Donald Trump: ಅಮೆರಿಕ ಅಧ್ಯಕ್ಷರಿಗೆ ಶಾಕ್ ಕೊಟ್ಟ ಯುರೋಪ್ ಒಕ್ಕೂಟ!

ಡೊನಾಲ್ಡ್ ಟ್ರಂಪ್ ತಮ್ಮ ವಿನಾಶಕ್ಕೆ ತಾವೇ ಗುಂಡಿ ತೋಡಿಕೊಳ್ಳುತ್ತಿದ್ದಾರೆ ಎಂಬ ಆರೋಪ & ಪ್ರತ್ಯಾರೋಪದ ನಡುವೆ ಮತ್ತೊಂದು ಪ್ರಮುಖ ಘಟನೆ ಅಮೆರಿಕಗೆ ಆಘಾತ ನೀಡುತ್ತಿದೆ. ಅಂದಹಾಗೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ತೆರಿಗೆ ಯುದ್ಧವನ್ನ ಸಾರಿದ್ದು, ಜಾಗತಿಕ ಮಟ್ಟದಲ್ಲೂ ಬಹುದೊಡ್ಡ ಕೋಲಾಹಲ ಸೃಷ್ಟಿಸಿದೆ. ಇಂತಹ ಸಮಯದಲ್ಲೇ ಅಮೆರಿಕ ಅಧ್ಯಕ್ಷರಿಗೆ ಶಾಕ್ ಕೊಟ್ಟ ಯುರೋಪ್ ಒಕ್ಕೂಟ ಮಾಡಿದ್ದು ಏನು ಗೊತ್ತೆ?

ಅಮೆರಿಕ & ಯುರೋಪ್ ಒಕ್ಕೂಟದ ನಡುವೆ ಅತ್ಯುತ್ತಮ ಬಾಂಧವ್ಯ ಇದ್ದು, ಈ ಎರಡೂ ಒಕ್ಕೂಟಗಳು ಒಟ್ಟಾಗಿಯೇ ಹೋಗುತ್ತಿವೆ. ಹೀಗಿದ್ದರೂ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲವೂ ಹಾಳಾಗಿ ಹೋಗುತ್ತಿದೆ, ಎಂಬ ಆರೋಪ ಕೇಳಿ ಬಂದಿದೆ. ಇಂತಹ ಸಂದಿಗ್ಧ ಸಮಯದಲ್ಲೇ ಸೇಡಿಗೆ ಸೇಡು ತೀರಿಸಿಕೊಂಡಿರುವ ಯುರೋಪಿಯನ್ ಒಕ್ಕೂಟ, ಅಮೆರಿಕದ ಕಡೆಯಿಂದ ಪ್ರಯೋಗ ಮಾಡಿದ್ದ ತೆರಿಗೆ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗ ಮಾಡಿದೆ. ಈ ಮೂಲಕ ಎರಡೂ ಒಕ್ಕೂಟಗಳ ನಡುವೆ ಟ್ಯಾಕ್ಸ್ ವಾರ್ ಶುರುವಾಗಿ ಘನಘೋರ ಸ್ಥಿತಿ ನಿರ್ಮಾಣ ಆಗಿದೆ.

EU Responds to Trump Tariffs with Measures on US Goods Worth USD 28 Billion

ಡೊನಾಲ್ಡ್ ಟ್ರಂಪ್‌ಗೆ ದೊಡ್ಡ ಆಘಾತ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಯುರೋಪ್ ಒಕ್ಕೂಟದ ದೇಶಗಳು ರವಾನೆ ಮಾಡುವ ಸರಕುಗಳ ಮೇಲೆ ಭಾರಿ ದೊಡ್ಡ ಮೊತ್ತದ ಟ್ಯಾಕ್ಸ್ ಹಾಕಲು ಮುಂದಾಗಿದ್ದರು. ಈ ಮೂಲಕ ಯುರೋಪ್ ಒಕ್ಕೂಟ ತನ್ನ ದೇಶದ ವಸ್ತುಗಳನ್ನು ಅಮೆರಿಕಗೆ ರಫ್ತು ಮಾಡೋಕೆ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಶೇಕಡಾ 25 ರಷ್ಟು ತೆರಿಗೆ ಹೇರಿಕೆ ಮಾಡಿರುವ ಅಮೆರಿಕದ ಕ್ರಮಕ್ಕೆ ಯುರೋಪಿಯನ್ ಯೂನಿಯನ್ ಸೇಡು ತೀರಿಸಿಕೊಂಡಿದ್ದು, ಹೀಗಾಗಿಯೇ ಇದೀಗ ಬರೋಬ್ಬರಿ 28 ಬಿಲಿಯನ್ ಡಾಲರ್ ವ್ಯವಹಾರದ ಮೇಲೆ ಕಲ್ಲು ಹಾಕಿದೆ.

ಸೇಡಿಗೆ ಸೇಡು ತೀರಿಸಿಕೊಂಡ ಯುರೋಪ್?

ಯುರೋಪ್ ಒಕ್ಕೂಟದ ರೀತಿಯೇ ಅಮೆರಿಕ ಕೂಡ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ವಸ್ತು ರಫ್ತು ಮಾಡುತ್ತದೆ. ಪ್ರತಿವರ್ಷ ಸುಮಾರು 28 ಬಿಲಿಯನ್ ಡಾಲರ್ ಮೊತ್ತದ ಸರಕುಗಳನ್ನು ಯುರೋಪ್ ಒಕ್ಕೂಟಕ್ಕೆ ರವಾನೆ ಮಾಡುತ್ತದೆ ಅಮೆರಿಕ. ಹೀಗಾಗಿ ಇದೀಗ ಅಮೆರಿಕದ ವಿರುದ್ಧ ರೊಚ್ಚಿಗೆದ್ದಿರುವ ಯುರೋಪ್ ಒಕ್ಕೂಟ ಮಹತ್ವದ ಕ್ರಮ ಕೈಗೊಂಡಿದೆ. ಅದರ ಪರಿಣಾಮ, 28 ಬಿಲಿಯನ್ ಡಾಲರ್ ಮೊತ್ತದ ಸರಕುಗಳ ಬೆಲೆ ಏರಿಕೆ ಕಾಣಲಿದೆ ಎನ್ನಲಾಗಿದೆ. ಮತ್ತೊಂದು ಕಡೆ ತಾನೇ ಶುರು ಮಾಡಿರುವ ಈ ತೆರಿಗೆ ಯುದ್ಧವನ್ನು ಅಮೆರಿಕ ತಾನಾಗಿಯೇ ನಿಲ್ಲಿಸುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+