Get Updates
Get notified of breaking news, exclusive insights, and must-see stories!

Epstein Files: ಜೆಫ್ರಿ ಎಪ್ಸ್ಟೀನ್ ಫೈಲ್: ಈ ದ್ವೀಪ ಲೈಂಗಿಕ ದೌರ್ಜನ್ಯಗಳ ಸ್ವರ್ಗ: ಉದೈಫಾ ಆನಕ್ಕಲ್ ಬರಹ

Epstein Files: ಈಚೆಗೆ ಬಿಡುಗಡೆಯಾಗಿರುವ ಎಪ್ಸ್ಟೀನ್ ಫೈಲ್ಸ್ (Epstein Files) ವಿಶ್ವದಾದ್ಯಂತ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಸಹ ಉಲ್ಲೇಖವಾಗಿರುವುದು ಭಾರೀ ಸಂಚಲನ ಮೂಡಿಸಿದೆ. ಭಾರತಕ್ಕೆ ಸಂಬಂಧಿಸಿದಂತೆ ಕೇಳಿ ಬಂದಿರುವ ಗಂಭೀರ ಆರೋಪವನ್ನು ಭಾರತವು ತಳ್ಳಿ ಹಾಕಿದೆ. ಎಪ್ಸ್ಟೀನ್ ಫೈಲ್ಸ್ (Epstein Files) ಹಾಗೂ ಲಿಟಲ್ ಸೇಂಟ್ ಜೇಮ್ಸ್ ದ್ವೀಪದ ಬಗ್ಗೆ ಹವ್ಯಾಸಿ ಬರಹಗಾರ ಉದೈಫಾ ಆನಕ್ಕಲ್ ಅವರ ಬರಹ ಇಲ್ಲಿದೆ.

ಲಿಟಲ್ ಸೇಂಟ್ ಜೇಮ್ಸ್‌ ಸುತ್ತಲೂ ತಾಳೆ ಮರಗಳಿಂದ ಕೂಡಿದ 75 ಎಕರೆ ವಿಸ್ತೀರ್ಣವಿರುವ ಅತಿ ಸುಂದರವಾದ ದ್ವೀಪ. ಅಲ್ಲೊಂದು ಸ್ವರ್ಣ ಲೇಪಿತ ಮುಕುಟವಿರುವ ದೊಡ್ಡವೊಂದು ಸಂಕೀರ್ಣ, ಜೊತೆಗೆ ಹಲವಾರು ಆಡಂಬರ ಕಟ್ಟಡಗಳು ಐಷಾರಾಮಿ ರೆಸಾರ್ಟ್ ,ಪ್ರವಾಸಿ ತಾಣಗಳು. ಈ ದ್ವೀಪದ ಮೌಲ್ಯ 63 ದಶ ಲಕ್ಷ ಡಾಲರ್! ಆದರೆ, ಇದು ಹೆಸರುವಾಸಿ ಆಡಂಬರಕ್ಕೊ ,ಐಷರಾಮಿಗೋ ಅಲ್ಲ ಬದಲಾಗಿ ಅಲ್ಲಿ ನಡೆದ ಲೈಂಗಿಕ ದೌರ್ಜನ್ಯ ಅಮಾನುಷ ಹಿಂಸೆಯ ಹೆಸರಲ್ಲಿ. ಹದಿ ಹರೆಯದ ಮಕ್ಕಳು, ಮಹಿಳೆಯರ, ಬಾಲಕರ ಮೇಲೆ ನಡೆದ ಲೈಂಗಿಕ, ದೈಹಿಕ ಅಕ್ರಮಗಳ ಹೆಸರಲ್ಲಿ. ಮನುಷ್ಯ ಮನಸ್ಸು ಹೆಪ್ಪುಗಟ್ಟುವಷ್ಟು ದೌರ್ಜನ್ಯದ ಕ್ರೂರತೆಗಳ ಹೆಸರಲ್ಲಿ ಶತ ಕೋಟಿಯ ಒಡೆಯನೊಬ್ಬನ ಎಣಿಸಲಸಾಧ್ಯವಾದ ದಾರುಣ ಕ್ರಿಮಿನಲ್ ಲೈಂಗಿಕ ಪ್ರಕರಣಗಳ ಹೆಸರಿನಲ್ಲಿ ಇದು ಖ್ಯಾತಿ ಗಳಿಸಿದೆ.

