ರಷ್ಯಾ & ಪುಟಿನ್ ಬಗ್ಗೆ ಯುರೋಪ್ ಒಕ್ಕೂಟದ ಎಚ್ಚರಿಕೆಯ ಸಂದೇಶ!

ಬ್ರಸೆಲ್ಸ್‌: ವ್ಲಾದಿಮಿರ್ ಪುಟಿನ್ ಬಗ್ಗೆ ದಿನಕ್ಕೊಂದು ಮಾತು ಕೇಳಿಬರುತ್ತಿದೆ. ಅದರಲ್ಲೂ ರಷ್ಯಾ ಒಳಗೆ ಖಾಸಗಿ ಸೇನೆ ಹಚ್ಚಿದ ದಂಗೆಯ ಬೆಂಕಿ ನಂತರ ಪುಟಿನ್ ವೀಕ್ ಆಗಿದ್ದಾರಾ? ಎಂಬ ಅನುಮಾನ ದಟ್ಟವಾಗಿದೆ. ಇದೀಗ ಯುರೋಪ್ ಒಕ್ಕೂಟದ ಹೇಳಿಕೆ ಈ ಜ್ವಾಲೆಗೆ ಪೆಟ್ರೋಲ್ ಸುರಿದಂತಾಗಿದೆ. ಹಾಗಾದರೆ ಯುರೋಪ್ ಒಕ್ಕೂಟ ರಷ್ಯಾ ಮತ್ತು ಪುಟಿನ್ ಬಗ್ಗೆ ಕೊಟ್ಟ ಎಚ್ಚರಿಕೆ ಏನು? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಅಷ್ಟಕ್ಕೂ ಅಣ್ವಸ್ತ್ರ ಹೊಂದಿರುವ ರಷ್ಯಾ ವ್ಯಾಗ್ನರ್ ಗುಂಪು ಅಂದರೆ ಖಾಸಗಿ ಸೇನೆ ದಂಗೆ ನಂತರ ನಲುಗಿದೆ. ಈ ಬಗ್ಗೆ ಯುರೋಪ್ ಒಕ್ಕೂಟ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ಈ ಬೆಳವಣಿಗೆ ಮುಂದೆ ಕಂಟಕ ತರಬಲ್ಲದು ಎಂಬ ಎಚ್ಚರಿಕೆ ಕೊಟ್ಟಿದೆ. ವ್ಯಾಗ್ನರ್‌ ದಂಗೆಯು ದಶಕದಲ್ಲೇ ದೊಡ್ಡ ರಾಜಕೀಯ ಬಿಕ್ಕಟ್ಟನ್ನು ಉಂಟುಮಾಡಿದ್ದು, ಅಧ್ಯಕ್ಷ ಪುಟಿನ್‌ ದೌರ್ಬಲ್ಯ ಮಹಾನ್‌ ಗಂಡಾಂತರದ ಮುನ್ಸೂಚನೆ ಎಂದು ಯುರೋಪ್‌ ಒಕ್ಕೂಟದ ರಾಜತಾಂತ್ರಿಕರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಪ್ರಮುಖವಾಗಿ ಪರಮಾಣು ಅಸ್ತ್ರಗಳನ್ನು ಹೊಂದಿರುವ ದೇಶದಲ್ಲಿ ಇಂಥ ಬೆಳವಣಿಗೆ ಬಗ್ಗೆ ಯುರೋಪ್‌ನಲ್ಲಿ ಸಹಜವಾಗಿ ಭಯ ಹುಟ್ಟಿಕೊಂಡಿದೆ.

European Union warned about Russia situation after Wagner coup

ವ್ಲಾದಿಮಿರ್ ಪುಟಿನ್ ವೀಕ್ ಆಗಿದ್ದಾರಾ?

