ಜಾನ್ಸನ್ & ಜಾನ್ಸನ್‌ ಬೂಸ್ಟರ್‌ ಡೋಸ್‌ಗೆ ಇಎಂಎ ಅನುಮತಿ ಸಿಗಲಿದೆಯೇ?

ಆಂಸ್ಟರ್ಡ್ಯಾಮ್, ನವೆಂಬರ್ 22; ಜಾನ್ಸನ್ & ಜಾನ್ಸನ್‌ನ ಒಂದು ಡೋಸ್ ಕೋವಿಡ್ ಬೂಸ್ಟರ್‌ ಲಸಿಕೆ ಅಧಿಕೃತಗೊಳಿಸಬೇಕೆ ಎಂದು ಮೌಲ್ಯ ಮಾಪನ ಮಾಡಲಾಗುತ್ತಿದೆ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಸೋಮವಾರ ಹೇಳಿದೆ.

ಕೋವಿಡ್ ಲಸಿಕೆ ಪಡೆದ 18 ಮತ್ತು ಅದಕ್ಕೂ ಮೇಲ್ಪಟ್ಟ ವಯೋಮಿತಿಯ ಜನರು ಲಸಿಕೆ ಪಡೆದ ಎರಡು ತಿಂಗಳ ಬಳಿಕ ಒಂದು ಡೋಸ್ ಬೂಸ್ಟರ್ ಲಸಿಕೆ ಪಡೆಯಲು ಅನುಮತಿ ನೀಡುವಂತೆ ಜಾನ್ಸನ್ & ಜಾನ್ಸನ್ ಪತ್ರ ಬರೆದಿದೆ.

ಈ ಹಿನ್ನಲೆಯಲ್ಲಿ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ(ಇಎಂಎ) ಸೋಮವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಯುರೋಪಿಯನ್ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಕುರಿತು ಎರಡು ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಇಎಂಎ ತಿಳಿಸಿದೆ.

 EMA Evaluating Johnson & Johnson Booster Doses

ಅಮೆರಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಸಿಡಿಸಿ) ಅಕ್ಟೋಬರ್ ತಿಂಗಳಿನಲ್ಲಿ ಜಾನ್ಸನ್ & ಜಾನ್ಸನ್ ಬೂಸ್ಟರ್ ಡೋಸ್ ನೀಡಲು ಹಸಿರು ನಿಶಾನೆ ತೋರಿಸಿತ್ತು. ಅಮೆರಿಕದಲ್ಲಿ ಮಾಡರ್ನಾ ಮತ್ತು ಜಾನ್ಸನ್‌ ಕೋವಿಡ್ 19 ಲಸಿಕೆಯ ಬೂಸ್ಟರ್ ಡೋಸ್ ನೀಡಲು ಶಿಫಾರಸು ಮಾಡಿತ್ತು.

ಅಕ್ಟೋಬರ್ ತಿಂಗಳಿನಲ್ಲಿ ಫೈಜರ್ ಲಸಿಕೆಯ ಬೂಸ್ಟರ್ ಡೋಸ್‌ಗೆ ಸಂಸ್ಥೆ ಅನುಮೋದನೆ ನೀಡಿತ್ತು. ಬೂಸ್ಟರ್ ಡೋಸ್ ಪಡೆಯಲು ಸಂಸ್ಥೆ ಶಿಬಿರಗಳನ್ನು ಆಯೋಜನೆ ಮಾಡಲಾಗಿತ್ತು. ಡೆಲ್ಟಾ ರೂಪಾಂತರದ ನಡುವೆಯೂ ತೀವ್ರ ರೋಗ, ಆಸ್ಪತ್ರೆ ದಾಖಲು ಮತ್ತು ಸಾವಿನ ಅಪಾಯ ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ಎಂದು ಸಿಡಿಸಿ ನಿರ್ದೇಶಕ ಡಾ. ರೋಚೆಲ್ ವಾಲೆನ್ಕ್ಸಿ ಹೇಳಿದ್ದಾರೆ.

ಜಾನ್ಸನ್ & ಜಾನ್ಸನ್‌ ಈ ಹಿಂದೆ ಒಂದು ದೊಡ್ಡ ಅಧ್ಯಯನದ ಫಲಿತಾಂಶಗಳನ್ನು ಪ್ರಸ್ತುತಪಡಿಸಿತ್ತು. ಎರಡು ಡೋಸ್‌ ಲಸಿಕೆ ತೆಗೆದುಕೊಂಡ ಆರು ತಿಂಗಳ ಬಳಿಕ ಬೂಸ್ಟರ್‌ ಡೋಸ್ ತೆಗೆದುಕೊಂಡರೆ ವೈರಸ್ ವಿರುದ್ಧದ ಹೋರಾಟಕ್ಕೆ ಮತ್ತಷ್ಟ ಬಲ ಸಿಗಲಿದೆ ಎಂದು ಹೇಳಿತ್ತು.

