ಫ್ರಾನ್ಸ್ ಚುನಾವಣೆ: ಪ್ರೇಮಿಗಳ ದೇಶಕ್ಕೆ ಅಪರೂಪದ ಪ್ರೇಮಿಯೇ ಅಧ್ಯಕ್ಷ

ಮ್ಯಾಕ್ರನ್ ವಯಸ್ಸು 39 ಆದರೆ ಅವರ ಪತ್ನಿ ಬ್ರಿಝಿತ್ ತ್ರೋನ್ಯಾ ವಯಸ್ಸು 64. ಬ್ರಿಝಿತ್ ತ್ರೋನ್ಯಾ ಮತ್ಯಾರೂ ಅಲ್ಲ, ಮ್ಯಾಕ್ರನ್ ಶಾಲೆಗೆ ಹೋಗುತ್ತಿದ್ದಾಗ ಅವರಿಗೆ ಪಾಠ ಮಾಡುತ್ತಿದ್ದ ಶಿಕ್ಷಕಿ.

ಫ್ರಾನ್ಸ್, ಮೇ 8: ಕುತೂಹಲದ ಕಣ್ಣುಗಳಿಗೆ ಆಹಾರವಾಗಿದ್ದ ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಎಲ್ಲರ ನಿರೀಕ್ಷೆಗಳನ್ನು ಮೀರಿ ರಾಜಕೀಯ ಹಿನ್ನಲೆಯ ಗಂಧ ಗಾಳಿಯೂ ಇಲ್ಲದ, ಅಪೂರ್ವ ಪ್ರೇಮಿ, ಯುವ ಮುಂದಾಲು ಇಮಾನುಯೆಲ್ ಮ್ಯಾಕ್ರನ್ ಹೊಸ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

39 ವರ್ಷದ ಮ್ಯಾಕ್ರನ್ 65 ಶೇಕಡಾ ಮತಗಳನ್ನು ಪಡೆದು ಬಲಪಂಥೀಯ ಧೋರಣೆ ಹೊಂದಿದ್ದ 'ಫ್ರಂಟ್ ನ್ಯಾಷನಲ್' ಪಕ್ಷದ ಮರೀನ್ ಲೀ ಪೆನ್ ವಿರುದ್ಧ ಭರ್ಜರಿ ಜಯ ಗಳಿಸಿದ್ದಾರೆ. ವಿಶೇವೆಂದರೆ ನೆಪೋಲಿಯನ್ ನಂತರ ಫ್ರಾನ್ಸ್ ದೇಶವನ್ನಾಳಲಿರುವ ಯುವ ನಾಯಕ ಎಂಬ ಬಿರುದಿಗೆ ಮ್ಯಾಕ್ರನ್ ಪಾತ್ರವಾಗಿದ್ದಾರೆ.

ವಿಶೇಷವೆಂದರೆ ಲೀ ಪೆನ್ ತಾವು ಜಯಶಾಲಿಯಾದರೆ ಫ್ರಾನ್ಸ್ ದೇಶವನ್ನು ಯುರೋಪಿಯನ್ ಯೂನಿಯನ್ ನಿಂದ ಹೊರ ತರುವುದಾಗಿ ಹೇಳಿದ್ದರು. ಆದರೆ ಯುರೋಪ್ ಒಕ್ಕೂಟದಲ್ಲಿ ಫ್ರಾನ್ಸ್ ಉಳಿದುಕೊಳ್ಳುವ ಪರವಾಗಿದ್ದ ಮ್ಯಾಕ್ರನ್ ಜಯಗಳಿಸಿದ್ದಾರೆ.

