ಉಕ್ರೇನ್ ಉಳಿಸಲು ಒಗ್ಗೂಡಿದ ಯುರೋಪ್ ಒಕ್ಕೂಟ, ಲಂಡನ್ ನೆಲದಲ್ಲಿ ಮಹತ್ವದ ಸಭೆ

ರಷ್ಯಾ & ಉಕ್ರೇನ್ ಯುದ್ಧ ಧಗಧಗ ಹೊತ್ತಿ ಉರಿಯುತ್ತಿದ್ದು, 3 ವರ್ಷ ಮುಗಿದರೂ ಯುದ್ಧ ನಿಲ್ಲುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಉಕ್ರೇನ್ ದೇಶವು ತನ್ನ ರಾಜಧಾನಿಯನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಇಂತಹ ಸಮಯದಲ್ಲೇ ಅಮೆರಿಕ ಕೂಡ ಉಕ್ರೇನ್ ಕೈಬಿಟ್ಟಿದೆ. ಪರಿಸ್ಥಿತಿ ಸೂಕ್ಷ್ಮವಾದ ಈ ಸಮಯದಲ್ಲೇ ಉಕ್ರೇನ್‌ನ ಉಳಿಸಲು ಒಗ್ಗೂಡಿದ ಯುರೋಪ್ ಒಕ್ಕೂಟದ ನಾಯಕರು ಮಹತ್ವದ ಸಭೆ ಆರಂಭಿಸಿದ್ದಾರೆ.

ಸದ್ಯ ಬ್ರಿಟನ್ ರಾಜಧಾನಿ ಲಂಡನ್ ನಗರದಲ್ಲಿ ಮಹತ್ವದ ಸಭೆ ಆರಂಭಿಸಿರುವ ಯುರೋಪ್ ನಾಯಕರು, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಬೇಕಾದ ತಯಾರಿ ಆರಂಭಿಸಿದ್ದಾರೆ. ಈ ಮೂಲಕ ಅಮೆರಿಕದ ಜೊತೆಯಲ್ಲೂ ಚರ್ಚೆಗಳು ನಡೆಯುತ್ತಿದ್ದು, ಯುದ್ಧಕ್ಕೆ ಇನ್ನು ಕೆಲವೇ ದಿನಗಳಲ್ಲಿ ಬ್ರೇಕ್ ಹಾಕುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಉಕ್ರೇನ್‌ಗೆ ಈ ಪರಿಸ್ಥಿತಿಯಲ್ಲಿ ಯುದ್ಧ ನಿಂತರೆ ಸಾಕು ಎನ್ನುವಂತೆ ಆಗಿದೆ. ಆದರೆ ತಾನು ಸೋತಿರುವ ಜಾಗಗಳು ವಾಪಸ್ ಬರಬೇಕು ಎಂಬ ಬೇಡಿಕೆಯನ್ನು ಉಕ್ರೇನ್ ಮುಂದಿಟ್ಟಿದೆ. ಹೀಗಿದ್ದಾಗ, ಪುಟಿನ್ ನೇತೃತ್ವದಲ್ಲಿ ರಷ್ಯಾ ಮಿಲಿಟರಿ ಬೇರೆಯದ್ದೇ ಪ್ಲಾನ್ ಮಾಡಿದೆ.

European Leaders Discuss Ukraine Crisis in London Talks

ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವುದು ಯಾವಾಗ?

ಈಗಿನ ಪರಿಸ್ಥಿತಿ ನೋಡಿದರೆ ಇನ್ನು ಕೆಲವೇ ದಿನಗಳಲ್ಲಿ ರಷ್ಯಾ & ಉಕ್ರೇನ್ ಯುದ್ಧ ಮುಗಿದು ಹೋಗುವ ಸಾಧ್ಯತೆ ದಟ್ಟವಾಗಿದೆ. ಇದೇ ಕಾರಣಕ್ಕೆ ಯುರೋಪ್ & ನ್ಯಾಟೋ ಒಕ್ಕೂಟದಲ್ಲಿ ಕೂಡ ಒಗ್ಗಟ್ಟು ಮೂಡಿಸಿ ಮಹತ್ವದ ಸಭೆ ನಡೆಸಲಾಗುತ್ತಿದೆ. ಈ ಮೂಲಕ ಯುದ್ಧ ನಿಲ್ಲಿಸಿ ಉಕ್ರೇನ್‌ನ ಕಾಪಾಡಲು ಯುರೋಪ್ ನಾಯಕರು ಶ್ರಮಿಸುತ್ತಿದ್ದಾರೆ. ಆದರೆ ಉಕ್ರೇನ್ ಇದೇ ರೀತಿ ಹಠ ಮುಂದುವರಿಸಿದ್ದೇ ಆದರೆ ಭವಿಷ್ಯದಲ್ಲಿ ಇನ್ನಷ್ಟು ಕಷ್ಟ ಎದುರಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+