ಯುರೋಪಿಯನ್ ರಾಷ್ಟ್ರಗಳು 200 ಮಿಲಿಯನ್ ಡೋಸ್‌ ಜಾನ್ಸನ್‌ & ಜಾನ್ಸನ್‌ ಬೂಸ್ಟರ್‌ ಡೋಸ್‌ಗಳಿದೆ ಬೇಡಿಕೆ ಇಟ್ಟಿತ್ತು. ಆದರೆ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಬೂಸ್ಟರ್‌ ಡೋಸ್ ಲಸಿಕೆಗೆ ಅಂಗೀಕಾರ ನೀಡಿಲ್ಲ.

ನವೆಂಬರ್ 13ರಂದು ಪತ್ರಿಕಾಗೋಷ್ಠಿ ನಡೆಸಿದ್ದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟಡ್ರೋಸ್ ಅಧನಾಮ್ ಗೆಬ್ರೆಯೆಸಸ್, "ಶ್ರೀಮಂತ ರಾಷ್ಟ್ರಗಳಲ್ಲಿ ಬೂಸ್ಟರ್ ಹೆಸರಿನಲ್ಲಿ ನಡೆಯುತ್ತಿರುವ ಲಸಿಕೆಯ ಅಸಮಾನ ಹಂಚಿಕೆಯು ಒಂದು ಹಗರಣ, ಅದು ನಿಲ್ಲಬೇಕು" ಎಂದು ಹೇಳಿದ್ದರು.

"ಲಸಿಕೆ ನೀಡಿಕೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ದೇಶಗಳು ಬೂಸ್ಟರ್ ಡೋಸ್‌ಗಳನ್ನು ನೀಡುತ್ತಿರುವ ಹೊತ್ತಿನಲ್ಲಿ ಬಡ ದೇಶಗಳು ಲಸಿಕೆಗಾಗಿ ಇನ್ನೂ ಕಾಯುತ್ತಿವೆ" ಎಂದು ಬೇಸರ ವ್ಯಕ್ತಪಡಿಸಿದ್ದರು.

"ಆರೋಗ್ಯ ವಯಸ್ಕರಿಗೆ ಬೂಸ್ಟರ್‌ಗಳನ್ನು ನೀಡುವುದರಲ್ಲಿ ಅಥವ ಮಕ್ಕಳಿಗೆ ಲಸಿಕೆ ಹಾಕುವುದರಲ್ಲಿ ಅರ್ಥವಿಲ್ಲ. ಪ್ರಪಂಚದಾದ್ಯಂತ ಸಂಕಷ್ಟದಲ್ಲಿರುವ ಹಲವು ಗುಂಪುಗಳಿವೆ. ಅವರು ಲಸಿಕೆಗಾಗಿ ಇನ್ನೂ ಕಾಯುತ್ತಿದ್ದಾರೆ" ಎಂದು ತಿಳಿಸಿದ್ದರು.

"ಕಡಿಮೆ ಆದಾಯ ಹೊಂದಿರುವ ದೇಶಗಳಲ್ಲಿ ನಡೆಯುತ್ತಿರುವ ಪ್ರಾಥಮಿಕ ಹಂತದ ಲಸಿಕಾ ಕಾರ್ಯಕ್ರಮಕ್ಕಿಂತ ಆರುಪಟ್ಟು ಮಿಗಿಲಾಗಿ ಹಲವು ದೇಶಗಳಲ್ಲಿ ಬೂಸ್ಟರ್ ಅಭಿಯಾನ ನಡೆಯುತ್ತಿದೆ. ಇದೊಂದು ಹಗರಣ, ಇದು ನಿಲ್ಲಬೇಕು" ಎಂದು ಟಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದರು.

ಯುರೋಪಿಯನ್ ರಾಷ್ಟ್ರಗಳಲ್ಲಿ ಮಾತ್ರ ಬೂಸ್ಟರ್ ಡೋಸ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಲಸಿಕೆ ಪಡೆದ 2 ತಿಂಗಳು ಅಥವ ಆರು ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆದರೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂಬ ವರದಿಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+