ಹೌದು, ಇಂತಹ ಚರ್ಚೆ ರಷ್ಯಾದ ಖಾಸಗಿ ಸೇನೆಯ ದಂಗೆ ಬಳಿಕ ಹುಟ್ಟಿಕೊಂಡಿದೆ. ಅದು ಅಂತಿಂತಹ ಪ್ರಶ್ನೆಯಲ್ಲ, ಏಕೆಂದರೆ ಅಮೆರಿಕ ಬಿಟ್ಟರೆ ರಷ್ಯಾ ಸೇನೆಯೇ ಜಗತ್ತಿನಲ್ಲಿ ಅತಿ ಪ್ರಭಾವಶಾಲಿ ಎನಿಸಿಕೊಂಡಿದೆ. ಆದರೆ ಇಂತಹ ದೇಶದ ಅಧ್ಯಕ್ಷರೇ ವೀಕ್ ಆಗಿದ್ದಾರಾ? ಎಂಬ ಪ್ರಶ್ನೆ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಮಾತನಾಡಿರುವ ಯುರೋಪ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥರಾದ ಜೋಸೆಫ್ ಬೊರೆಲ್ ಅವರು, 'ದುರ್ಬಲ ಪುಟಿನ್ ದೊಡ್ಡ ಅಪಾಯಕಾರಿ. ಹಾಗಾಗಿ, ಈ ಘಟನೆಯ ಪರಿಣಾಮದ ಬಗ್ಗೆ ನಮಗೆ ಇನ್ನೂ ಎಚ್ಚರಿಕೆ ಅಗತ್ಯ' ಎಂದಿದ್ದಾರೆ. ಹೀಗೆ ರಷ್ಯಾ ಸ್ಥಿತಿ ಈಗಲೂ ಸೂಕ್ಷ್ಮವಾಗಿರುವ ಬಗ್ಗೆ ಮುನ್ಸೂಚನೆ ಸಿಗುತ್ತಿದೆ.

'ದುರ್ಬಲ ರಷ್ಯಾ ಅಪಾಯಕಾರಿ!'

ತಮ್ಮ ಮಾತು ಮುಂದುವರಿಸಿದ ಬೊರೆಲ್, 'ಈವರೆಗೆ ರಷ್ಯಾವನ್ನು ಒಂದು ಬೆದರಿಕೆಯಾಗಿ ನೋಡಿದ್ದೆವು. ರಷ್ಯಾ ಬಹಳಷ್ಟು ಸದೃಢವಾಗಿತ್ತು & ಉಕ್ರೇನ್‌ ವಿರುದ್ಧ ಸಾಕಷ್ಟು ಬಲವನ್ನು ಬಳಸುತ್ತಿತ್ತು. ಈಗ ಆಂತರಿಕ ಅಸ್ಥಿರತೆ ಕಾರಣಕ್ಕಾಗಿ ಅದನ್ನ ಅಪಾಯವಾಗಿ ಪರಿಗಣಿಸಬೇಕು' ಎಂದಿದ್ದಾರೆ. ಅಲ್ಲದೆ ಉಕ್ರೇನ್‌ಗೆ ದೀರ್ಘಕಾಲದವರೆಗೆ ಶಸ್ತ್ರಾಸ್ತ್ರ ನೆರವು & ರಕ್ಷಣಾ ಪರಿಕರಗಳ ನೆರವು ನೀಡುವಂತೆ ಯುರೋಪ್‌ ಒಕ್ಕೂಟ ಸದಸ್ಯ ರಾಷ್ಟ್ರಗಳಿಗೆ ಜೋಸೆಪ್‌ ಬೊರೆಲ್ ಸಲಹೆ ಕೂಡ ಕೊಟ್ಟಿದ್ದಾರೆ.

4 ಸಾವಿರ ಕೋಟಿ ಕೊಟ್ಟ ಅಮೆರಿಕ!