Epstein Files

ಅಮೆರಿಕದ ಅಧೀನದಲ್ಲಿರುವ ಕೆರಿಬಿಯನ್ ದ್ವೀಪ ಸಮೂಹಗಳ ವೆರ್ಜಿನ್ ಐಲೆಂಡ್ಸ್‌ನಲ್ಲಿದೆ ಈ ದ್ವೀಪ. ಹೊರಗಿನವರಿಗೆ ನಿರ್ಬಂಧವಿರುವ ಈ ದ್ವೀಪದ ಯಜಮಾನನ ಹೆಸರು ಜೆಫ್ರಿ ಎಪ್ಸ್ಟೀನ್. ಅನೇಕ ಶತ ಕೋಟ್ಯಾಧಿಪತಿಗಳ ಜೊತೆ ಸಂಬಂಧ ಇರಿಸಿಕೊಂಡಿದ್ದ ಅಮೆರಿಕಾದ ಕೋಟ್ಯಧಿಪತಿ, ತಾನು ನಡೆಸಿದ ಹಿಂಸೆಗಳು ಹೊರ ಜಗತ್ತಿಗೆ ಗೊತ್ತಾಗುವುದಕ್ಕಿಂತ ಮುಂಚೆ ಇದಾಗಿತ್ತು ಜೆಫ್ರಿಯ ವಿಳಾಸ. ಶಾಲಾ ಅಧ್ಯಾಪಕನಾಗಿ ವೃತ್ತಿ ಬದುಕು ಪ್ರಾರಂಭಿಸಿ ಬ್ಯಾಂಕಿಂಗ್ ಕ್ಷೇತ್ರದ ಮೂಲಕ ತನ್ನ ಬ್ಯುಸಿನೆಸ್ ಸಾಮ್ರಾಜ್ಯ ಸ್ಥಾಪಿಸಿ ಬೆಳೆಸಿದ ಎಪ್ಸ್ಟೀನ್. ಆದರೆ ತನ್ನ ಸಾಮ್ರಾಜ್ಯದ ಅಡಿಪಾಯ ಪಾಪಗಳ ಮೇಲೆ ಕಟ್ಟಲಾಗಿದೆ ಎಂಬುವುದು ಜಗತ್ತಿಗೆ ಅರಿವಾಗಿದ್ದು ಬಹಳ ತಡವಾಗಿಯಾಗಿತ್ತು.

1953 ಜನವರಿ 20ಕ್ಕೆ ನ್ಯೂಯಾರ್ಕಿನ ಬ್ರೂಕಿಲಿನಲ್ಲಿ ಸಾಮಾನ್ಯ ಯಹೂದಿ ಕುಟುಂಬದಲ್ಲಾಗಿತ್ತು ಜೆಫ್ರಿ ಎಡ್ವರ್ಡ್ ಎಪ್ಸ್ಟೀನ್ ಜನನ. 1974 ರಲ್ಲಿ ಮಾನ್ಹಟ್ಟನಿನ ಡಾಲ್ಟನ್ ಶಾಲೆಯಲ್ಲಿ ಪ್ರೌಢ ಮಕ್ಕಳಿಗೆ ಭೌತ, ಗಣಿತ ಪಾಠ ಮಾಡಿದ್ದ. ಇದೇ ಜೆಫ್ರಿಯ ಉದ್ಯೋಗದ ಪ್ರಾರಂಭದ ದಿನಗಳು. ಅಧ್ಯಾಪಕನಿಗೆ ಬೇಕಾದ ದಾಖಲೆಗಳು ಇಲ್ಲದಿದ್ದರೂ ವಿದ್ಯಾರ್ಥಿಗಳ ಮಧ್ಯೆ ಜೆಫ್ರಿ ಶೀಘ್ರದಲ್ಲಿ ಪರಿಚಿತನಾಗಿದ್ದ. ತನ್ನ ವಿದ್ಯಾರ್ಥಿಗಳಲ್ಲಿ ಗೆಳೆಯರಂತೆ ವರ್ತಿಸುವ ರೀತಿ ಅವನನ್ನು ವಿದ್ಯಾರ್ಥಿಗಳೆಡೆಯಲ್ಲಿ ಪ್ರಸಿದ್ಧಿಯೂ ಸ್ವೀಕಾರ್ಹನನ್ನಾಗಿ ಮಾಡಿತು. ಆದರೆ ಅರ್ಹತೆ ಕೊರತೆಯಿಂದ 1976ರಲ್ಲಿ ಎಪ್ಸ್ಟೀನಿಗೆ ಉದ್ಯೋಗ ನಷ್ಟ ಹೊಂದುವುದು, ಹದಿ ಹರೆಯದ ಮಕ್ಕಳ ದುರುಪಯೋಗವೂ ಇದಕ್ಕೆ ಕಾರಣ ಎಂದೂ ವಾದವಿದೆ.

