ಸರ್ಚ್ ಇಂಜಿನ್ ತಾರತಮ್ಯ, ಗೂಗಲ್ ಸಂಸ್ಥೆಗೆ 17,400 ಕೋಟಿ ದಂಡ

ವಾಷಿಂಗ್ಟನ್, ಜೂನ್ 27: ಸರ್ಚ್ ಎಂಜಿನ್ ನಲ್ಲಿ ತಾರತಮ್ಯ ಧೋರಣೆ ತಳೆದ ಗೂಗಲ್ ಸಂಸ್ಥೆಗೆ ಯುರೋಪಿಯನ್ ಒಕ್ಕೂಟ ಬರೋಬ್ಬರಿ 2.7 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 17,400 ಕೋಟಿ ರೂಪಾಯಿ) ದಂಡ ವಿಧಿಸಿದೆ.

'ಗ್ರಾಹಕರಿಗೆ ನಿಖರ ಆಯ್ಕೆ'ಗಳನ್ನು ನೀಡಿಲ್ಲ ಎಂದು ಹೇಳಿ ಈ ದಂಡ ವಿಧಿಸಲಾಗಿದೆ. ಗೂಗಲ್ ನಲ್ಲಿ ಗ್ರಾಹಕರು ವಸ್ತುಗಳಿಗಾಗಿ ಹುಡುಕಾಟ ಮಾಡಿದಾಗ ಬೇರೆ ವೆಬ್ಸೈಟ್ ಗಳ ಬದಲಿಗೆ ತನ್ನದೇ ವೆಬ್ಸೈಟ್ ಗಳ ಲಿಂಕನ್ನು ಮೊದಲಿಗೆ ತೋರಿಸುತ್ತಿತ್ತು. ಈ ಮೂಲಕ ತನ್ನ ಉತ್ಪನ್ನಗಳನ್ನು ಕೊಳ್ಳುವಂತೆ ಪ್ರೇರೇಪಿಸಿ ಉಳಿದ ಕಂಪನಿಗಳಿಗೆ ನಷ್ಟ ಉಂಟು ಮಾಡಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

European Union slaps Google with record Rs. 17,400 crore fine

ಮುಂದಿನ 90 ದಿನಗಳೊಳಗೆ ಗೂಗಲ್ ತನ್ನ ನಿರ್ಧಾರ ಬದಲಿಸಬೇಕು. ಇಲ್ಲದಿದ್ದಲ್ಲಿ ಮತ್ತಷ್ಟು ದಂಡ ವಿಧಿಸಲಾಗುವುದು ಎಂದು ಯುರೋಪಿಯನ್ ಒಕ್ಕೂಟ ಗೂಗಲ್ ಗೆ ಖಡಕ್ ಎಚ್ಚರಿಕೆ ನೀಡಿದೆ.

ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೂಗಲ್ ತಾನು ಗ್ರಾಹಕರಿಗೆ ಮತ್ತು ಮಾರಾಟಗಾರರಿಗೆ ಉಪಯೋಗವಾಗುವಂತೆ ಜಾಹೀರಾತುಗಳನ್ನು ತೋರಿಸಲು ಯತ್ನಿಸುತ್ತಿದ್ದೆ ಎಂದು ಹೇಳಿದೆ.

ಈ ಹಿಂದೆ ಯುರೋಪಿಯನ್ ಒಕ್ಕೂಟದ ನಿಯಮಗಳನ್ನು ಮುರಿದ ಕಾರಣಕ್ಕೆ ಆ್ಯಪಲ್, ಇಂಟೆಲ್, ಫೇಸ್ಬುಕ್, ಅಮೆಜಾನ್ ಸೇರಿದಂತೆ ಹಲವು ಸಂಸ್ಥೆಗಳಿಗೆ ಇದೇ ರೀತಿ ಭಾರೀ ಮೊತ್ತದ ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+