‘ಅಮೆರಿಕ ಮಾಡಿದ್ರೆ ಸರಿ, ಚೀನಾ ಮಾಡಿದ್ರೆ ತಪ್ಪಾ?’

ಮಾಸ್ಕೋ: ರಷ್ಯಾ & ಉಕ್ರೇನ್ ವಾರ್ ಭೀಕರ ಸ್ವರೂಪ ಪಡೆಯುವ ಸಂದರ್ಭದಲ್ಲೇ ಪ್ರತಿಕಾರದ ಕೆಲಸಕ್ಕೂ ಅಮೆರಿಕ ಮತ್ತದರ ಮಿತ್ರ ಪಡೆಗಳು ಕೈಹಾಕಿವೆ ಎಂಬ ಆರೋಪ ಕೇಳಿಬಂದಿದೆ. ರಷ್ಯಾಗೆ ಶಸ್ತ್ರಾಸ್ತ್ರ ಪೂರೈಸಿದ ಕಾರಣಕ್ಕೆ ಚೀನಾ ಕಂಪನಿಗಳ ಮೇಲೆ ನಿರ್ಬಂಧ ಹೇರಲು ಐರೋಪ್ಯ ಒಕ್ಕೂಟ ನಿರ್ಧರಿಸಿದೆ ಎಂಬ ಸುದ್ದಿ ಶಾಕ್ ಕೊಟ್ಟಿದೆ. ಈ ನಿರ್ಧಾರದ ವಿರುದ್ಧ ಚೀನಾ ತೊಡೆತಟ್ಟಿದೆ!

ರಷ್ಯಾ ವಿರುದ್ಧ ಯುದ್ಧಕ್ಕೆ ಉಕ್ರೇನ್‌ಗೆ ಉಡುಗೊರೆ ಕೊಟ್ಟ ಅಮೆರಿಕ 3 ಲಕ್ಷ ಕೋಟಿ ನೆರವು ನೀಡಿದೆ. ಆದ್ರೆ ಚೀನಾ ಕಂಪನಿಗಳು ರಷ್ಯಾಗೆ ಸಹಾಯ ಮಾಡಿದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಯುರೋಪ್ ಒಕ್ಕೂಟ ಮುಂದಾಗಿದ್ದು ಯಾಕೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಜೊತೆಗೆ ನಮ್ಮ ಮೇಲೆ ಕ್ರಮ ಕೈಗೊಂಡರೆ ಪರಿಣಾಮ ನೆಟ್ಟಗಿರಲ್ಲ ಎಂಬ ಎಚ್ಚರಿಕೆ ಸಂದೇಶವನ್ನ ಐರೋಪ್ಯ ಒಕ್ಕೂಟಕ್ಕೆ ಚೀನಾ ರವಾನೆ ಮಾಡಿದೆ. ಹಾಗಾದ್ರೆ ಏನಿದು ತಿಕ್ಕಾಟ? ಮುಂದೆ ತಿಳಿಯೋಣ ಬನ್ನಿ.

European Union warns China based ammunition manufacturing companies

ಚೀನಾ-ರಷ್ಯಾ ದೋಸ್ತಿಗೆ ಬತ್ತಿ?

ರಷ್ಯಾ ಜಗತ್ತಿನಲ್ಲಿ ಹೆಚ್ಚಾಗಿ ನಂಬುವುದು ಭಾರತವನ್ನು ಹಾಗೇ ಭಾರತವನ್ನು ಬಿಟ್ಟರೆ ಚೀನಾ ಜೊತೆ ರಷ್ಯಾದ ಸಂಬಂಧ ಗಟ್ಟಿಯಾಗಿದೆ. ಅದರಲ್ಲೂ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಮಾನಸಿಕ ಬಲ ನೀಡುತ್ತಿದೆ ಚೀನಾ. ಆದ್ರೆ ಇದು ಅಮೆರಿಕ ಮತ್ತು ಯುರೋಪ್ ಒಕ್ಕೂಟದ ಕೆಂಗಣ್ಣಿಗೆ ಕಾರಣವಾಗಿದೆ. ಅದ್ರಲ್ಲೂ ಚೀನಾ ಕಂಪನಿಗಳು ರಷ್ಯಾಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸಹಕಾರ ನೀಡಿವೆ ಎಂಬ ಆರೋಪ ಕಿಚ್ಚು ಹಚ್ಚಿದೆ. ಚೀನಾ ಕಂಪನಿಗಳನ್ನ ಬ್ಯಾನ್ ಮಾಡಲು ಯುರೋಪ್ ಒಕ್ಕೂಟ ಯೋಜಿಸುತ್ತಿದೆ.