ಅಮೆರಿಕ ಈಗ ಮತ್ತೊಂದು ಹಂತದ ನೆರವು ಎಂದು ಉಕ್ರೇನ್‌ಗೆ ಸುಮಾರು 500 ಮಿಲಿಯನ್ ಡಾಲರ್ ನೆರವು ನೀಡಿದೆ. ಇದನ್ನ ಭಾರತೀಯ ರೂಪಾಯಿ ಲೆಕ್ಕಕ್ಕೆ ಕನ್ವರ್ಟ್ ಮಾಡಿ ಹೇಳುವುದಾದರೆ, ಸುಮಾರು 4 ಸಾವಿರ ಕೋಟಿ ರೂಪಾಯಿ. ಇಷ್ಟೊಂದು ದೊಡ್ಡ ಮೊತ್ತದ ನೆರವನ್ನು ಉಕ್ರೇನ್‌ಗೆ ಘೋಷಿಸಿದೆ ಅಮೆರಿಕ. ರಷ್ಯಾ ಮತ್ತು ಉಕ್ರೇನ್ ಯುದ್ಧವು ಶುರುವಾಗಿ ಸುಮಾರು 500 ದಿನ ಕಳೆದಿದೆ. ಇದೇ ಹೊತ್ತಲ್ಲಿ ಅಮೆರಿಕ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 3 ಲಕ್ಷ ಕೋಟಿಗೂ ಹೆಚ್ಚು ನೆರವು ನೀಡಿದೆ. ಈ ಮೂಲಕ ರಷ್ಯಾಗೆ ಪರೋಕ್ಷವಾಗಿ ಸೆಡ್ಡು ಹೊಡೆದಿದೆ. ಈ ನಡುವೆ ಯುರೋಪ್ ಒಕ್ಕೂಟಕ್ಕೂ ನೆರವು ನೀಡುವಂತೆ ಸಲಹೆ ಕೇಳಿಬರುತ್ತಿದೆ.

European Union warned about Russia situation after Wagner coup

ಉಕ್ರೇನ್‌ಗೆ ನೆರವು ಕೊಟ್ಟಿದ್ದು ಏಕೆ?

ಅಷ್ಟಕ್ಕೂ ರಷ್ಯಾ ವಿರುದ್ಧ ಹೋರಾಡಲು ಇದೀಗ ಅಮೆರಿಕ 50ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನ ಒಳಗೊಂಡ ವಾಹನಗಳು, ವೈಮಾನಿಕ ರಕ್ಷಣಾ ವ್ಯವಸ್ಥಗೆ ಅಗತ್ಯ ದ್ರಾವಣವನ್ನೂ ಉಕ್ರೇನ್‌ಗೆ ಕಳುಹಿಸಲಿದೆ. ಉಕ್ರೇನ್ ಮೇಲೆ ರಷ್ಯಾ ಪಡೆಗಳು ಆಕ್ರಮಣ ಆರಂಭಿಸಿದ ನಂತರ ಅಮೆರಿಕ ಈವರೆಗೆ 41ನೇ ಬಾರಿ ಉಕ್ರೇನ್‌ಗೆ ನೆರವು ನೀಡಿದಂತಾಗುತ್ತದೆ. ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ರಷ್ಯಾ ಅಧ್ಯಕ್ಷ ಪುಟಿನ್ ಆಪ್ತರೇ ಈ ಮಾಹಿತಿ ನೀಡಿದ್ದರು. ಮುಂದಿನ 10 ವರ್ಷಗಳಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎಂದಿದ್ದರು. ಹೀಗೆ ಅಮೆರಿಕಗೆ ಕೂಡ ತನ್ನ ತಂತ್ರಗಳಲ್ಲಿ ಫ್ಲಾಪ್ ಆಗುತ್ತಿದ್ದಿದ್ದು ಗೊತ್ತಾಗಿದೆ. ಈ ಕಾರಣಕ್ಕೆ ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿ ಉಕ್ರೇನ್ ಪರ ನಿಲ್ಲುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+