿಸಿತ್ತು. ಈ ಕಾನೂನಿನ ಪರಿಣಾಮ ಚೀನಾದಲ್ಲಿ 65 ವರ್ಷ ಮೇಲ್ಪಟ್ಟವರ ಸಂಖ್ಯೆ ಹೆಚ್ಚಾಗಿದ್ದು, ಸರಾಸರಿ ವಯಸ್ಸು ನಿಭಾಯಿಸುವುದು ಇದೀಗ ಕಷ್ಟವಾಗಿದೆ. ಹೀಗಾಗಿ ದುಡಿಯುವ ವರ್ಗ ಕೂಡ ಕುಸಿತ ಕಾಣುತ್ತಿರುವುದು ಚೀನಾಗೆ ಆತಂಕ ಹುಟ್ಟಿಸಿದೆ. ಇದೇ ಕಾರಣಕ್ಕೆ ಜನಸಂಖ್ಯೆ ಕಾನೂನಿನಲ್ಲಿ ಮಹತ್ವದ ಬದಲಾವಣೆ ಮಾಡಿ, ವಯಸ್ಸಿನ ಅಂತರ ಸರಿದೂಗಿಸಿ ಅಭಿವೃದ್ಧಿಗೆ ಪೂರಕವಾಗುವ ವಾತಾವರಣ ನಿರ್ಮಿಸುವುದು ಕಮ್ಯುನಿಸ್ಟ್ ಸರ್ಕಾರದ ಗುರಿಯಾಗಿದೆ.

ಕಾರ್ಮಿಕರ ಕೊರತೆ ಅಪಾಯ..?

ಕಾರ್ಮಿಕರ ಕೊರತೆ ಅಪಾಯ..?

ಯಾವುದೇ ದೇಶದ ಆರ್ಥಿಕತೆ ನಿರ್ಧಾರ ಆಗುವುದು ನೈಸರ್ಗಿಕ ಸಂಪತ್ತು ಹಾಗೂ ಶ್ರಮಿಕ ವರ್ಗದ ಮೇಲೆ. ಜನಸಂಖ್ಯೆ ಅಗತ್ಯಕ್ಕೆ ತಕ್ಕಷ್ಟು ಇರಬೇಕೆ ವಿನಃ, ಹೆಚ್ಚು-ಕಡಿಮೆಯಾದರೆ ಆರ್ಥಿಕತೆಗೆ ನೇರ ಪೆಟ್ಟು ಕೊಡಲಿದೆ. ಈ ಹಿಂದೆ ಚೀನಾದಲ್ಲಿ ಭಾರಿ ಪ್ರಮಾಣದಲ್ಲಿ ಜನಸಂಖ್ಯೆ ಏರಿಕೆ ಕಾಣುತ್ತಿತ್ತು. ಆದರೆ ಇದೀಗ ದಿಢೀರ್ ಕುಸಿತ ಕಾಣುತ್ತಿರುವುದು ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಹಾಗೂ ಬಳಕೆದಾರರ ಕೊರತೆ ಎದುರಾಗುವ ಮುನ್ಸೂಚನೆ ನೀಡುತ್ತಿದೆ. ಜಗತ್ತಿನ 2ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರಕ್ಕೆ ಜನಸಂಖ್ಯೆ ಕುಸಿತ ದೊಡ್ಡ ತಲೆನೋವು ತಂದೊಡ್ಡುತ್ತಿದೆ.

7ನೇ ರಾಷ್ಟ್ರೀಯ ಜನಗಣತಿ

7ನೇ ರಾಷ್ಟ್ರೀಯ ಜನಗಣತಿ

ಭಾರತದಲ್ಲಿ ನಡೆಯುವಂತೆ ಪ್ರತಿ 10 ವರ್ಷಕ್ಕೆ ಒಂದು ಬಾರಿ ಚೀನಾದಲ್ಲೂ ಜನಗಣತಿ ನಡೆಯುತ್ತದೆ. 7ನೇ ಜನಗಣತಿ ವರದಿಯನ್ನು ಬಿಡುಗಡೆ ಮಾಡಿರುವ ಚೀನಾ ಜನಸಂಖ್ಯೆ ಏರಿಳಿತದ ಬಗ್ಗೆ ಮಾಹಿತಿ ನೀಡಿದೆ. ಒಟ್ಟು 31 ಪ್ರಾಂತ್ಯಗಳು ಸೇರಿದಂತೆ ಚೀನಾದಲ್ಲಿ ವಾಸಿಸುತ್ತಿರುವ ಪ್ರಜೆಗಳ ವಿವರ ಇದರಲ್ಲಿದೆ. ಆದರೆ ಹಾಂಕಾಂಗ್‌ ಮತ್ತು ಮಕಾವೊ ಜನಸಂಖ್ಯೆ ವಿವರ ಈ ಜನಗಣತಿಯಲ್ಲಿ ಇಲ್ಲದಿರುವುದು ವಿಶೇಷ. ಚೀನಾದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 26 ಕೋಟಿಗೆ ಹೆಚ್ಚಳವಾಗಿದ್ದರೆ 15-59 ವರ್ಷದೊಳಗಿನವರ ಸಂಖ್ಯೆಯು 89.4 ಕೋಟಿ ಇದೆ. ಚೀನಾದಲ್ಲಿ ನಗರ ಪ್ರದೇಶಗಳಲ್ಲಿ 90 ಕೋಟಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 50 ಕೋಟಿ ಪ್ರಜೆಗಳು ವಾಸ ಮಾಡುತ್ತಿದ್ದಾರೆ.

English summary
Experts are advising that China should remove population law completely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X