ಅದ್ಯಾಗೂ ಅಧ್ಯಾಪಕ ವೃತ್ತಿ ಯಿಂದ ಹೊರನಡೆದ ಎಪ್ಸ್ಟೀನ್ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕೈ ಹಾಕುವನು, ಹೆಚ್ಚು ತಡ ಮಾಡದೆ 1981 ಆಗಸ್ಟ್‌ನಲ್ಲಿ ಸ್ವಂತವಾಗಿ inter continental asset ಎಂಬ ಫೈನಾನ್ಸ್ ಸಲಹಾ ಸಂಸ್ಥೆ ಹುಟ್ಟು ಹಾಕುವನು. ಮೋಸದಿಂದ ಕೂಡಿದ ದಲ್ಲಾಳಿಗಳು, ವಕೀಲರಿಂದ ಹಣ ಸಂಗ್ರಹಿಸಿ ವ್ಯವಹಾರರಿಗೆ ಒಪ್ಪಿಸುವ ಈ ಕೆಲಸ. ಜೆಫ್ರಿಗೆ ಒಳ್ಳೆಯ ಹೆಸರಿನೊಂದಿಗೆ ಪ್ರಸಿದ್ಧಿಯನ್ನೂ ಕೊಟ್ಟಿತು. ಈ ವೇಳೆಯಲ್ಲಾಗಿತ್ತು ಜೆಫ್ರಿಗೆ ಉನ್ನತ ಸ್ಥಾನದಲ್ಲಿರುವವರ ಜೊತೆ ಸಂಬಂಧ ಬೆಳೆಯಲು ಕಾರಣವಾಗಿದ್ದು. ನಂತರದ ದಿನಗಳಲ್ಲಿ ಅಮೆರಿಕಾದ ಕೋಟ್ಯಧಿಪತಿಗಳ ಪಟ್ಟಿಗೆ ಎಪ್ಸ್ಟೀನ್ ಯಾತ್ರೆ ವೇಗದಲ್ಲಾಗಿತ್ತು. ಅದರ ಹಿಂದಿರುವ ಭಯಾನಕ ಸತ್ಯಗಳ ಶೋಧನೆ ಮೈ ಜುಮ್ ಅನ್ನುವಂತಿತ್ತು.

ಮೊಟ್ಟಮೊದಲಿಗೆ ಎಪ್ಸ್ಟೀನ್ ವಿರುದ್ಧ ಮೊಕದ್ದಮೆ ದಾಖಲಾಗಿದ್ದು ಹದಿನಾಲ್ಕು ಹರೆಯದ ಹುಡುಗಿಯನ್ನು ಹಣದ ಆಮಿಷವಿತ್ತು ಲೈಂಗಿಕ ಕೃತ್ಯಕ್ಕೆ ಬಳಸಿದರು ಎಂಬ ಹುಡುಗಿಯ ಮಲತಾಯಿಯ ದೂರಿನ ಮೇಲಾಗಿತ್ತು. ಇದರ ವಿರುದ್ಧ 13 ತಿಂಗಳ ರಹಸ್ಯ ಕಾರ್ಯಾಚರಣೆಯ ನಂತರ ಪಾಲ್ಮ್ ಬೀಚ್ ಪೊಲೀಸರು FBI ಸಹಾಯ ಪಡೆದು ಉನ್ನತ ಮಟ್ಟದ ತನಿಖೆಗೆ ಕೈಗೆತ್ತಿಕೊಂಡಿದ್ದರು. ಅದಾಗಲೇ ಹದಿಹರೆಯದ ಹುಡುಗಿಯರು ಮಾತ್ರವಲ್ಲದೆ ಅನೇಕ ಸ್ತ್ರೀಗಳು, ಹುಡುಗರು ಎಪ್ಸ್ಟೀನ್ ವಿರುದ್ಧ ರಂಗಕ್ಕಿಳಿದಿದ್ದರು.

