70 Hours Work: 70 ಗಂಟೆ ಅಲ್ಲ 80 ಗಂಟೆ ಕೆಲಸ ಮಾಡಲು ಆಫರ್, ಸಂಬಳ ಎಷ್ಟು?
ಭಾರತದಲ್ಲಿ ಯುವಕ & ಯುವತಿಯರು ಕೈಗೆ ಸರಿಯಾಗಿ ಸಂಬಳವೇ ಬರದೆ, ಉತ್ತಮವಾಗಿ ಜೀವನ ನಡೆಸಲು ಆಗದೆ ಕೆಲಸದ ಒತ್ತಡದಲ್ಲಿ ಸಿಲುಕಿ ಜೀವ ಬಿಡುತ್ತಿದ್ದಾರೆ. ಇಂತಹ ಸಮಯ ಇದ್ದಾಗಲೇ ವಾರಕ್ಕೆ 70 ಗಂಟೆ ಕೆಲಸ ಮಾಡಿ ಎಂಬ ಸಲಹೆಯನ್ನ ಭಾರತದ ಖ್ಯಾತ ಖ್ಯಾತ ಉದ್ಯಮಿಗಳು ನೀಡುತ್ತಿದ್ದಾರೆ.
ಇಂತಹ ಸ್ಥಿತಿಯಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿ, 70 ಗಂಟೆ ಕೆಲಸ ಮಾಡಿದರೆ ನಾವು ಸತ್ತೇ ಹೋಗ್ತೀವಿ, ಅಂತಾ ಆಕ್ರೋಶ ಹೊರ ಹಾಕುತ್ತಿದ್ದಾರೆ ಭಾರತದ ಯುವಕ & ಯುವತಿಯರು. ಹೀಗಿದ್ದಾಗಲೇ ಇಲ್ಲೊಬ್ಬ ಮಹಾಶಯರು, ಬರೋಬ್ಬರಿ 80 ಗಂಟೆಗಳ ಕಾಲ ಕೆಲಸ ಮಾಡಿ ನೀವು ಅಂತಿದ್ದಾರೆ! ಹಂಗಾದ್ರೆ ಸಂಬಳ ಎಷ್ಟಿರುತ್ತೆ?

ಮನುಷ್ಯ 48 ಗಂಟೆ ಕೆಲಸ...
ಹೌದು, ವಾರಕ್ಕೆ ಒಬ್ಬ ಮನುಷ್ಯ 48 ಗಂಟೆಗಳ ಕಾಲ ಮಾತ್ರ ಕೆಲಸ ಮಾಡುವ ಶಕ್ತಿಯನ್ನ ಹೊಂದಿದ್ದಾನೆ. ಹೀಗೆ ವಾರಕ್ಕೆ ಮನುಷ್ಯ 48 ಗಂಟೆಗಳ ಕಾಲ ಕೆಲಸ ಮಾಡಿದರೆ ಮಾತ್ರ ಆ ವ್ಯಕ್ತಿಯ ಆರೋಗ್ಯ ಚನ್ನಾಗಿ ಇರಲು ಸಾಧ್ಯ. ಇದಕ್ಕಿಂತ ಹೆಚ್ಚಿನ ಕೆಲಸ ಮಾಡುತ್ತಾ ಸಾಗಿದರೆ ಅದು ಮುಂದೆ ಆತನ ಆರೋಗ್ಯದ ಮೇಲೆ ಬೇರೆ ಬೇರೆ ರೀತಿಯ ಪರಿಣಾಮ ಬೀರುತ್ತದೆ, ಎಂಬ ವಿಚಾರ ವೈಜ್ಞಾನಿಕ ಸಂಶೋಧನೆಗಳ ಮೂಲಕ ಸಾಬೀತು ಆಗಿದೆ. ಹೀಗಿದ್ದರೂ ಇಲ್ಲೊಬ್ಬರು ಮಾತ್ರ ವಾರಕ್ಕೆ 80 ಗಂಟೆ ಕೆಲಸ ಮಾಡುವವರು ಬೇಕು, ಸಂಬಳ ಮಾತ್ರ....
80 ಗಂಟೆ ಕೆಲಸಕ್ಕೆ ಸಂಬಳ ಎಷ್ಟು?
ವಾರಕ್ಕೆ 80 ಗಂಟೆ ಕೆಲಸ ಮಾಡಿದರೆ ಜೀವ ಉಳಿಯುತ್ತಾ? ಇಂತಹ ಪ್ರಶ್ನೆ ನಿಮ್ಮಲ್ಲಿ ಈಗಾಗಲೇ ಮೂಡಿರಬಹುದು. ಆದರೆ ಇಂತಹ ಮಹಾನ್ ಸಲಹೆ ನೀಡಿರುವುದು ಮಾತ್ರ ನಮ್ಮ ದೇಶದ ವ್ಯಕ್ತಿ ಅಲ್ಲ, ಈ ಹಿಂದೆ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರು 70 ಗಂಟೆ ಕೆಲಸ ಮಾಡಿ ಅಂತಾ ಹೇಳಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಮೆರಿಕದ ಖ್ಯಾತ ಉದ್ಯಮಿ ವಾರಕ್ಕೆ 80 ಗಂಟೆ ಕೆಲಸ ಮಾಡಿ ಅಂತಾ ಸಲಹೆ ನೀಡಿದ್ದಾರೆ. ಹಾಗಾದ್ರೆ ಈ ಕೆಲಸ ಮಾಡಿದ್ರೆ ಸಂಬಳ ಕೂಡ ಡಬಲ್ ಸಿಗಬಹುದು ಅಂತಾ ನೀವು ಅಂದುಕೊಂಡಿದ್ದೀರಾ?
80 ಗಂಟೆ ಕೆಲಸಕ್ಕೆ ಸಂಬಳ ಇಲ್ಲ!
ಹೌದು, ನೀವು ವಾರಕ್ಕೆ 80 ಗಂಟೆ ಬೆವರು ಹರಿಸಿ & ಜೀವ ಒತ್ತೆ ಇಟ್ಟು ಕೆಲಸ ಮಾಡಿದ್ರೂ ನಿಮಗೆ ಒಂದು ನಯಾಪೈಸೆ ಹಣ ಕೈಗೆ ಸಿಗುವುದಿಲ್ಲ. ಅಂದಹಾಗೆ ಇದು ಎಲಾನ್ ಮಸ್ಕ್ ಅವರ ಆಫರ್. ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ, ನೂತನವಾಗಿ ರಚಿಸಿರುವ ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಗೆ ಅಂದ್ರೆ 'DOGE'ಗೆ ಕೆಲಸ ಮಾಡಲು ಜನರು ಬೇಕಾಗಿದ್ದಾರಂತೆ. ಈ ರೀತಿ ಕೆಲಸ ಮಾಡಲು ಬಯಸುವವರು ವಾರಕ್ಕೆ 80 ಗಂಟೆ ದುಡಿಯಲು ಸಿದ್ಧರಾಗಿ ಇರಬೇಕು ಎಂಬ ರೂಲ್ಸ್ ಹಾಕಲಾಗಿದೆ. ಅಲ್ಲದೆ ಯಾವುದೇ ರೀತಿಯ ಸಂಬಳ ಕೂಡ ಈ ಕೆಲಸಕ್ಕಾಗಿ ಸಿಗುವುದಿಲ್ಲ!












Click it and Unblock the Notifications