Get Updates
Get notified of breaking news, exclusive insights, and must-see stories!

ವಿಶ್ವದಾದ್ಯಂತ ಟ್ವಿಟರ್ ಸರ್ವರ್ ಡೌನ್

Twitter: ಎಲಾನ್ ಮಸ್ಕ್ ಮಾಲೀಕತ್ವದ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಟ್ವಿಟರ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಪರದಾಡುತ್ತಿದ್ದಾರೆ.

ವೆಬ್‌ಸೈಟ್ ಹಾಗೂ ಮೊಬೈಲ್ ಆಪ್ ಎರಡೂ ಸರಿಯಾಗಿ ಲೋಡ್ ಆಗುತ್ತಿಲ್ಲ. ಅನೇಕ ಬಳಕೆದಾರರಿಗೆ ಕೇವಲ ಲೋಗೋ ಮಾತ್ರ ಕಾಣಿಸುತ್ತಿದ್ದು, ಕೆಲವರಿಗೆ "Something went wrong. Try reloading." ಎಂಬ ಸಂದೇಶ ಕಾಣಿಸುತ್ತಿದೆ.

Elon Musk-owned X has experienced a widespread outage Users in India and Worldwide Affected

ತಾಂತ್ರಿಕ ಸಮಸ್ಯೆಯಿಂದಾಗಿ ಸರ್ವರ್‌ ಡೌನ್‌ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಕಂಪನಿಯು ಈ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಆದ್ದರಿಂದ ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ವ್ಯಾಪಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತ ಸೇರಿ ವಿಶ್ವಾದ್ಯಂತ X ಡೌನ್ ಆಗಿದ್ದು, ಆಪ್, ವೆಬ್‌ಸೈಟ್ ಕೆಲಸ ಮಾಡುತ್ತಿಲ್ಲ. ಪರಿಣಾಮ ಬಳಕೆದಾರರು ಪರದಾಡುವಂತಾಗಿದೆ. ಮಾಹಿತಿ ಪ್ರಕಾರ, ಶೇಕಡ 67ರಷ್ಟು ಬಳಕೆದಾರರು ವೆಬ್‌ಸೈಟ್ ಮೂಲಕ ಲಾಗಿನ್ ಆಗುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರತಿಕ್ರಿಯಿಸಿ, ಎಕ್ಸ್ ಕಾರ್ಯನಿರ್ವಹಿಸದಿರುವುದರಿಂದ ದಿನನಿತ್ಯದ ಸಂವಹನಕ್ಕೆ ಅಡಚಣೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಕೆಲವರು ಕೆಲಸ ಸಂಬಂಧಿತ ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ಮನರಂಜನೆ, ಸುದ್ದಿ ಮತ್ತು ಟ್ರೆಂಡ್‌ಗಳಿಗಾಗಿ ಎಕ್ಸ್‌ ಮೇಲೆಯೇ ಅವಲಂಬಿತರಾಗಿರುವುದರಿಂದ ಇದರಿಂದ ತುಂಬಾ ಸಮಸ್ಯೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಸಂಸ್ಥೆಯಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಆದರೆ, ಕಂಪನಿಯ ತಾಂತ್ರಿಕ ತಂಡ ಸಮಸ್ಯೆ ಪತ್ತೆಹಚ್ಚಿ ಸರಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಕೆಲ ಗಂಟೆಗಳ ಒಳಗೆ ಸರಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗಮನಾರ್ಹವೆಂದರೆ, ಇತ್ತೀಚಿನ ತಿಂಗಳುಗಳಲ್ಲಿ ಎಕ್ಸ್‌ನಲ್ಲಿ ಈ ರೀತಿಯ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲಿವೆ. ಸಿಸ್ಟಮ್ ಅಪ್‌ಡೇಟ್‌ಗಳು, ಸರ್ವರ್ ನಿರ್ವಹಣೆ ಅಥವಾ ಆಂತರಿಕ ತಾಂತ್ರಿಕ ಬದಲಾವಣೆಗಳು ಇಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ. ಬಳಕೆದಾರರ ಸಂಖ್ಯೆ ದೊಡ್ಡ ಮಟ್ಟದಲ್ಲಿರುವುದರಿಂದ, ಸರ್ವರ್ ಡೌನ್‌ನಂತರ ಸಮಸ್ಯೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂದಿನ ದಿನಗಳಲ್ಲಿ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಸುದ್ದಿ, ವ್ಯಾಪಾರ, ಉದ್ಯೋಗ, ಸಾರ್ವಜನಿಕ ಚರ್ಚೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಮುಖ ವೇದಿಕೆಯಾಗಿವೆ. ಆದ್ದರಿಂದ ಎಕ್ಸ್‌ನಂತಹ ದೊಡ್ಡ ಸಾಮಾಜಿಕ ಜಾಲತಾಣದ ಸರ್ವರ್ ಡೌನ್ ಆಗುವುದು ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+