2006ರ ಮೇ ತಿಂಗಳಲ್ಲಿ5 ದೂರುದಾರರು 17 ದಾಖಲೆಗಳ ಸಮೇತ ಪಾಲ್ಮ್ ಬೀಚ್ ಪೊಲೀಸರು ಕೇಸ್ ಸ್ವೀಕರಿಸುವರು, ಜೆಫ್ರಿ ಎಪ್ಸ್ಟೀನ್ ಆರೋಪಿಯೆಂದು ವಾದಿಸಿ ವಶಕ್ಕೂ ಪಡೆದು ಜೈಲು ಸೇರುವನು. ತನ್ನ ಉನ್ನತ ಸಂಬಂಧ, ಆರ್ಥಿಕ ಶಕ್ತಿಯನ್ನು ಉಪಯೋಗಿಸಿ ಎಪ್ಸ್ಟೀನ್ ಕಠಿಣ ಶಿಕ್ಷೆಗಳಿಂದ ರಕ್ಷಿಸಿ ಕೊಳ್ಳುವನು. ಬರೀ 18 ತಿಂಗಳು ಮಾತ್ರವಾಗಿತ್ತು ಎಪ್ಸ್ಟೀನ್ ಅನುಭವಿಸಿದ ಶಿಕ್ಷೆ! ಆದರೆ ಲೈಂಗಿಕ ಕೃತ್ಯ ಆರೋಪದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆ ಹೊಂದಿಯೂ ಸಮಾನ ರೀತಿಯ ಕೃತ್ಯಗಳು ಎಪ್ಸ್ಟೀನ್ ಮುಂದುವರಿಸುವನು. ಹಿಂದಿಗಿಂತ ಹೆಚ್ಚು ಆರೋಪಗಳು ಎಪ್ಸ್ಟೀನ್ ವಿರುದ್ಧ ದಾಖಲಾಗುತ್ತಲೇ ಇದ್ದುವು.

2019 ರಲ್ಲಿ ಪುನಃ ಬಂಧನವಾದ ಎಪ್ಸ್ಟೀನ್ ಕೆಲವೇ ದಿನಗಳ ನಂತರ ಆತ್ಮಹತ್ಯೆಗೆ ಶರಣಾಗುವನು. ಸಹ ಖೈದಿಯ ಕೈಯಿಂದ ಹತ್ಯೆ ನಡೆಯಿತು ಎಂಬ ಹೇಳಿಕೆಯೂ ಇದೆ. ಆದರೆ ಜೆಫ್ರಿಯ ಮರಣ ತಾನು ನಡೆಸಿದ ಮೃಗೀಯ ಕೃತ್ಯಗಳಿಗೆ ಹಾಕಿದ ಕಡಿವಾಣ ಆಗಿರಲಿಲ್ಲ ಎಂಬುವದು ಈಗ ಅಮೆರಿಕಾಗೆ ಮನವರಿಕೆ ಆಗಿದೆ. ಒಂದೋ ಎರಡೂ ಅಲ್ಲ ಸಮಾಜದದಲ್ಲಿ ಉನ್ನತ ಸ್ಥಾನದಲ್ಲಿರುವ ಅನೇಕ ವ್ಯಕ್ತಿಗಳ ಚರಿತ್ರೆಯನ್ನಾಗಿದೆ FBI ಮೂರು ವರ್ಷಗಳಿಂದ ಕತ್ತಲಲ್ಲಿ ನಿಲ್ಲಿಸಿರುವುದು. ಬರೋಬ್ಬರಿ 30 ಲಕ್ಷ ಪುಟಗಳು, 1.8 ಲಕ್ಷ ಫೋಟೋ ಒಳಗೊಂಡ ದಾಖಲೆ ಪಟ್ಟಿ ಅದುವೇ Epstein Files.

ಪಟ್ಟಿಯಲ್ಲಿ ಬ್ರಿಟನ್ ರಾಜ ಕುಟುಂಬವಿದೆ. ಅರಬ್ ನಾಯಕರಿಂದ ಅಮೆರಿಕಾದ ಅಧ್ಯಕ್ಷರಿದ್ದಾರೆ. ರಾಜಕೀಯ ನಾಯಕರು, ಹಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾ ತಾರೆಯರೂ ಭಾಗಿಯಾಗಿರುವರು, ಪ್ರಸಿದ್ಧ ಸಂಗೀತಗಾರರು, ಸಾಹಿತಿಗಳು,ಶಾಸ್ತ್ರಜ್ಞರೂ ಇದ್ದಾರೆ. ಇತ್ತೀಚೆಗೆ ಹೊರಬಂದ ಎಪ್ಸ್ಟೀನ್ ಫೈಲಿನಲ್ಲಾಗಿತ್ತು ಈ ಹೆಸರುಗಳ ಮೇಲೆ ಬೆಳಕು ಚೆಲ್ಲಲು ಕಾರಣವಾಗಿದ್ದು, ಇದರಲ್ಲಿ ಸತ್ಯವೆಷ್ಟು ಸುಳ್ಳೆಷ್ಟು ಎಂಬುವದು ಇನ್ನೇನು ಪತ್ತೆ ಹಚ್ಚಬೇಕಾದುದು ಅನ್ವಷಣಾ ಉದ್ಯೋಗಿಗಳಿಗೆ ಸವಾಲಾಗಿದೆ ಕಾರಣ ಇದರಲ್ಲಿರುವ ಅನೇಕರು ಸೇರಿ ಎಪ್ಸ್ಟೀನ್ ಕೂಡ ಇಂದಿಗೆ ಜೀವಂತವಿಲ್ಲ.