 ಒಂದೇ ವರ್ಷದಲ್ಲಿ ಅಧ್ಯಕ್ಷ

ಒಂದೇ ವರ್ಷದಲ್ಲಿ ಅಧ್ಯಕ್ಷ

ಒಂದು ರೀತಿಯಲ್ಲಿ ಮ್ಯಾಕ್ರನ್ ಗೆಲುವನ್ನು ದೆಹಲಿ ಚುನಾವಣೆಯಲ್ಲಿ ಗೆದ್ದ ಎಎಪಿಯ ಗೆಲುವಿಗೆ ಹೋಲಿಸಬಹುದು. ಮುಖ್ಯವಾಹಿನಿಯ ಪಕ್ಷಗಳನ್ನು ಬದಿಗೊತ್ತಿ ಕೇವಲ ಒಂದು ವರ್ಷದ ಹಿಂದೆ 'ಆಮ್ ಮಾರ್ಶ್' (En March - ನಡೆ ಮುಂದೆ) ಎಂಬ ಆಂದೋಲನ ಹುಟ್ಟು ಹಾಕಿ ಅವರಿವತ್ತು ಅಧ್ಯಕ್ಷೀಯ ಚುನಾವಣೆ ಗೆದ್ದಿದ್ದಾರೆ. ವಿಚಿತ್ರವೆಂದರೆ ಇದು ಚುನಾವಣೆಯಲ್ಲಿ ಮ್ಯಾಕ್ರನ್ ಮೊದಲ ಗೆಲುವೂ ಹೌದು. ಈ ಹಿಂದೆ ಅವರು ಗ್ರಾಮ ಪಂಚಾಯತ್ ಚುನಾವಣೆಗೂ ನಿಂತವರಲ್ಲ.

ಒಂದು ವರ್ಷದ ಹಿಂದೆ ಎನ್ ಮಾರ್ಚ್ ಆಂದೋಲನ ಹುಟ್ಟುಹಾಕಿದಾಗ , ಮ್ಯಾಕ್ರನ್ ಇನ್ನೂ ಯುವಕ, ರಾಜಕೀಯ ಅನುಭವ ಇಲ್ಲ ಎಂದೇ ಎಲ್ಲರೂ ಆಕ್ಷೇಪಿಸಿದ್ದರು. ಅದೇ ಮ್ಯಾಕ್ರನ್ ಇವತ್ತು ಫ್ರಾನ್ಸ್ ದೇಶದ ಯುವ ಅಧ್ಯಕ್ಷರಾಗಿ ಮೂಡಿ ಬಂದಿದ್ದಾರೆ.

 ಆರ್ಥಿಕ ಸಚಿವರಾಗಿದ್ದೇ ಹಿನ್ನಲೆ

ಆರ್ಥಿಕ ಸಚಿವರಾಗಿದ್ದೇ ಹಿನ್ನಲೆ

ಈ ಹಿಂದೆ ಎರಡು ಬಾರಿ ಅವರು ಫ್ರಾನ್ಸ್ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿದ್ದಾರೆ, ಆದರೆ ಎರಡೂ ಬಾರಿಯೂ ಅವರು ಚುನಾವಣೆಗೆ ನಿಂತಿರಲಿಲ್ಲ. ಇದೀಗ ನೇರ ಅಧ್ಯಕ್ಷೀಯ ಚುನಾವಣೆ ಗೆದ್ದು ಎಲ್ಲರ ಹುಬ್ಬೇರಿಸಿದ್ದಾರೆ ಮ್ಯಾಕ್ರನ್.

 ಯುರೋಪ್ ಒಕ್ಕೂಟ ನಿರಾಳ

ಯುರೋಪ್ ಒಕ್ಕೂಟ ನಿರಾಳ

ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಮಧ್ಯಮ ಪಂಥೀಯ ಧೋರಣೆ ಅನುಸರಿಸುವ ಮ್ಯಾಕ್ರನ್, "ಫ್ರಾನ್ಸ್ ನಲ್ಲಿ ಬೇರೂರಿರುವ ತಾರತಮ್ಯದ ವಿರುದ್ಧ ಹೋರಾಡುತ್ತೇನೆ," ಎಂದಿದ್ದಾರೆ. ಮಾತ್ರವಲ್ಲ "ಫ್ರಾನ್ಸ್ ಪ್ರಜೆಗಳು ಯುರೋಪ್ ಜತೆ ಸಂಬಂಧವನ್ನು ಪುನರ್ ಸ್ಥಾಪಿಸುವುದಾಗಿ," ಹೇಳಿದ್ದಾರೆ.

ಬ್ರಿಟನ್ (ಬ್ರೆಕ್ಸಿಟ್) ನಿರ್ಗಮನದ ನಂತರ ಡೋಲಾಯಮಾನವಾಗಿದ್ದ ಯುರೋಪ್ ಒಕ್ಕೂಟದ ಭವಿಷ್ಯ ಮ್ಯಾಕ್ರನ್ ಗೆಲುವಿನೊಂದಿಗೆ ಸುಭದ್ರವಾದಂತಾಗಿದೆ.

