Donald Trump: ಡೊನಾಲ್ಡ್ ಟ್ರಂಪ್ ವಿರುದ್ಧ ತೊಡೆತಟ್ಟಿದ ಎಲಾನ್ ಮಸ್ಕ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ಉದ್ಯಮಿ ಎಲಾನ್ ಮಸ್ಕ್ ನಡುವೆ ಶುರುವಾಗಿದ್ದ ಜಗಳ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಡೊನಾಲ್ಡ್ ಟ್ರಂಪ್ ಜೊತೆಗೆ ಚನ್ನಾಗಿಯೇ ಇದ್ದ ಎಲಾನ್ ಮಸ್ಕ್ ದಿಢೀರ್ ಜಗಳ ಶುರು ಮಾಡಿದ್ದರು. ಹೀಗೆ ನೋಡ ನೋಡುತ್ತಲೇ ಎಲಾನ್ ಮಸ್ಕ್ ಹಾಗೂ ಟ್ರಂಪ್ ನಡುವೆ ಭಾರಿ ದೊಡ್ಡ ಜಗಳ ನಡೆದು ಹೋಗಿತ್ತು. ಇಬ್ಬರೂ ಈಗ ದೂರವಾಗಿರುವ ಸಮಯದಲ್ಲೇ ಮಸ್ಕ್ ಹೊಸ ವಿಷಯ ಹೇಳುತ್ತಿದ್ದಾರೆ!
ಡೊನಾಲ್ಡ್ ಟ್ರಂಪ್ & ಉದ್ಯಮಿ ಎಲಾನ್ ಮಸ್ಕ್ ನಡುವೆ ಶುರುವಾಗಿದ್ದ ಜಗಳ ಹೊಸ ತಲ್ಲಣ ಸೃಷ್ಟಿಸಿದೆ. ಹೌದು, ತೆರಿಗೆ ವಿನಾಯಿತಿ ಮತ್ತು ವೆಚ್ಚ ಕಡಿತ ಮಸೂದೆ ಅಂತಾ ಕೂಡ ಗುರುತಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಅವರ 'ಒನ್ ಬಿಗ್ ಬ್ಯೂಟಿಫುಲ್' ಬಿಲ್ ವಿರುದ್ಧ ಎಲಾನ್ ಮಸ್ಕ್ ಮಾತನಾಡಿದ್ದರು. ಆ ನಂತರ ಭಾರಿ ಕಿರಿಕ್ ಆಗಿ, ಇಬ್ಬರೂ ದೂರವಾಗಿದ್ದರು. ಹೀಗೆ ಇಬ್ಬರೂ ದೂರವಾದ ನಂತರ ದಿಢೀರ್ ಅಂತಾ, ಎಲಾನ್ ಮಸ್ಕ್ ಅಮೆರಿಕದಲ್ಲಿ ಹೊಸ ಪಕ್ಷವನ್ನೇ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಯಾವುದು ಮಸ್ಕ್ ಅವರ ಹೊಸ ಪಾರ್ಟಿ?

ರಾಜಕೀಯ ತಿಕ್ಕಾಟ ಬಲು ಜೋರಾಯ್ತು...
ಅಂದಹಾಗೆ ಇದೀಗ ಡೊನಾಲ್ಡ್ ಟ್ರಂಪ್ ಅವರು 'ಒನ್ ಬಿಗ್ ಬ್ಯೂಟಿಫುಲ್' ಮಸೂದೆ ಮೂಲಕ ಅಮೆರಿಕ ಸರ್ಕಾರಕ್ಕೆ ಸಾಕಷ್ಟು ಹಣ ಉಳಿಸಲು ಪ್ಲಾನ್ ಮಾಡಿದ್ದಾರೆ. ತೆರಿಗೆ ಕಡಿತ, ಮಿಲಿಟರಿ ಬಜೆಟ್, ರಕ್ಷಣಾ ಮತ್ತು ಇಂಧನ ಉತ್ಪಾದನೆಗೆ ಹೆಚ್ಚಿದ ಖರ್ಚು ಸೇರಿದಂತೆ ಅಮೆರಿಕದ ಪ್ರಜೆಗಳಿಗೆ ಹಲವು ಅನುಕೂಲ ಮಾಡೋಕೆ ಕೂಡ ಈ 'ಒನ್ ಬಿಗ್ ಬ್ಯೂಟಿಫುಲ್' ಸಹಾಯ ಮಾಡಲಿದೆ. ಇದರ ಜೊತೆಗೆ ಆರೋಗ್ಯ ಮತ್ತು ಪೌಷ್ಟಿಕಾಂಶ ಕಾರ್ಯಕ್ರಮಗಳಲ್ಲಿ ಅಮೆರಿಕ ಸರ್ಕಾರದ ಹಣ ವ್ಯಯವನ್ನು ಕಡಿಮೆ ಮಾಡಲು ಮುಂದಾಗಲಿದೆ. ಇದು ಎಲಾನ್ ಮಸ್ಕ್ ಅವರಿಗೆ ಇಷ್ಟವಾಗಲೇ ಇಲ್ಲ. ಹೀಗಾಗಿ ಶುರುವಾಗಿದ್ದ ಜಗಳ ಇದೀಗ ರಾಜಕೀಯ ಯುದ್ಧ ಸಾರುವ ಹಂತಕ್ಕೂ ಬಂದು ನಿಂತಿದೆ. ಈ ಕೋಪದಲ್ಲಿ ಮಸ್ಕ್ ಹೊಸ ಪಕ್ಷವನ್ನೇ ಘೋಷಿಸಿದ್ದಾರೆ.
ಉದ್ಯಮಿ ಎಲಾನ್ ಮಸ್ಕ್ ತಮ್ಮ ಹೊಸ ರಾಜಕೀಯ ಪಕ್ಷಕ್ಕೆ ಅಮೆರಿಕ ಪಾರ್ಟಿ ಅಂತಾ ಹೆಸರು ನೀಡಿದ್ದಾರೆ. ಈ ಬಗ್ಗೆ ಎಲಾನ್ ಮಸ್ಕ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಘೋಷಣೆ ಮಾಡುವ ಮೂಲಕ ಟ್ರಂಪ್ ವಿರುದ್ಧ ಮತ್ತೆ ತೊಡೆತಟ್ಟಿ ನಿಂತಿದ್ದಾರೆ. ಅಲ್ಲದೆ ಈ ವಿಚಾರ ಮುಂದಿನ ದಿನಗಳಲ್ಲಿ, ಮತ್ತಷ್ಟು ಕಿಚ್ಚು ಹೊತ್ತಿಸುವ ಬಗ್ಗೆ ಕೂಡ ಮುನ್ಸೂಚನೆ ನೀಡುತ್ತಿದೆ.












Click it and Unblock the Notifications