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ದೀರ್ಘ ಅವಧಿಯ ಸಹಾಯಕನಾಗಿದ್ದ ದಗ್ಬಾನ್, ಆಸ್ಕರ್ ವಿಜೇತ ಹೋಲಿವುಡ್ ತಾರೆ ಲಿಯನರ್ಡೂ ಡಿ ಕಾಪ್ರಿಯೋ, ಬ್ರಿಟಿಷ್ ಬೌತ ಶಾಸ್ತ್ರಜ್ಞ ಸ್ಟಿಫನ್ ಹಾಕಿಗ್ಸ್, ಬ್ರಿಟನ್ ರಾಜ ಕುಟುಂಬದ ಪ್ರಿನ್ಸ್ ಆಂಡ್ರೆ, ಮೈಕಲ್ ಜಾಕ್ಸನ್,ಗೂಗಲ್ ಸಹ ಸ್ಥಾಪಕ ಸೆರ್ಗಿ ಬ್ರಿನ್, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜೋರ್ಜ್ ಬುಷ್, ಮಗ ಬುಷ್, ಮ್ಯಾಜಿಷಯನ್ ಡೇವಿಡ್ ಕಪರ್ ಫೀಲ್ಡ್, ಬಿಲಿಯನೇರ್ ಗ್ಲೇನ್ ಡುಗಿನ್, ಫ್ರೆಂಚ್ ಮಾಡೆಲಿಂಗ್ ಏಜೆಂಟ್ ಜೀ ಲೆಕ್ಬಿನಲ್, ಹಾರ್ವರ್ಡ್ ಪ್ರೊಫಸರ್ ಅಲ್ಲೆನ್, ಮಾಜಿ ಅಮೇರಿಕಾದ ಅಧ್ಯಕ್ಷ ಬರಾಕ್ ಓಬಾಮರ ನಿಕಟ ಸಹವರ್ತಿ ವಿಲಿಯಮ್ ಜೇಯ್ ಬರ್ನ್, ಭಾಷಾ ಪಂಡಿತ ಜೋನ್ ಚೋಸ್ಕಿ,ಹಾಲಿವುಡ್ ನಟಿ ಕ್ಯಾಮರೂನ್ ಡೇಟ್, ಆಸ್ಟ್ರೇಲಿಯ ನಟಿ ಕೇಟ್ ಬ್ಲಾಂಟೆಟ್, ಅಮೆರಿಕಾ ನಟ ಕೆವಿನ್, ಬ್ರಿಟನ್ ವ್ಯವಸಾಯ ದೊರೆ ರಿಚರ್ಡ್ ಬ್ಲಾನ್ಸನ್ ಮೊದಲಾದ ಜಗತ್ತಿನ ದೊಡ್ಡ ಕುಳಗಳ ದೊಡ್ಡ ಪಟ್ಟಿಯೇ ಇದೆ.