 ಅಪೂರ್ವ ಪ್ರೇಮಿ

ಅಪೂರ್ವ ಪ್ರೇಮಿ

ಹೇಳಿಕೇಳಿ ಫ್ರಾನ್ಸ್, ಅದರಲ್ಲೂ ರಾಜಧಾನಿ ಪ್ಯಾರಿಸ್ ಪ್ರೇಮಿಗಳ ನಗರ. ಇದೇ ದೇಶಕ್ಕೀಗ ಅಪೂರ್ವ ಪ್ರೇಮಿ ಅಧ್ಯಕ್ಷರೊಬ್ಬರು ಬಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸಿದ್ಧಾಂತಗಳಾಚೆಗೆ ಮ್ಯಾಕ್ರನ್ 'ಪ್ರೇಮ ಕಥೆ'ಯೂ ಸದ್ದು ಮಾಡಿತ್ತು.

ಕಾರಣ ಇಷ್ಟೆ; ಮ್ಯಾಕ್ರನ್ ವಯಸ್ಸು 39 ಆದರೆ ಅವರ ಪತ್ನಿ ಬ್ರಿಝಿತ್ ತ್ರೋನ್ಯಾ ವಯಸ್ಸು 64. ಬ್ರಿಝಿತ್ ತ್ರೋನ್ಯಾ ಮತ್ಯಾರೂ ಅಲ್ಲ ಮ್ಯಾಕ್ರನ್ ಶಾಲೆಗೆ ಹೋಗುತ್ತಿದ್ದಾಗ ಅವರಿಗೆ ಪಾಠ ಮಾಡುತ್ತಿದ್ದ ಶಿಕ್ಷಕಿ. ವಿದ್ಯಾರ್ಥಿ ಮತ್ತು ಟೀಚರ್ ನಡುವೆ ಪ್ರೀತಿ ಅಂಕುರಿಸಿತ್ತು. ಅವತ್ತಿಗೆ ಬ್ರಿಝಿತ್ ತ್ರೋನ್ಯಾಗೆ ಮದುವೆಯಾಗಿ ಮೂರು ಮಕ್ಕಳಿದ್ದರು. ಹೀಗಿದ್ದೂ ಹದಿಹರಯದ ಯುವಕನ ಜತೆ ಟೀಚರ್ ಪ್ರೀತಿ ಮುಂದುವರಿಯಿತು.

ತಮ್ಮ ನಡುವೆ 25 ವರ್ಷಗಳ ಅಂತರವಿದ್ದರೂ ಮುಂದೆ ಮ್ಯಾಕ್ರನ್ ಬ್ರಿಝಿತ್ ತ್ರೋನ್ಯಾರನ್ನೇ ಮದುವೆಯಾದರು.

'ಇವತ್ತು ನಾನೇನಾಗಿದ್ದೇನೋ ಅದಕ್ಕೆ ಟೀಚರ್ ಕಮ್ ನನ್ನ ವೈಫ್' ಕಾರಣ ಎನ್ನುತ್ತಾ ಪ್ರಚಾರ ನಡೆಸಿದವರು ಮ್ಯಾಕ್ರನ್; ಇವತ್ತವರು ಅಧ್ಯಕ್ಷರಾಗಿದ್ದಾರೆ.

 ಫ್ರಾನ್ಸ್ ಫಸ್ಟ್ ಗೆ ಬ್ರೇಕ್

ಫ್ರಾನ್ಸ್ ಫಸ್ಟ್ ಗೆ ಬ್ರೇಕ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾದರಿಯಲ್ಲಿ ಫ್ರಾನ್ಸ್ ಫಸ್ಟ್ ಮಂತ್ರ ಜಪಿಸಿದ್ದ ಮರಿನ್ ಲೀ ಪೆನ್ ಸೋತಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ನೀರಿನಂತರ ಹಣ ಖರ್ಚು ಮಾಡಿದ್ದ, ಜಾಗತೀಕರಣದ ವಿರುದ್ಧ ನಿಲುವುಗಳನ್ನು ಹೊಂದಿದ್ದ, 'ಫ್ರಾನ್ಸ್ ಫಸ್ಟ್' ಮಂತ್ರ ಜಪಿಸಿದ್ದ ಅವರ ಎಲ್ಲಾ ಸಿದ್ಧಾಂತಗಳೂ ಮ್ಯಾಕ್ರನ್ ಅಲೆಯ ಮುಂದೆ ಕೊಚ್ಚಿ ಹೋಗಿವೆ.

ಆದರೆ ನಿರೀಕ್ಷೆಗೂ ಮೀರಿ ಅವರು ಮತ ಗಳಿಸಿರುವುದರಿಂದ ಫ್ರೆಂಚ್ ರಾಜಕೀಯದಲ್ಲಿ ಪ್ರಮುಖ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳೂ ಅವರಿಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+