ಎಚ್ಚರಿಕೆ ಸಂದೇಶ ನೀಡಿದ ಚೀನಾ

ಯುರೋಪ್ ಒಕ್ಕೂಟ ಇಂತಹ ಎಚ್ಚರಿಕೆ ನೀಡುತ್ತಿದ್ದಂತೆ ಚೀನಾ ಕೂಡ ರೊಚ್ಚಿಗೆದ್ದಿದೆ. ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ವಾಂಗ್‌ ವೆನ್‌ಬಿನ್‌ ವಾರ್ನಿಂಗ್ ಕೊಟ್ಟಿದ್ದಾರೆ. 'ಈ ವಿಚಾರದಲ್ಲಿ ತಪ್ಪು ನಿರ್ಧಾರ ಬೇಡ ಎಂದು ಆಗ್ರಹಿಸುತ್ತೇವೆ. ಅಕಸ್ಮಾತ್ ತಪ್ಪು ನಿರ್ಧಾರ ಕೈಗೊಂಡರೆ ಚೀನಾ ಕೂಡಾ ಹಕ್ಕು & ಹಿತಾಸಕ್ತಿ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೆ' ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಯುರೋಪ್ ಒಕ್ಕೂಟದ ಸದಸ್ಯ ರಾಷ್ಟ್ರಗಳ ವಾರದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, 7 ಕಂಪನಿಗಳ ಪಟ್ಟಿ ಸಿದ್ಧವಾಗಿದೆ ಎನ್ನಲಾಗಿದೆ.

ಅಮೆರಿಕದ ₹3 ಲಕ್ಷ ಕೋಟಿ ನೆರವು!

ರಷ್ಯಾ ಒಂದನ್ನ ಮುಗಿಸಿದರೆ ಅಮೆರಿಕ ವಿರುದ್ಧ ಮಾತನಾಡುವ ಯಾವುದೇ ದೇಶ ಉಳಿಯಲಾರದು. ಚೀನಾಗೆ ಆಘಾತ ನೀಡಿ ತಾನೇ ಪವರ್‌ಫುಲ್ ಆಗೋಕೆ ಅಮೆರಿಕ ಇನ್ನಿಲ್ಲದ ತಂತ್ರ ನಡೆಸುತ್ತಿದೆ ಎಂಬ ಗಂಭೀರ ಆರೋಪವಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಅಮೆರಿಕ ನಡೆದುಕೊಳ್ಳುತ್ತಿದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ತನಗೇನೂ ಆಗದಿದ್ದರೂ ಮೂಗು ತೂರಿಸಿ, ಉಕ್ರೇನ್‌ಗೆ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಶಸ್ತ್ರಾಸ್ತ್ರಗಳನ್ನ ಇಲ್ಲಿತನಕ ದಾನ ನೀಡಿದೆ. ಇದು ಅಮೆರಿಕ & ರಷ್ಯಾ ಘರ್ಷಣೆಗೆ ದಾರಿ ಮಾಡಿಕೊಟ್ಟಿದೆ.

European Union warns China based ammunition manufacturing companies

ಉಕ್ರೇನ್‌ಗೆ ವಿನಾಶಕಾರಿ ವೆಪನ್ಸ್ ದಾನ!

ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ ಅಮೆರಿಕ. ದಾನ ಕೊಡುತ್ತಿರುವ ಶಸ್ತ್ರಾಸ್ತ್ರಗಳಲ್ಲಿ, ಆಕಾಶದಿಂದಲೇ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಹೈಡ್ರಾ-70 ರಾಕೆಟ್‌ಗಳು ಕೂಡ ಸೇರಿವೆ. ಜೊತೆಗೆ ಮಿಸೈಲ್, ಬಾಂಬ್, ಮದ್ದುಗುಂಡು ಹೀಗೆ ಲೆಕ್ಕವಿಲ್ಲದಷ್ಟು ಶಸ್ತ್ರಾಸ್ತ್ರ ಅಮೆರಿಕದಿಂದ ಉಕ್ರೇನ್ ಉಗ್ರಾಣ ಸೇರುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ರಷ್ಯಾ ಕೂಡ ರೊಚ್ಚಿಗೇಳುತ್ತಿದೆ, ಹಾಗೇ ಸೈಲೆಂಟ್ ಆಗಿ ಇರಿ ಅಂತಾ ಅಮೆರಿಕಗೆ ಎಚ್ಚರಿಸುತ್ತಿದೆ. ಆದರೆ ಚೀನಾ ವಿರುದ್ಧ ಮಾತ್ರ ಕ್ರಮವೇಕೆ ಎಂಬ ಚರ್ಚೆ ಶುರುವಾಗಿದೆ.

ಒಟ್ನಲ್ಲಿ ಯುರೋಪ್ ಒಕ್ಕೂಟದ ಕ್ರಮ ಇದೀಗ ಬಿರುಗಾಳಿ ಎಬ್ಬಿಸಿಬಿಟ್ಟಿದೆ. ಚೀನಾ ಈ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳುವ ಎಚ್ಚರಿಕೆ ನೀಡಿ ಸೇಡಿಗೆ ಸೇಡು ತೀರಿಸಿಕೊಳ್ಳುವುದು ಪಕ್ಕಾ ಎಂಬ ಮುನ್ಸೂಚನೆ ನೀಡಿದೆ. ಎಲ್ಲಾ ಬೆಳವಣಿಗೆ ಗಮನಿಸಿದರೆ ಚೀನಾ & ಯುರೋಪ್ ಒಕ್ಕೂಟದ ನಡುವೆ ಈ ವಿಚಾರ ಬತ್ತಿ ಇಡೋದು ಪಕ್ಕಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+