ಫೈಲಿನಲ್ಲಿ ಹೆಸರಿರುವ ಎಲ್ಲರೂ ಲೈಗಿಕ ಕಿರುಕುಳಕ್ಕೆ ಹೆಸರುವಾಸಿಯಾದವರಲ್ಲ. ಮೈ ನಡುಗಿಸುವ ಹಲವು ದೌರ್ಜನ್ಯಗಳ ದಂಡೇ ಇತ್ತು, ಇದೆಲ್ಲಕ್ಕೂ ವೇದಿಯಾದುದು ಲಿಟ್ಟಿಲ್ ಸೈನ್ಟ್ ಜೇಮ್ಸ್ ಎಂಬ ದ್ವೀಪವಾಗಿತ್ತು. ಅಪ್ರಾಪ್ತ ವಯಸ್ಸಿನ ಹೆಣ್ಣು, ಗಂಡು ಮಕ್ಕಳನ್ನು ಇಲ್ಲಿಗೆ ತಂದು ಕೂಡಿ ಹಾಕಿದ್ದನು, ಜೆಫ್ರಿ ಈ ದ್ವೀಪವನ್ನು ಖರೀದಿಸುವುದು 1998 ರಲ್ಲಿ, ತನ್ನ ವಾಸ ಸ್ಥಳಗಲ್ಲಿ ಪ್ರಮುಖವಾದುದು ಎಂಬುದಾಗಿ ಜೆಫ್ರಿ ಇದನ್ನು ಗುರುತಿಸಿ ಲಿಟ್ಟಿಲ್ ಸೈನ್ಟ್ ಜೇಮ್ಸ್ ಎಂಬ ನಾಮಕರಣ ಮಾಡಿದ್ದನು. ಒಂದು ಮೈನ್ ಹೌಸ್ ,ಮೂರು ಗೆಸ್ಟ್ ಹೌಸ್, ಕೆಲಸದಾಲುಗಳಿಗೆ ವಾಸಿಸಲು ಮನೆ, ನೀರು ಶುದ್ಧೀಕರಣ ಯೂನಿಟ್, ಹೆಲಿಪಾಡ್, ಬೊಟ್ ನಿಲ್ಲಿಸಲು ಡಾಕ್ ಇದೆಲ್ಲವಾಗಿತ್ತು ದ್ವೀಪಿನ ಅಂದಿನ ವ್ಯವಸ್ಥೆ. ಮೇಲಾಗಿ ಚತುರಾಕೃತ್ರಿಯ ಪೆಟ್ಟಿಗೆಯಂತಹ ಒಂದು ಕಟ್ಟಡದ ಮೇಲೆ ಗೊಮ್ಮಟದಾಕ್ರತಿಯ ಒಂದು ನಿರ್ಮಾಣವೂ ಅಲ್ಲಿತ್ತು, ಆದರೆ ಅದರ ಉಪಯೋಗ ಯಾವುದಕ್ಕೆoದು ಸ್ಪಷ್ಟವಲ್ಲ, ಕೆಲವರ ವಾದ ಯಾಹೋದಿ ಸಿನಗೋಗ್ ಎಂದಾಗಿದೆ.

ಹನ್ನೆರಡರಿಂದ ಹದಿನೇಳು ವಯಸ್ಸಿನ ಮಕ್ಕಳನ್ನು ವಿಮಾನ, ಬೋಟು ಮೂಲಕ ಜೆಫ್ರಿ ಇಲ್ಲಿಗೆ ಕರೆತಂದು ತನ್ನ ಸ್ನೇಹಿತರನ್ನು ಇಲ್ಲಿಗೆ ಕರೆಸುತ್ತಿದ್ದ .ತನ್ನ ವಶದಲ್ಲಿದ್ದ ಮಕ್ಕಳನ್ನು ಬಲವಂತದ ಲೈಂಗಿಕ ಕ್ರಿಯೆಗೆ ಪ್ರಚೋದಿಸುತಿದ್ದ. ನಿರ್ದಿಷ್ಟ ಕೋಣೆಗಳಲ್ಲಿ ಕ್ಯಾಮರಾಗಲಿಟ್ಟು ಎಲ್ಲವನ್ನೂ ಚಿತ್ರೀಕರಿಸಿ ಜೋಪಾನವಿರಿಸಿದ್ದ. ಇಲ್ಲಿಂದ ತಪ್ಪಿಸಿ ಕೊಳ್ಳುವುದು ಅಸಂಭವ್ಯವಾಗಿತ್ತು ಇನ್ನೇನು ತಪ್ಪಿಸಲು ಪ್ರಯತ್ನ ಪಟ್ಟ ಹಲವರನ್ನು ಹಿಡಿದು ಕಠಿಣ ಶಿಕ್ಷೆಗೆ ಗುರಿ ಮಾಡಲಾಗಿತ್ತು, ಕೆಲವರು ಕಣ್ಮರೆಯಾಗಿರುತ್ತಿದ್ದರು

ಎಪ್ಸ್ಟೀನ್ ಮತ್ತು ಸ್ನೇಹಿತರ ಲೈಂಗಿಕ ಕಿರುಕುಳಕ್ಕೆ ಬಲಿಯಾದ ರ್ಯಾಮ್ಸನ್ ಎಂಬ ಯುವತಿ ಈ ದ್ವೀಪವನ್ನುಕರೆದಿದ್ದು 'ಹೆಲ್' (ನರಕ)ಎಂಬುವುದಾಗಿತ್ತು. ಎಪ್ಸ್ಟೀನಿನ ಕಾಮುಕಿ ಗಿಲೆನ್ ಮ್ಯಾಕ್ಸ್ವೆಲ್ಲಿನ ಕ್ರೂರತೆಗಳನ್ನು ತಪ್ಪಿಸಿಕೊಂಡ ಬಲಿಪಶುಗಳು ನಂತರ ವಿವರಿಸದ್ದರು, ಎಪ್ಸ್ಟೀನಿನ ಕ್ರೂರತೆಗೆ ರಷಿಯನ್ ಮಾಡೆಲ್ ಒಬ್ಬಳು ಎರಡು ವರುಷ ಯಾತನೆ ಅನುಭವಿಸಿ ಆತ್ಮಹತ್ಯೆಯೂ ಮಾಡಿಕೊಂಡಿದ್ದು ಆಗ ಸುದ್ದಿಯಾಗಿತ್ತು.

ಬಿಲ್ ಕ್ಲಿಂಟನ್, ಸ್ಟೆಪನ್ ಹೊಕಿಂಗ್ಸ್, ಪ್ರಿನ್ಸ್ ಆಂಡ್ರು, ರಿಚರ್ಡ್ ಬ್ರನ್ಸನ್ ಮೊದಲಾದವರ ಮೇಲೆ ಗಂಭೀರ ಆರೋಪಗಳಾಗಿವೆ ನ್ಯಾಯಾಲಯದ ರೇಖೆಗಳಿಂದ ಹೊರಬಿದ್ದಿರುವುದು. ಆಂಡ್ರು ರಾಜಕುಮಾರ ಹಲವು ಸಲ ದ್ವೀಪಕ್ಕೆ ಭೇಟಿ ನೀಡಿ ಅಪ್ರಾಪ್ತ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಉಪಯೋಗಿಸಿದ್ದಾಗಿ ದೂರಿದೆ. ನ್ಯಾಯಾಲಯ ಕಡತಗಳಲ್ಲಿ 67 ಸಾರಿ ಆಂಡ್ರು ಹೆಸರು ಉಲ್ಲೇಖವಿದೆ. ಐವತ್ತು ಸಲ ಕ್ಲಿಂಟನ್ ಹೆಸರಿದೆ. ತನಗೆ ಅಪ್ರಾಪ್ತ ಹೆಣಮಕ್ಕಳ ಮೇಲೆ ಒಲವಿದೆ ಎಂಬುವುದಾಗಿ ಕ್ಲಿಂಟನ್ ಜೆಫ್ರಿಯಲ್ಲಿ ಹೇಳಿದುದಾಗಿ ಹುಡುಗಿಯೊಬ್ಬಳಲ್ಲಿ ಜೆಫ್ರಿ ಹೇಳಿದ್ದು ಚರ್ಚೆಯ ಕಾವು ಏರಿಸಿದೆ. ಅಧ್ಯಕ್ಷ ಸ್ಥಾನದಲ್ಲಿರುವಾಗ ಶ್ವೇತಭವನ ಅದ್ಯೋಗಿಯಾದ ಮೋನಿಕಾ ಲೆವೆಸ್ಕಿಯೊಟ್ಟಿಗೆ ಇದ್ದ ಸಂಭಂದ ಕಾರಣ ಇಂಬೀಚ್ ಆದ ವ್ಯಕ್ತಿಯಾಗಿದ್ದರು ಕ್ಲಿಂಟನ್ ಖ್ಯಾತ ಭೌತಶಾಸ್ತ್ರಜ್ಞ ಸ್ಟೆಪನ್ ಹಾಕಿಗ್ಸ್ 2006ರಲ್ಲಿ ಶಾಸ್ತ್ರ ಪಠಣ ಶಿಬಿರದ ಭಾಗವಾಗಿ ದ್ವೀಪ ಸಂದರ್ಶಿಸಿದ್ದು ಅಂದಿನ ಮಾಗಸಿನ್ ಒಂದರಲ್ಲಿ ಮೂಡಿತ್ತು. ಅಲ್ಲದೆ ಹಾಕಿಗ್ಸ್ ವಿರುದ್ಧ ಆರೋಪ ಹೋರಿಸಿದ ಹುಡುಗಿಯ ಸ್ನೇಹಿತಗೆ ಜೆಫ್ರಿ ಹಣದ ಆಮಿಷ ನೀಡಿ ಪ್ರಕರಣ ಹಿಂದಕ್ಕೆ ಪಡೆಯಲು ಕೊರಿಕೊಂಡಿದ್ದ.

ಆದರೆ ಡೊನಾಲ್ಡ್ ಟ್ರಂಪ್ ಹೆಸರಲ್ಲಿ ಲೈಂಗಿಕ ಆಪಾದನೆ ಕೇಸ್ ನ್ಯಾಯಾಲಯ ಕಡತಳಗಲ್ಲಿ ಕಾಣುವುದಿಲ್ಲ ಬದಲಾಗಿ ಜೆಫ್ರಿ ಜೊತಗೆ ಸಲುಗೆ ಇಟ್ಟು ಕೊಂಡಿದ್ದು ರೇಖೆಗಳಲ್ಲಿ ಪ್ರಸ್ತಾಪಿಸಿದೆ. ಹಿಂದೆ ಒಂದು ಸಂದರ್ಶನ ಒಂದರಲ್ಲಿ ಜೆಫ್ರಿಯನ್ನು ಟ್ರಂಪ್ ಬೆಲೆಯಿರಿಸಿದ್ದು ಅಲ್ಲದೆ ಹದಿನೈದು ವರ್ಷಗಳ ಸಂಭಂದ ತಮ್ಮ ಮಧ್ಯೆ ಇದೆಯೆಂದೂ ಜೆಫ್ರಿಗೆ ಸುಂದರಿಗಳೆಂದರೆ ಇಷ್ಟ ಎಂಬುವುದಾಗಿಯೂ ಹೇಳಿದ್ದರು.

ತನ್ನ ಹಣ, ಅಧಿಕಾರ ,ಉನ್ನತರ ಬ್ಲಾಕ್ಮೇಲ್ ವಿಡಿಯೋ ,ಪಟಗಳನ್ನಿಟ್ಟು ಜೆಫ್ರಿ ನಡೆಸಿದ ದೌರ್ಜನ್ಯಕ್ಕೆ ಲೆಕ್ಕವಿರಲಿಲ್ಲ. ಇನ್ನೂ ಹೊರ ಜಗತ್ತಿಗೆ ಗೊತ್ತಾಗದ ಅನೇಕ ನಿಗೂಢ ರಹಸ್ಯಗಲೂ ಇದರಲ್ಲಿವೆ.ಇದೊಂದು ಇಸ್ರೇಲ್ ರಹಸ್ಯ ಪದ್ಧತಿಯೆಂದೂ ಉಲ್ಲೇಖವಿದೆ. ಜಗತ್ತಿನ ಪ್ರಬಲ ನಾಯಕರನ್ನು ತಮ್ಮ ಕೈಯೋಳಗಿಡಲು ಇದು ಪ್ರಯೋಜನಕಾರಿಯಾಗಿತ್ತು ಎಂಬುವುದೂ ಇನ್ನೊಂದು ವಾದ. ಕೊನೆಯದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಸಹ ಫೈಲ್‌ನಲ್ಲಿ ಉಲ್ಲೇಖಿತವಾಗಿದೆ ಎನ್ನಲಾದ ವಿಷಯವು ದೇಶದಲ್ಲಿ ಹೊಸ ಚರ್ಚೆಗೂ ಕಾರಣವಾಗಿದೆ.

ಎಪ್ಸ್ಟೀನ್ ನರಕ ಮಾಡಿಟ್ಟ ಆ ದ್ವೀಪವನ್ನು ಜನರು 'ಪೀಡೋಫೈಲ್' ಎಂಬುವುದಾಗಿ ಹೆಸರಿಟ್ಟರು. ಎಪ್ಸ್ಟೀನ್ ಮರಣದ ನಂತರ ಈ ದ್ವೀಪಕ್ಕೂ ಶಾಪ ಮೊಕ್ಷ ಸಿಕ್ಕಿತು. 2023 ರಲ್ಲಿ ಶತಕೋಟ್ಯಧಿಪತಿ ಸ್ಟಿಫನ್ ಟಾಕೊಫಿನ ಬ್ಲಾಕ್ ಡೈಮಂಡ್ ಕ್ಯಾಪಿಟಲ್ ಇದನ್ನು 60 ದಶ ಲಕ್ಷ ಡಾಲರಿಗೆ ಖರೀದಿಸಿತು. ಹಣದ ಅಧಿಕ ಪಾಲನ್ನು ಎಪ್ಸ್ಟೀನಿನ ಬಲಿಪಶುಗಳಿಗೆ ನಷ್ಟ ಪರಿಹಾರವಾಗಿ ಕೊಟ್ಟಿದ್ದರು. ಐಷರಾಮಿ ರೆಸಾರ್ಟ್ ಆಗಿ ಈಗಲೂ ಲಿಟ್ಟಿಲ್ ಸೈನ್ಟ್ ಜೇಮ್ಸ್ ದ್ವೀಪ ತಲೆಯೆತ್ತಿ ನಿಂತಿದೆ.

ಉದೈಫಾ ಆನಕ್ಕಲ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+